ಕನಕಪುರ ಪಟ್ಟಣಕ್ಕೆ ಉಪನಗರ ಪಟ್ಟ ಪ್ರಾಪ್ತಿ

ಪ್ರಸ್ತುತ ಕನಕಪುರ ಪಟ್ಟಣ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿರುವ ಕನಕಪುರವನ್ನು ಇನ್ನು ಮುಂದೆ ’ಕನಕಪುರ ಉಪನಗರ’ ಎಂದು ಕರೆಯಬೇಕಾಗುತ್ತದೆ.ಹೌದು, ದೇಶದ ಮಹಾನಗರಗಳ ಸಮೀಪದಲ್ಲಿರುವ ಪಟ್ಟಣಗಳನ್ನು ಉಪನಗರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಯೋಜನೆಯೊಂದನ್ನು ಹಾಕಿಕೊಂಡಿದೆ. ಪ್ರಾಯೋಗಿಕವಾಗಿ ದೇಶದ ೬ ಪಟ್ಟಣಗಳಲ್ಲಿ ಜಾರಿಗೊಳ್ಳಲಿರುವ ಈ ಯೋಜನೆಗೆ ಬೆಂಗಳೂರಿಗೆ ಸಮೀಪವಿರುವ ಕನಕಪುರ ಪಟ್ಟಣವನ್ನ ಆಯ್ಕೆ ಮಾಡಲಾಗಿದೆ.ಕೇಂದ್ರ ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವ ಸೌಗತಾ ರಾಯ್ ಅವರು ಲೋಕಸಭೆಗೆ ಈ ವಿಷಯ ತಿಳಿಸಿದ್ದಾರೆ. ಯೋಜನೆ ಪ್ರಾಯೋಗಿಕವಾಗಿ ಕನಕಪುರದ ಜತೆಗೆ ತಮಿಳುನಾಡಿನ ಶ್ರೀಪೆರಂಬದೂರು, ಆಂಧ್ರದ ವಿಕರಾಬಾದ್, ಗುಜರಾತಿನ ಸಾನಂದ್, ಹರಿಯಾಣಾದ ಸೋನೆಪಥ್ ಮತ್ತು ಮಹಾರಾಷ್ಟ್ರದ ವಸೈವಿರಾರ್ ಪಟ್ಟಣಗಳಿಗೆ ಅನ್ವಯವಾಗಲಿವೆ.ಯೋಜನೆಯ ಮೂಲಕ ಈ ಉಪನಗರಗಳ ಅಭಿವೃದ್ಧಿಯ ವಿಸ್ತ್ರತ ಯೋಜನೆ ರೂಪುಗೊಳ್ಳಲಿದೆ. ಈ ಪಟ್ಟಣಗಳಲ್ಲಿ ಇ-ಗವರ್ನೆನ್ಸ್ ಅಳವಡಿಕೆ, ಕಂದಾಯ ವಸೂಲಿ, ನೀರಿನ ಲೆಕ್ಕಾಚಾರ ಇತ್ಯಾದಿ ಸುಧಾರಣಾ ಕ್ರಮಗಳಿಗೂ ನೆರವು ನೀಡಲಿದೆ ಎಂದು ರಾಯ್ ತಿಳಿಸಿದ್ದಾರೆ.

No comments:

Post a Comment