Saturday, 6 October 2012

ಫಾರೆಸ್ಟ್ ಡೆಡ್ಲಿ ಡೆತ್ ಸಿಕ್ರೇಟ್!


ಹರೆಯದ ಹುಡುಗರಿಗೆ ಎಚ್ಚರಿಕೆ ಈ ಪ್ರಕರಣ ಬನ್ನೇರುಘಟ್ಟ ರಕ್ಷಿತಾರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ ಮೂವರು ಸಾಫ್ಟ್ ವೇರ್ ಇಂಜಿನಿಯರುಗಳಲ್ಲಿ ಓರ್ವ ಟೆಕ್ಕಿ ನಾಪತ್ತೆಯಾಗಿದ್ದ  ಆತನ ಹೆಸರು ಸಾತ್ವಿಕ್. ಅರಣ್ಯ ಸಿಬ್ಬಂದಿಗಳು ಮತ್ತು ಪೊಲೀಸರು ಹುಡುಕಾಟದಲ್ಲಿ ತೊಡಗಿದರ‍್ದೂ, ಆತನ ಪತ್ತೆಯಾಗಿರಲಿಲ್ಲ.ಸಾತ್ವಿಕ್  ಬೆಂಗಳೂರಿನ ಪಾಂಡುರಂಗ ನಗರದ ನಿವಾಸಿಯಾಗಿದ್ದು, ನ್ಯೂ ಸಿಗ್ಮಾ ಸಾಫ್ಟ್ ವೇರ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿ ಕೆಲಸ ಮಾಡುತಿದ್ದ. ಆತನೊಂದಿಗೆ ಚಾರಣಕ್ಕೆಂದು ತೆರಳಿದ್ದ ಆಶಿಶ್ ಮತ್ತು ಅನುಮಪ್ ಎಂಬುವವರು ಮಾತ್ರ ಮನೆಗೆ ಮರಳಿದ್ದರು.ಪೊಲೀಸರ ಪ್ರಕಾರ, ಆಶಿಶ್ ಮತ್ತು ಅನುಮಪ್ ಎಂಬಿಬ್ಬರ ಜೊತೆ ಸಾತ್ವಿಕ್ ಆನೇಕಲ್ ವ್ಯಾಪ್ತಿಯಲ್ಲಿ ಬರುವ ಬನ್ನೇರುಘಟ್ಟ ಅರಣ್ಯದಲ್ಲಿ ಚಾರಣಕ್ಕೆಂದು ತೆರಳಿದ್ದರು. ಅಲ್ಲಿ ದೇವಸ್ಥಾನದ ಬಂಡೆ ಎಂಬಲ್ಲಿ ಗಾಡಿ ನಿಲ್ಲಿಸಿ ಚಾರಣ ಕೈಗೊಂಡು ಮರಳಿ ಬರುವಾಗ ದಾರಿ ತಪ್ಪಿದ್ದಾರೆ. ಅವರು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದೆ ತೆರಳಿದ್ದಾರೆ. ಚಾರಣಕ್ಕೆ ಈ ಅರಣ್ಯದಲ್ಲಿ ಅನುಮತಿ ಇದ್ದರೂ ಅನುಮತಿ ಪತ್ರ ಪಡೆದೇ ಚಾರಣಕ್ಕೆ ತೆರಳಬೇಕಾಗಿರುವುದು ಕಡ್ಡಾಯ.ಸಂಜೆ ನಗರಕ್ಕೆ ಮರಳಿದ ಆಶಿಶ್ ಮತ್ತು ಅನುಮಪ್ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಸಾತ್ವಿಕ್ ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಅವರಿಬ್ಬರ ವಿಚಾರಣೆ ನಡೆಸುತ್ತಿದ್ದಾರೆ. ಆಶಿಶ್ ಮತ್ತು ಅನುಪಮ್ ಕೂಡ ಗಾಯಗೊಂಡಿದ್ದರೆಂದು ತಿಳಿದುಬಂದಿದೆ. ಈ ಅರಣ್ಯ ಅಂತಹ ದೊಡ್ಡ ಅರಣ್ಯವಲ್ಲದಿದ್ದರೂ ಸಾತ್ವಿಕ್ ಕಾಣೆಯಾಗಿರುವ ಬಗ್ಗೆ ಜೊತೆಗಿರುವ ಸ್ನೇಹಿತರ ಬಗ್ಗೆ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ರು. ಸಾತ್ವಿಕ್ಗಾಗಿ ಅರಣ್ಯ ಸಿಬ್ಬಂದಿಗಳು, ಪೊಲೀಸರು ಮತ್ತು ಸ್ಥಳೀಯರು ಕೂಡ ತೀವ್ರವಾದ ಹುಡುಕಾಟ ಮಾಡುತ್ತಲೆ ಇದ್ದರು.

ವಾರಾಂತ್ಯ ಬರುತ್ತಿದ್ದಂತೆಯೆ ಯುವಕರು ಪ್ರವಾಸಿ ತಾಣಗಳಿಗೆ ಅಥವಾ ಚಾರಣಗಳಿಗೆ ಹೋಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅದರಲ್ಲೂ ಸಾಫ್ಟ್ ವೇರ್ ಇಂಜಿನಿಯರುಗಳಲ್ಲಿ ಇದು ಹೆಚ್ಚು. ಆದರೆ, ಚಾರಣಕ್ಕೆಂದು ತೆರಳುವಾಗ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದಿರುವುದು ಮಾರಕವಾಗಿ ಪರಿಣಮಿಸುತ್ತಿರುವುದು ಹೆಚ್ಚಾಗುತ್ತಿದೆ. ಇಚ್ಚೀಚೆಗೆ ಸಕಲೇಶಪುರ ವ್ಯಾಪ್ತಿಯಲ್ಲಿ ಚಾರಣಕ್ಕೆಂದು ತೆರಳಿದ್ದ ಬಿಎಂಎಸ್ ಕಾಲೇಜಿನ ನವೀನ್ ಎಂಬಾತ ಸಾವಿಗೀಡಾಗಿದ್ದ.ಈ ನಡುವೆ ಹೆಲಿಕಾಪ್ಟರ್ ಬಳಸಿ ವೈಮಾನಿಕ ಶೋಧಕಾರ್ಯ ನಡೆಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ತಿರ್ಮಾನಿಸಿದ್ದರು.ಆದರೆ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹೆಲಿ ಕಾಪ್ಟರ್ ಬಳಸಲು ವಿಶೇಷ ಅನುಮತಿ ಅಗತ್ಯವಿರುತ್ತದೆ ಹಾಗೂ ವನ್ಯಮೃಗಗಳಿಗೆ ತೊಂದರೆಯಾಗದಂತೆ ಶೋಧ ಕಾರ್ಯ ನಡೆಸಬೇಕಾಗುತ್ತದೆ.ಭಾನುವಾರ ಸಂಜೆ ವರೆಗೂ ಸಾತ್ವಿಕ್ ಮೊಬೈಲ್ ರಿಂಗ್ ಆಗುತ್ತಿತ್ತು. ಆಮೇಲೆ ಸ್ವಿಚ್ ಆಫ್ ಆಗಿದೆ. ಹೀಗಾಗಿ ನನ್ನ ಪತ್ನಿ ಇಸ್ರೋ ಉದ್ಯೋಗಿಯಾಗಿದ್ದು, ಅವರ ಸಂಸ್ಥೆಯಿಂದ ಸೆಲ್ ಟ್ರ್ಯಾಕಿಂಗ್ ಬಳಸಿ ಲೋಕೆಷನ್ ಹುಡುಕಾಟ ನಡೆದಿದೆ. ಎರಡು ದಿನ ಕಳೆದಿರುವುದರಿಂದ ನಮ್ಮ ಆತಂಕ ಹೆಚ್ಚಿದೆ. ಸರ್ಕಾರ ಆದಷ್ಟು ಬೇಗ ಏರಿಯಲ್ ಸರ್ವೆಗೆ ಅನುಮತಿ ನೀಡಬೇಕು ಎಂದು ಕಣ್ಮರೆಯಾಗಿರುವ ಸಾತ್ವಿಕ್ ಅವರ ತಂದೆ ದಿನೇಶ್ ಶಾಸ್ತ್ರಿ ಕೇಳಿಕೂಂಡಿದ್ದರು.ಅತ್ತ ಅರಣ್ಯ ಸಿಬ್ಬಂದಿಗಳು ಮತ್ತು ಪೊಲೀಸರು ಸಾತ್ವಿಕ್ ಹುಡುಕಾಟ ಕಾರ್ಯ ಮುಂದುವರೆಸಿದ್ದರು. ಆದರೆ, ಸಾತ್ವಿಕ್ ಕಣ್ಮರೆಯಾಗಲು ಕಾರಣವೇನು? ಎರಡು ದಿನವಾದರೂ ಚಿಕ್ಕ ಸುಳಿವು ಸಿಗದಿರುವುದು ಹೇಗೆ? ಎಂಬ ಪ್ರಶ್ನೆ ಕಾಡುತ್ತಿತ್ತು.

ಸಾತ್ವಿಕ್ ನಾಪತ್ತೆಯಾದ ಸ್ಥಳದಿಂದ ಮೊದಲಿಗೆ ಹುಡುಕಾಟ ಆರಂಭಿಸಿದ ಅರಣ್ಯ ಸಿಬ್ಬಂದಿ, ಪೊಲೀಸ್ ತಂಡ ಹಾಗೂ ಸ್ಥಳೀಯ ಗ್ರಾಮಸ್ಥರಿಗೆ ಮಂಜು ಕವಿದ ವಾತಾವರಣದಲ್ಲಿ ಯಾವುದೇ ಹೆಜ್ಜೆ ಗುರುತಾಗಲಿ, ಸುಳಿವಾಗಲಿ ಸ್ಪಷ್ಟವಾಗಿ ಸಿಕ್ಕಿರಲಿಲ್ಲ. ಭಾನುವಾರ ಸಂಜೆ ವೇಳೆಗೆ ಮಳೆಯಿಂದ ಶೋಧ ಕಾರ್ಯಕ್ಕೆ ಅಡ್ಡಿ ಉಂಟಾಗಿತ್ತು. ಸಾಮಾನ್ಯವಾಗಿ ಅರಣ್ಯ ಪ್ರದೇಶದಿಂದ ಹೊರ ಬೀಳುವ ಚೆಕ್ ಔಟ್ ನಲ್ಲಿರುತ್ತಿದ್ದ ಕಾವಲುಗಾರ ಕೂಡಾ ಶನಿವಾರ ಸಂಜೆ ಎಲ್ಲಿದ್ದ ಎಂಬುದು ಸ್ಪಷ್ಟವಾಗಿಲ್ಲ.ಶನಿವಾರ ಸಂಜೆ ಕಾಡಿನಿಂದ ಹಿಂತಿರುಗುವಾಗ ಸಾತ್ವಿಕ್ ಮೂತ್ರ ವಿಸರ್ಜನೆಗೆ ಹೋದ ನಂತರ ಕಣ್ಮರೆಯಾಗಿಬಿಟ್ಟ ಎಂದು ಅವನ ಸ್ನೇಹಿತರು ಹೇಳಿದ್ರು. ಸಾತ್ವಿಕ್ ಮೂತ್ರ ವಿಸರ್ಜನೆ ನಂತರ ದಾರಿ ತಪ್ಪಿ ಮತ್ತೆ ಕಾಡಿನೊಳಗೆ ಹೋಗಿರುವ ಸಾಧ್ಯತೆಯಿತ್ತು. ಇವರುಗಳು ಹಿಂತಿರುಗುವ ಹಾದಿಯಲ್ಲಿ ಅನೇಕ ಕಾಡು ಮೃಗಗಳಿಗೆ. ಅದರಲ್ಲೂ ಆನೆಗಳ ಗುಂಪು ಹೆಚ್ಚಾಗಿ ಆ ಪ್ರದೇಶದಲ್ಲಿ ಕಂಡು ಬರುತ್ತದೆ.ಆದರೆ, ಸಾತ್ವಿಕ್ ಕಣ್ಮರೆಯಾದ ಸ್ಥಳದಲ್ಲಿ ಯಾವುದೇ ಪ್ರಾಣಿಯ ಹೆಜ್ಜೆ ಗುರುತು ಸಿಕ್ಕಿಲ್ಲ. ಹೀಗಾಗಿ ಸಾತ್ವಿಕ್ ಇನ್ನಷ್ಟು ಕಾಡಿನೊಳಗೆ ಹೋಗಿ ತೊಂದರೆಗೆ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಆನೆಗಳ ದಾಳಿ ಸಂಭವದ ಜೊತೆಗೆ ಚಿರತೆ ದಾಳಿ ಬಗ್ಗೆ ಕೂಡಾ ಅರಣ್ಯಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು.Is ಚಿಟಟ ಣhಚಿಣ ತಿe see oಡಿ seem ಃuಣ ಚಿ ಜಡಿeಚಿm ತಿiಣhiಟಿ ಚಿ ಜಡಿeಚಿm? ಎಂಬ ಇಜgಚಿಡಿ ಂಟಟಚಿಟಿ Poe ನ ವಾಕ್ಯವುಳ್ಳ ಮಂಗಳೂರು ಮೂಲದ ಸಾತ್ವಿಕ್ ಶಾಸ್ತ್ರಿ ಫೇಸ್ ಬುಕ್ ಪುಟದಲ್ಲಿ ಆತನ ಈ ಹಿಂದಿನ ಚಾರಣದ ಚಿತ್ರಗಳು ಕೂಡಾ ವೀಕ್ಷಣೆಗೆ ಲಭ್ಯವಿದೆ.ಬೆಂಗಳೂರಿನ ಆರ್ ಎನ್ ಎಸ್ ಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿಇ ಪದವಿ ಪಡೆದಿದ್ದ ಸಾತ್ವಿಕ್, ಚಾನನ್ ಟೆಕ್ನಾಲಜೀಸ್, ಡಿಜಿಟಲ್ ಏಜ್ ಸ್ಟ್ರಾಟರ್ಜಿಸ್ ಪ್ರೈ, ಲಿ ಸಂಸ್ಥೆ ಉದ್ಯೋಗಿಯಾಗಿದ್ದರು. ವೈಟ ಫೀಲ್ಡ್ ಸಮೀಪದ ಮ್ಯೂ ಸಿಗ್ಮಾ ಕಂಪನಿಗೆ ೨೦೧೦ರಲ್ಲಿ ಉದ್ಯೋಗಕ್ಕೆ ಸೇರಿದ್ದರು.ವೀಕೇಂಡ್ ಗಳಲ್ಲಿ ಟ್ರೆಕ್ಕಿಂಗ್ ಹೋಗುವುದು ಸಾತ್ವಿಕ್ ಗೆ ಬೀಟಲ್ಸ್ ಸಂಗೀತ ಕೇಳಿದ್ದಷ್ಟೇ ಸುಲಭದ ವಿಷಯವಾಗಿತ್ತು. ಉತ್ತರಾಖಂಡ್ ನ ಹಿಮಾಲಯದ ಶ್ರೇಣಿಗಳಲ್ಲಿ ಸುತ್ತಾಡಿ ಬಂದಿರುವ ಅನುಭವವಿದ್ದ ಸಾತ್ವಿಕ್ ಕಣ್ಮರೆ ಅವರ್ ಪೋಷಕರ ದುಗುಡವನ್ನು ಕ್ಷಣ ಕ್ಷಣಕ್ಕೊ ಹೆಚ್ಚಿಸುತ್ತಿತು ಹೀಗಾಗಿ.ಅರಣ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿ ನಾಗರಾಜ್ ಜೊತೆ ಸಾತ್ವಿಕ್ ಪೋಷಕರಾದ ದಿನೇಶ್ ಶಾಸ್ರ್ತಿ ಹಾಗೂ ಉಷಾ ಅವರು ನಿರಂತರ ಸಂಪರ್ಕದಲ್ಲಿಯೆ ಇದ್ದರು.

ಆದರೆ ಅನಾಮತ್ತು ಮೂರು ದಿನಗಳ ನಂತರ ಅಂದರೆ ಸೋಮವಾರ ಸಾಯಂಕಾಲ ಸಾತ್ವಿಕ್ ಶವವಾಗಿ ಪತ್ತೆಯಾಗಿದ್ದ ಅಣ್ಣಯ್ಯನದೊಡ್ಡಿ ಅರಣ್ಯ ಪ್ರದೇಶದಲ್ಲಿ ಸಾತ್ವಿಕ್ ಶವ ಪತ್ತೆಯಾಗಿತ್ತು. ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸಾತ್ವಿಕ್ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶನಿವಾರ ರಾತ್ರಿಯೇ ಸಾತ್ವಿಕ್ ಮೇಲೆ ಆನೆ ದಾಳಿ ಮಾಡಿದೆ. ಸಾತ್ವಿಕ್ ಅವರನ್ನು ಸೊಂಡಿಲಿನಿಂದ ಎತ್ತಿ ಎಸೆದ ಪರಿಣಾಮ ಸಾತ್ವಿ ಕ್ ಶವ ಪೊದೆಯಲ್ಲಿ ಸಿಲುಕಿತ್ತು. ಹೀಗಾಗಿ ಸುಲಭವಾಗಿ ಶೋಧಿಸಲು ಸಾಧ್ಯವಾಗಿರಲಿಲ್ಲ.ರಾಗಿಹಳ್ಳಿ ಗ್ರಾಮಸ್ಥರು ಈ ಮಾಹಿತಿಯನ್ನು ಮೊಟ್ಟಮೊದಲ ಬಾರಿಗೆ ಅರಣ್ಯಾಧಿಕಾರಿಗಳ ಒಂದು ತಂಡಕ್ಕೆ ಮುಟ್ಟಿಸಿದ್ದಾರೆ. ಅಣ್ಣಯ್ಯನದೊಡ್ಡಿ ಗ್ರಾಮದ ವ್ಯಾಪ್ತಿಗೆ ಬರುವ ಈ ಅರಣ್ಯ ಪ್ರದೇಶ ಬನ್ನೇರುಘಟ್ಟ -ಜಿಗಣಿ ಮುಖ್ಯರಸ್ತೆಯಿಂದ ೮ ಕಿ.ಮೀ ದೂರದಲ್ಲಿದೆ.ರಾಗಿಹಳ್ಳಿ ಗುಡ್ಡದ ಮೇಲೆ ಕೂತಿದ್ದ ಮೂವರು ಹಿಂತಿರುಗುವ ಹಾದಿಯಲ್ಲಿ ಕಸವಿನ ಕುಂಟೆ ಪ್ರದೇಶದಿಂದ ಮುಂದೆ ಬಯಲು ಪ್ರದೇಶ ಸಿಗುತ್ತದೆ ಇಲ್ಲಿಂದ ಮುಂದೆ ನಾಲ್ಕು ದಾರಿಗಳು ಸಿಗುತ್ತದೆ.ಈ ಪ್ರದೇಶದಲ್ಲೇ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಸಾತ್ವಿಕ್ ನಂತರ ತಪ್ಪು ಹಾದಿ ಹಿಡಿದು ಅರಣ್ಯದ ಒಳಗೆ ಹೋಗಿದ್ದಾನೆ. ಕಾಡಾನೆಗಳಿದ್ದ ಪ್ರದೇಶಕ್ಕೆ ಹೋಗಿ ಸಿಕ್ಕಿಬಿದ್ದ ಸಾತ್ವಿಕ್ ಮೇಲೆ ಮರಿಗಳೊಂದಿಗೆ ಇದ್ದ ಕಾಡಾನೆಗಳ ಗುಂಪು ದಾಳಿ ಮಾಡಿ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.ಗ್ರಾಮಸ್ಥರ ಹೇಳಿಕೆಯ ಮೇರೆಗೆ ಆನೆ ದಾಳಿಗೆ ಸಿಲುಕಿದ ಬಲಗಾಲು ಮುರಿದ ಸ್ಥಿತಿಯಲ್ಲಿ ಶವ ಪೊದೆಯೊಂದರಲ್ಲಿ ಕಾಣಿಸಿದೆ. ನಂತರ ಅರಣ್ಯ ಅಧಿಕಾರಿಗಳ ತಂಡವನ್ನು ಹುಡುಕಿ ಗ್ರಾಮಸ್ಥರು ಮಾಹಿತಿ ಮುಟ್ಟಿಸಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ಮೊಬೈಲ್ ಸಂಪರ್ಕ ಸಾಧ್ಯವಿಲ್ಲ.ಸಾತ್ವಿಕ್ ಅವರ ಕುಟುಂಬ ವರ್ಗಕ್ಕೆ ಮಾಹಿತಿ ಮುಟ್ಟಿಸಲಾಗಿದ್ದರೂ ಆತನ ತಂದೆ ತಾಯಿಗೆ ಸಾತ್ವಿಕ್ ಸಾವಿನ ಬಗ್ಗೆ ಮಾಹಿತಿ ನೀಡಿರಲಿಲ್ಲ.

ಶನಿವಾರ ಸಂಜೆ ಕಾಡಿನಿಂದ ಹಿಂತಿರುಗುವಾಗ ಸಾತ್ವಿಕ್ ಮೂತ್ರ ವಿಸರ್ಜನೆಗೆ ಹೋದ ನಂತರ ಕಣ್ಮರೆಯಾಗಿಬಿಟ್ಟ ಎಂದು ಆತನ ಸ್ನೇಹಿತರು ಹೇಳಿದ್ದರು. ಸಾತ್ವಿಕ್ ಮೂತ್ರ ವಿಸರ್ಜನೆ ನಂತರ ದಾರಿ ತಪ್ಪಿ ಮತ್ತೆ ಕಾಡಿನೊಳಗೆ ಹೋಗಿರುವ ಸಾಧ್ಯತೆಯಿದೆ. ಇವರುಗಳು ಹಿಂತಿರುಗುವ ಹಾದಿಯಲ್ಲಿ ಅನೇಕ ಕಾಡು ಮೃಗಗಳು. ಅದರಲ್ಲೂ ಆನೆಗಳ ಗುಂಪು ಹೆಚ್ಚಾಗಿ ಆ ಪ್ರದೇಶದಲ್ಲಿ ಕಂಡು ಬರುತ್ತದೆ.ಆದರೆ, ಸಾತ್ವಿಕ್ ಕಣ್ಮರೆಯಾದ ಸ್ಥಳದಲ್ಲಿ ಯಾವುದೇ ಪ್ರಾಣಿಯ ಹೆಜ್ಜೆ ಗುರುತು ಸಿಕ್ಕಿರಲಿಲ್ಲ. ಹೀಗಾಗಿ ಸಾತ್ವಿಕ್ ಇನ್ನಷ್ಟು ಕಾಡಿನೊಳಗೆ ಹೋಗಿ ತೊಂದರೆಗೆ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಆನೆಗಳ ದಾಳಿ ಸಂಭವದ ಜೊತೆಗೆ ಚಿರತೆ ದಾಳಿ ಬಗ್ಗೆ ಕೂಡಾ ಅರಣ್ಯಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ಇನ್ನು ಮುಂದೆ ತನಿಖೆಯ ನಂತರವಷ್ಟೆ ಸಾತ್ವಿಕ್ ಹೇಗೆ ಸತ್ತ ಎಂಬ ಸತ್ಯ ಬೆಳಕಿಗೆ ಬರಬೇಕಿದೆ ಜತೆಗಿದ್ದ ಗೆಳೆಯರ ಮೇಲು ಸಾಕಷ್ಟು ಅನುಮಾನಗಳಿವೆ.


No comments:

Post a Comment