ರಾಷ್ಟ್ರಾದ್ಯಂತ ಕುತೂಹಲ ಕೆರಳಿಸಿದ್ದ ನವಲಗುಂದ ತಾಲೂಕು ಅಣ್ಣಿಗೇರಿಯಲ್ಲಿ ಪತ್ತೆಯಾದ ಸಾಲು ಸಾಲು ಮಾನವ ತಲೆ ಬುರುಡೆಗಳ ವೃತ್ತಾಂತ ಕೊನೆಗೂ ಬಯಲಾಗಿದೆ.೧೮೭೨-೭೩ರಲ್ಲಿ ಈ ನಾಡನ್ನು ಭೀಕರವಾಗಿ ಹುರಿದು ಮುಕ್ಕಿದ‘ಡೋಗಿ ಬರ’ದಲ್ಲಿ ಹೆಣವಾದವರ ಕುರುಹುಗಳಿವು. ಅಮೆರಿಕದ ಪ್ಲೋರಿಡಾ ರಾಜ್ಯದ ಮಿಯಾಮಿ ನಗರದ ಬೀಟಾ ಅನಾಲೆಟಿಕ್ ಕಂಪನಿಯ ‘ರೇಡಿಯೋ ಕಾರ್ಬನ್ ಲ್ಯಾಬ್’ಈ ಬುರುಡೆಗಳ ಕಾಲಮಾನ (ಸಿ-೧೪ಕಾರ್ಬನ್ ಡೇಟಿಂಗ್)ವನ್ನು ೧೮೧ವರ್ಷಗಳ ಪ್ರಾಚೀನ (೧೮೩೦ರಿಂದ ಈಚೆಗೆ)ಎಂದು ಖಚಿತಪಡಿಸಿರುವ ಹಿನ್ನಲೆ ಯಲ್ಲಿ ತಜ್ಞರು ಈ ನಿರ್ಧಾರಕ್ಕೆ ಬಂದಿದ್ದಾರೆ. ಮೈಸೂರು ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಡಾ.ಆರ್.ಗೋಪಾಲ್ ಕೈ ಸೇರಿದ್ದು,ಈ ಕಾಲಮಾನ ಮತ್ತು ಅಣ್ಣಿಗೇರಿಯಲ್ಲಿ ಉತ್ಖನನ ನಡೆಸಿದಾಗ ಲಭ್ಯವಾದ ಕುರುವುಗಳು ಮತ್ತು ಪ್ರಾದೇಶಿಕ ಇತಿಹಾಸವನ್ನು ತಾಳೆಹಾಕಿ ಇಂಥದೊಂದು ತಾತ್ಕಾಲಿಕ ನಿಲುವಿಗೆ ಬರಲಾಗಿದೆ. ’ಈ ಕಾಲಮಾನದಲ್ಲಿ ಬ್ರಿಟಿಷ್ ಆಳ್ವಿಕೆ ಇತ್ತು. ಆಗ ಯಾವುದೇ ಭೀಕರ ಯುದ್ಧಗಳು ಘಟಿಸಿಲ್ಲ.ಡೋಗಿ ಬರ ಮತ್ತು ಕೆಲವು ಸಾಂಕ್ರಾಮಿಕ ರೋಗಗಳು ಆವರಿಸಿ ಜನತೆಯನ್ನು ಸಾಮೂಹಿಕವಾಗಿ ಸಾವು-ನೋವಿಗೆ ಈಡು ಮಾಡಿದ ದಾಖಲೆಗಳಿವೆ.ಹಾಗಾಗಿ ಈ ಬುರುಡೆಗಳು ಯುದ್ಧ,ಹತ್ಯಾ ಕಾಂಡದ ಕುರುಹುಗಳಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.ಆದರೂ ಹಿರಿಯ ದಂತ ವೈದ್ಯ ಡಾ.ಅಶಿತಾಚಾರ್ಯ ವರದಿಯಲ್ಲಿ ಬುರುಡೆ-ಮತ್ತು ಎಲುವುಗಳಲ್ಲಿ ಆಳ ಗಾಯಗಳಾಗಿ ರುವುದು ಕಂಡು ಬಂದಿದ್ದರಿಂದ ಇನ್ನಷ್ಟು ತನಿಖೆ ಅಗತ್ಯ’ ಎಂದು ಡಾ.ಗೋಪಾಲ್ ತಿಳಿಸಿದರು. ಬರುಡೆ ವೃತ್ತಾಂತ ಬಯಲು:೨೮,ಆಗಸ್ಟ್ ೨೦೧೦ರಂದು ಅಣ್ಣಿಗೇರಿಯ ಹೊರ ವಲಯದ ತೆರೆದ ಗಟಾರು ದುರಸ್ಥಿ ವೇಳೆ ೬೦೧ತಲೆ ಬುರುಡೆಗಳು ಪತ್ತೆಯಾಗಿ ಜನತೆಯನ್ನು ಬೆಚ್ಚಿ ಬೀಳಿಸಿದ್ದವು.ಈ ಮೂಲಕ ಆದಿಕವಿ ಪಂಪನ ಜನ್ಮಭೂಮಿ ಅಣ್ಣಿಗೇರಿ ದೊಡ್ಡ ಸುದ್ದಿಯಾಗಿತ್ತು. ಮೊದಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಕಿಮ್ಸ್ ವೈದ್ಯರ ತಂಡ ಮೂರು ಬುರುಡೆಗಳನ್ನು ಹೈದರಾಬಾದಿನ ಪ್ರಯೋಗಾಲಯಕ್ಕೆ ಕಳುಹಿಸಿ ಕಾಲಮಾನದ ವರದಿ ಕೇಳಿತ್ತು.ಆದರೆ, ಅಲ್ಲಿ ಸಾಧ್ಯವಾಗಿರಲಿಲ್ಲ.ಬಳಿಕ ಧಾರವಾಡ ಜಿಲ್ಲಾಧಿಕಾರಿ ದರ್ಪಣ್ ಜೈನ್ ಒಂದು ಬುರುಡೆಯನ್ನು ಭುವನೇಶ್ವರ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅದು ‘೬೨೮ವರ್ಷಗಳ ಹಿಂದಿನ ಬುರುಡೆ’(೧೩೮೩)ಎಂದು ವರದಿ ನೀಡಿತ್ತು. Monday, 26 December 2011
ಅಣ್ಣಿಗೇರಿ ಬುರುಡೆಗಳಿಗೆ ೧೮೧ ವರ್ಷ ಆಯುಷ್ಯ
ರಾಷ್ಟ್ರಾದ್ಯಂತ ಕುತೂಹಲ ಕೆರಳಿಸಿದ್ದ ನವಲಗುಂದ ತಾಲೂಕು ಅಣ್ಣಿಗೇರಿಯಲ್ಲಿ ಪತ್ತೆಯಾದ ಸಾಲು ಸಾಲು ಮಾನವ ತಲೆ ಬುರುಡೆಗಳ ವೃತ್ತಾಂತ ಕೊನೆಗೂ ಬಯಲಾಗಿದೆ.೧೮೭೨-೭೩ರಲ್ಲಿ ಈ ನಾಡನ್ನು ಭೀಕರವಾಗಿ ಹುರಿದು ಮುಕ್ಕಿದ‘ಡೋಗಿ ಬರ’ದಲ್ಲಿ ಹೆಣವಾದವರ ಕುರುಹುಗಳಿವು. ಅಮೆರಿಕದ ಪ್ಲೋರಿಡಾ ರಾಜ್ಯದ ಮಿಯಾಮಿ ನಗರದ ಬೀಟಾ ಅನಾಲೆಟಿಕ್ ಕಂಪನಿಯ ‘ರೇಡಿಯೋ ಕಾರ್ಬನ್ ಲ್ಯಾಬ್’ಈ ಬುರುಡೆಗಳ ಕಾಲಮಾನ (ಸಿ-೧೪ಕಾರ್ಬನ್ ಡೇಟಿಂಗ್)ವನ್ನು ೧೮೧ವರ್ಷಗಳ ಪ್ರಾಚೀನ (೧೮೩೦ರಿಂದ ಈಚೆಗೆ)ಎಂದು ಖಚಿತಪಡಿಸಿರುವ ಹಿನ್ನಲೆ ಯಲ್ಲಿ ತಜ್ಞರು ಈ ನಿರ್ಧಾರಕ್ಕೆ ಬಂದಿದ್ದಾರೆ. ಮೈಸೂರು ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಡಾ.ಆರ್.ಗೋಪಾಲ್ ಕೈ ಸೇರಿದ್ದು,ಈ ಕಾಲಮಾನ ಮತ್ತು ಅಣ್ಣಿಗೇರಿಯಲ್ಲಿ ಉತ್ಖನನ ನಡೆಸಿದಾಗ ಲಭ್ಯವಾದ ಕುರುವುಗಳು ಮತ್ತು ಪ್ರಾದೇಶಿಕ ಇತಿಹಾಸವನ್ನು ತಾಳೆಹಾಕಿ ಇಂಥದೊಂದು ತಾತ್ಕಾಲಿಕ ನಿಲುವಿಗೆ ಬರಲಾಗಿದೆ. ’ಈ ಕಾಲಮಾನದಲ್ಲಿ ಬ್ರಿಟಿಷ್ ಆಳ್ವಿಕೆ ಇತ್ತು. ಆಗ ಯಾವುದೇ ಭೀಕರ ಯುದ್ಧಗಳು ಘಟಿಸಿಲ್ಲ.ಡೋಗಿ ಬರ ಮತ್ತು ಕೆಲವು ಸಾಂಕ್ರಾಮಿಕ ರೋಗಗಳು ಆವರಿಸಿ ಜನತೆಯನ್ನು ಸಾಮೂಹಿಕವಾಗಿ ಸಾವು-ನೋವಿಗೆ ಈಡು ಮಾಡಿದ ದಾಖಲೆಗಳಿವೆ.ಹಾಗಾಗಿ ಈ ಬುರುಡೆಗಳು ಯುದ್ಧ,ಹತ್ಯಾ ಕಾಂಡದ ಕುರುಹುಗಳಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.ಆದರೂ ಹಿರಿಯ ದಂತ ವೈದ್ಯ ಡಾ.ಅಶಿತಾಚಾರ್ಯ ವರದಿಯಲ್ಲಿ ಬುರುಡೆ-ಮತ್ತು ಎಲುವುಗಳಲ್ಲಿ ಆಳ ಗಾಯಗಳಾಗಿ ರುವುದು ಕಂಡು ಬಂದಿದ್ದರಿಂದ ಇನ್ನಷ್ಟು ತನಿಖೆ ಅಗತ್ಯ’ ಎಂದು ಡಾ.ಗೋಪಾಲ್ ತಿಳಿಸಿದರು. ಬರುಡೆ ವೃತ್ತಾಂತ ಬಯಲು:೨೮,ಆಗಸ್ಟ್ ೨೦೧೦ರಂದು ಅಣ್ಣಿಗೇರಿಯ ಹೊರ ವಲಯದ ತೆರೆದ ಗಟಾರು ದುರಸ್ಥಿ ವೇಳೆ ೬೦೧ತಲೆ ಬುರುಡೆಗಳು ಪತ್ತೆಯಾಗಿ ಜನತೆಯನ್ನು ಬೆಚ್ಚಿ ಬೀಳಿಸಿದ್ದವು.ಈ ಮೂಲಕ ಆದಿಕವಿ ಪಂಪನ ಜನ್ಮಭೂಮಿ ಅಣ್ಣಿಗೇರಿ ದೊಡ್ಡ ಸುದ್ದಿಯಾಗಿತ್ತು. ಮೊದಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಕಿಮ್ಸ್ ವೈದ್ಯರ ತಂಡ ಮೂರು ಬುರುಡೆಗಳನ್ನು ಹೈದರಾಬಾದಿನ ಪ್ರಯೋಗಾಲಯಕ್ಕೆ ಕಳುಹಿಸಿ ಕಾಲಮಾನದ ವರದಿ ಕೇಳಿತ್ತು.ಆದರೆ, ಅಲ್ಲಿ ಸಾಧ್ಯವಾಗಿರಲಿಲ್ಲ.ಬಳಿಕ ಧಾರವಾಡ ಜಿಲ್ಲಾಧಿಕಾರಿ ದರ್ಪಣ್ ಜೈನ್ ಒಂದು ಬುರುಡೆಯನ್ನು ಭುವನೇಶ್ವರ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅದು ‘೬೨೮ವರ್ಷಗಳ ಹಿಂದಿನ ಬುರುಡೆ’(೧೩೮೩)ಎಂದು ವರದಿ ನೀಡಿತ್ತು.
Subscribe to:
Post Comments (Atom)
No comments:
Post a Comment