Tuesday 24 July 2012

ಕ್ಯಾಮರಾ ಕಣ್ಣಿಗೆ ಸಿಕ್ಕುಬಿದ್ದ ಪ್ರೇತ

ನಿಜವಾಗ್ಲೂ ದೆವ್ವ, ಭೂತ, ಪ್ರೇತ, ಪಿಶಾಚಿ ಎಂಬುದೆಲ್ಲ ಇದೆಯಾ. ಇದೇ ಅನ್ಸುತ್ತೆ. ವೈಜ್ಙಾನಿಕವಾಗಿ ಯುಗ, ಆದರೆ ಅದು ಆತ್ಮದ ಪ್ರತಿರೂಪ. ಅದಕ್ಕೆ ಯಾವುದೇ ಶಕ್ತಿಗಳಿಲ್ಲ. ಆದರೆ ಅಸ್ವಷ್ಟ ಆಕಾರಗಳಿವೆ ಅಂತ ಕೆಲ ಸಂಶೋಧಕರು ಹೇಳುತ್ತಾರೆ. ದೇವತೆಗಳನ್ನು ನಂಬದವರೆಲ್ಲಾ ಈ ದೆವ್ವಗಳನ್ನು ನಂಬುತ್ತಾರೆ ಎಂಬುದು ಸತ್ಯ. ಇದಕ್ಕೆ ವಿದೇಶಿಯರು ಹೊರತೇನಲ್ಲ. ಅತಿ ಹೆಚ್ಚಾಗಿ ದೆವ್ವಗಳನ್ನು ನಂಬುವವರೆ ಅವರು. ದೆವ್ವದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದವರು ಪ್ರೇತಗಳ ಮೂಲ ಹುಡುಕ ಹೊರಟವರು ಅದರಿಂದ ಸಾಕಷ್ಟು ಕಹಿ ಅನುಭವಗಳನ್ನು ಕಂಡಿದ್ದಾರೆ. ಹೀಗೆ ಪ್ರೇತದ ಮೂಲ ಹುಡುಕಿ ಈ ಹಿಂದೆ ಇಂಗ್ಲಿಷ್‌ನಲ್ಲಿ ಈವಿಲ್‌ಡೆಡ್ ಎಂಬ ಸಿನಿಮಾ ನಾಲ್ಕು ಭಾಗಗಳು ಭಯಾನಕವಾಗಿ ಮೂಡಿ ಬಂದಿತ್ತು. ಆ ಸಿನಿಮಾವನ್ನು ಇಂದಿಗೂ ಯಾವ ಸಿನಿಮಾವು ಮೀರಿಸಲಾಗಲೇ ಇಲ್ಲ. ಆ ಪರಿ ಭಯಂಕರ ಸಿನಿಮಾ ಅದಾಗಿತ್ತು. ಆ ಸಿನಿಮಾದ ನಿರ್ದೇಶಕ ಸೇರಿದಂತೆ ಕಲಾವಿದ, ತಂತ್ರಜ್ಞರು ಕೂಡ ಅಷ್ಟೇ ನಿಗೂಢವಾಗಿ ಸಾವನಪ್ಪಿದ್ದು ಇಂದಿಗೂ ಸಂಶಯಕ್ಕೆ ಎಡೆ ಮಾಡಿತ್ತು. ಆ ಸಂಶಯ ಇವತ್ತಿಗೂ ಬಗೆಹರಿದಿಲ್ಲ. ಅಷ್ಟು ಹಿಂದಿನ ಉದಾಹರಣೆ ಬೇಡ ಇತ್ತೀಚೆಗೆ ಪಾಪ್ ಗಾಯಕ ಜಗತ್ಪ್ರಸಿದ್ದ ನೃತ್ಯಪಟು ಸಂಗೀತ ನಿರ್ದೇಶಕ ಮೈಕಲ್ ಜಾಕ್ಸನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದನಲ್ಲ ಆತನೇ ದೆವ್ವವಾಗಿ ತನ್ನ ನೆದರ್‌ಲ್ಯಾಂಡ್ ರ‍್ಯಾಂಚ್ ಅರಮನೆಯಲ್ಲಿ ದೆವ್ವವಾಗಿ ಓಡಾಡುತ್ತಿದ್ದಾನೆ ಅಂತ ಬಿಸಿ-ಬಿಸಿ ಸುದ್ದಿಯೊಂದು ಹಬ್ಬಿತ್ತು. ಅದನ್ನು ಸುಳ್ಳು ಎನ್ನಲು ಸಾಧ್ಯವಿಲ್ಲ. ಏಕೆಂದರೆ, ಕ್ಯಾಮರಾ ಕಣ್ಣಿಗೆ ಜಾಕ್ಸನ್‌ನ ಪ್ರೇತ ಸೆರೆ ಸಿಕ್ಕಿತಲ್ಲ. ಅದನ್ನು ನೋಡಿದವರ‍್ಯಾರು ಜಾಕ್ಸನ್‌ನ ಆಕಾರವಲ್ಲ ಅಂತ ಹೇಳಲು ಸಾಧ್ಯವಿರಲಿಲ್ಲ. ಅದು ಸೇಮ್ ಟು ಸೇಮ್ ಜಾಕ್ಸನ್‌ನಂತೆಯೇ ಇತ್ತು. ಸುಳ್ಳು ಅನ್ನೋದಾದರೂ ಹೇಗೆ. ಹೀಗೆ ಸಾಕಷ್ಟು ಉದಾಹರಣೆಗಳು ಸಿಗುತ್ತೆ. ಆದರೆ ಕೆಲವು ಕಿಡಿಗೇಡಿಗಳು ಕಂಪ್ಯೂಟರ್ ಗ್ರಾಫಿಕ್ಸ್ ಮಾಡಿ ದೆವ್ವಗಳಂತೆ ಫೋಟೊಗಳನ್ನು ಸೃಷ್ಟಿಸಿ, ಇಂಟರ್‌ನೆಟ್‌ಗೆ ಬಿಟ್ಟಿದ್ದಾರೆ. ಅದೇ ಇಂಟರ್‌ನೆಟ್‌ಗಳಲ್ಲಿ ನಿಜವಾದ ದೆವ್ವಗಳ ಭಾವಚಿತ್ರಗಳು ಲಭ್ಯವಿದೆ. ನಿಮಗೆ ಅದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ತಿತಿತಿ.ಥಿouಣube.ಛಿom ವೆಬ್‌ಸೈಟು ಹೊಕ್ಕು ನೋಡಿದರೆ ಪ್ರೇತ ನಡೆದು ಬರುವುದು, ನಡೆದಾಡುವುದು ಎಲ್ಲಾ ವಿಡಿಯೊ ಮೂಲಕವೇ ನೋಡಬಹುದು. ಐದು ವರ್ಷಗಳ ಹಿಂದೆ ಯಾರೋ ಬೆಂಗಳೂರಿನ ಮಂದಿ ಒಬ್ಬ ಅಮೆರಿಕನ್ ಹುಡುಗನ ಹಿಂದೆ ದೆವ್ವ ನಿಂತಿರುವಂತೆ ಭಾವ ಚಿತ್ರ ಸೃಷ್ಠಿ ಮಾಡಿ ಆಲದಮರದ ಹತ್ತಿರ ಈ ಹುಡುಗನ ಫೋಟೊ ತೆಗೆದರೆ ಅವನ ಹಿಂದೆ ದೆವ್ವ ನಿಂತಿರುವಂತೆ ಫೋಟೊ ಬಂತು ಅಂತೆಲ್ಲಾ ಸುದ್ದಿ ಹಬ್ಬಿಸಿ ಜನರನ್ನು ಭಯ ಬೀಳಿಸುವಂತೆ ಮಾಡಿದ್ದರು. ಅಷ್ಟೇ ಅಲ್ಲ, ಆ ಫೋಟೊಗಳು ಸೈಬರ್ ಪಾಯಿಂಟ್‌ಗಳಲ್ಲಿ ೫ರಿಂದ ೧೦ ರೂಪಾಯಿ ಮಾರಾಟ ಕೂಡ ಮಾಡಲಾಗುತ್ತಿತ್ತು. ಆದರೆ ಅದೆಲ್ಲಾ ಪಕ್ಕಾ ಸುಳ್ಳು ಎಂದು ಜನರಿಗೂ ಬೇಗ ಅರ್ಥವಾಗಿತ್ತು. ಈಗ ವರ್ಷದ ಹಿಂದೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನದ ಮೆಟ್ಟಿಲು ಹತ್ತುತ್ತಿದ್ದ ಒಂದು ಬಿಳಿಯ ಆಕೃತಿ ಸಿ.ಸಿ. ಕ್ಯಾಮರಾಗೆ ಬಿದ್ದಿತಲ್ಲ ಅವತ್ತು ವಿಮಾನ ನಿಲ್ದಾಣದಿ ಕೆಲಸ ಮಾಡುವವರೆಲ್ಲ ಬೆಚ್ಚಿ ಬಿದ್ದಿದ್ದರು. ಅದಕ್ಕೆ ತಕ್ಕಂತೆ ಕೆಲವು ಪುಷ್ಠಿ ತರುವ ಜನರ ಅಭಿಪ್ರಾಯವು ಇದನ್ನು ನಿಜ ಎನಿಸಿದ್ದು ಸುಳ್ಳಲ್ಲ.
ವಿಮಾನವೇರಿದ ಹೆಣ್ಣುದೆವ್ವ
ಆ ವಿಮಾನದಲ್ಲಿ ಆಕೃತಿ ಸ್ಪಷ್ಟವಾಗಿ ಹೆಣ್ಣು ಎಂದು ಗೋಚರಿಸುತ್ತಿತ್ತು. ಎಲ್ಲರಿಗೂ ಆಶ್ಚರ್ಯ, ಕೆಲವರು ಅವಳೇ ಇವಳು ಎಂದುಕೊಂಡರು. ಈ ಹಿಂದೆ ದೇವನಹಳ್ಳಿ ವಿಮಾನ ನಿಲ್ದಾಣದ ಹತ್ತಿರ ಒಂದು ಬೇಲಿಯಲ್ಲಿ ಸತ್ತ ಹೆಣ್ಣಿನ ಶವ ಸಿಕ್ಕಿತು. ಯಾರೊ ಹಂತಕರು ಆಕೆಯನ್ನು ರೇಪ್ ಮಾಡಿ ನಂತರ ಕೊಲೆ ಮಾಡಿ ಅಲ್ಲಿ ತಂದು ಹಾಕಿದ್ದರು. ಆಕೆಯೆ ದೆವ್ವವಾಗಿ ಏರ್‌ಪೋರ್ಟ್‌ನಲ್ಲಿ ಅಲೆಯುತ್ತಿದ್ದಾಳೆ ಎಂದು ಮಾತನಾಡಿಕೊಂಡಿದ್ದರು. ಅದು ನಿಜವಿರಲೂಬಹುದು. ಏಕೆಂದರೆ ಸಿ.ಸಿ. ಕ್ಯಾಮರಕ್ಕೆ ಆ ಪ್ರೇತ ಸೆರೆ ಸಿಕ್ಕಿತಲ್ಲ. ಈ ನಡುವೆ ಬೆಂಗಳೂರಿನ ಸುಂಕದ ಕಟ್ಟೆಯ ಕೆಲ ಹುಡುಗರು ಪ್ರೇತದ ಬೆನ್ನತ್ತಿಬಿಟ್ಟಿದ್ದರು. ಅದಕ್ಕಾಗಿಯೇ ಒಂದು ವೆಬ್‌ಸೈಟ್ ಓಪನ್ ಮಾಡಿದ್ದರು. ಸ್ಮಶಾನಗಳಲ್ಲಿ ದೆವ್ವಗಳ ಬೇಟೆಗೆ ಕಾದು ಕೂತರು. ಅಲ್ಲಲ್ಲಿ ತೊಂದರೆಗೂ ಈಡಾದರು. ಕನಕಪುರ ರಸ್ತೆಯಲ್ಲಿರುವ ರೊರಿಚ್ ಎಸ್ಟೇಟ್ ಅರ್ಥಾತ್ ದೇವಿಕಾರಾಣಿ ಎಸ್ಟೇಟ್‌ನ ಆಸುಪಾಸಿನಲ್ಲಿ ದೆವ್ವಗಳಿವೆ. ಅಲ್ಲಿಗೆ ನೀವು ಬಂದರೆ ನೋಡಬಹುದು ಅಂತ ಅಂದರು. ಆ ಹುಡುಗರ ಗುಂಪು ಬಂತು. ಮಧ್ಯರಾತ್ರಿಯಾದರೂ ಯಾವ ಪ್ರೇತಗಳು ಕಂಡುಬಂದಿರಲಿಲ್ಲ. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯ ಕಷ್ಟ ಅನುಭವಿಸಿದ್ದರು. ನಂತರ ಅಪಘಾತವಾಯಿತಾದರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಆ ಹುಡುಗರ ಗುಂಪು ಸದ್ಯಕ್ಕೆ ಸದ್ದು ಮಾಡುತ್ತಿಲ್ಲ.
ಬೆಂಗಳೂರು ಆಟೋದಲ್ಲಿ ದೆವ್ವ (೧೦ ವರ್ಷಗಳ ಹಿಂದೆ)
ದೆವ್ವದ ಬಗ್ಗೆ ಒಂದು ಸವಿಸ್ತಾರ ವರದಿ ಮಾಡಬೇಕು ಅಂತ ಹೊರಟಾಗ ನಿಜಕ್ಕೂ ನಂಬಲಾಗದ ಒಂದು ಭಯಾನಕ ಘಟನೆ ಹೇಳಿಕೊಂಡವನು ಒಬ್ಬ ಆಟೋ ಡ್ರೈವರ್. ಆತ ತುಂಬಾ ದುಡಿಯಬೇಕು, ಆಟೋ ಮೇಲಿದ್ದ ಪೈನಾನ್ಸ್‌ನೆಲ್ಲ ತೀರಿಸಿಬಿಡಬೇಕು ಎಂದು ಹಗಲು ರಾತ್ರಿ ಎನ್ನದೆ ದುಡಿಯುತಲಿದ್ದ. ಹೀಗಿರಬೇಕಾದರೆ ಅವತ್ತೊಂದು ದಿನ ರಾತ್ರಿ ೧೧ ಗಂಟೆ ಸಮಯ. ಒಬ್ಬ ಹೆಂಗಸು ಪುಟ್ಟ ಮಗುವಿನೊಂದಿಗೆ ಈ ಆಟೋ ಡ್ರೈವರ್ ಬಳಿ ಬಂದಿದ್ದಾಳೆ. ಬನಶಂಕರಿಯಿಂದ ಡಬಲ್‌ರೋಡ್‌ಗೆ ಹೋಗಬೇಕು ಎಂದಾಗ ಈತ ಡಬಲ್ ಮೀಟರ್ ಎಂದಿದ್ದಾನೆ. ತ್ರಿಬಲ್ ಕೊಡ್ತೀನಿ ನಡಿ ಅಂದಿದ್ದಾಳೆ. ಈತನು ಸುಮಾರು ೪ ಮೈಲುಗಳು ಮುಂದೆ ಹೋಗಿದ್ದಾನೆ. ನಿಶ್ಯಬ್ದವಾಗಿ ಹೋಗುತ್ತಿದ್ದ ಆಟೋದಲ್ಲಿ ಸಣ್ಣಗೆ ಶಬ್ದ ಇವನ ಕಿವಿಗೆ ಬಿದ್ದಿದೆ. ಅದು ಏನೋ ತಿನ್ನುತ್ತಿರುವ ಶಬ್ದ. ಹಾಗೆ ಹಿಂದೆ ತಿರುಗಿ ನೋಡಿದ್ದಾನೆ ಭಯದಿಂದ ಕಿರುಚಿಕೊಂಡು ಆಟೋವನ್ನು ಎದುರಿಗಿದ್ದ ಗೋಡೆಗೆ ಗುದ್ದಿಬಿಟ್ಟಿದ್ದಾನೆ. ಏಕೆಂದರೆ ಹಾಲುಣಿಸುತ್ತಿದ್ದ ಆ ಹೆಂಗಸು ಅನಾಮತ್ತು ಮಗುವನ್ನು ಕಚ್ಚಿ-ಕಚ್ಚಿ ತಿನ್ನತೊಡಗಿದ್ದಳು. ಗುದ್ದಿದ ಆಟೋ ಎತ್ತಿ ನಿಲ್ಲಿಸಿದವನು ಆ ಹೆಂಗಸನ್ನು ಮತ್ತು ಮಗುವನ್ನು ಹುಡುಕಾಡಿದ್ದಾನೆ, ಕೂಗಿ ಕರೆದಿದ್ದಾನೆ, ಎಲ್ಲಿಯೂ ಆ ಮಗು ಮತ್ತು ಹೆಂಗಸು ಕಾಣಿಸಿಕೊಂಡಿಲ್ಲ. ಇವನಿಗೆ ಖಚಿತವಾಗಿ ಹೋಗಿತ್ತು. ತಾನು ಆಟೋದಲ್ಲಿ ಕರೆತಂದದ್ದು ಹೆಣ್ಣು ಪ್ರೇತವನ್ನು ಎಂದು. ಹೀಗೆ ಹೆದರಿ ಆಟೋ ಆಕ್ಸಿಡೆಂಟ್ ಮಾಡಿಕೊಂಡವನು ಮತ್ತೆ ಮೊದಲಿನ ಸ್ಥಿತಿಗೆ ಬರುವಷ್ಟರಲ್ಲಿ ತಿಂಗಳುಗಳೇ ಕಳೆದು ಹೋದವು. ಏನಯ್ಯ ಭ್ರಮೆನೋ, ಕನಸೋ ಇರಬೇಕು ನೋಡು ಅಂದರೆ ಕನಸ್ಸಾದರೆ ಈ ಪರಿ ಆಕ್ಸಿಡೆಂಟ್ ಆಗುತ್ತಿತ್ತ ಅಂತ ತನ್ನ ತಲೆಗೆ, ಮೈಕೈಗೆ ಬಿದ್ದ ಪೆಟ್ಟು ಮತ್ತು ಗಾಯಗಳನ್ನು ತೋರಿಸುತ್ತಾನೆ ಮತ್ತು ಇದು ನಿಜ ಅಂತ ವಾದಿಸುತ್ತಾನೆ. ಅವತ್ತಿನಿಂದ ಇವತ್ತಿನವರೆಗೂ ಅವನು ರಾತ್ರಿ ೯ಕ್ಕೆಲ್ಲಾ ಆಟೋ ಓಡಿಸುವುದು ನಿಲ್ಲಿಸುತ್ತಾನೆ. ೯ ಗಂಟೆಯ ಮೇಲೆ ಆಟೋ ಓಡಿಸಲು ಹೋಗುವುದಿಲ್ಲ. ದೆವ್ವ-ಭೂತ ನಂಬದ ಆತ ಈಗ ಪ್ರೇತ ಇರೋದು ನಿಜ ಅಂತಾನೆ. ಅದೆಷ್ಟು ಸತ್ಯವೋ ಭಗವಂತನೇ ಬಲ್ಲ.ಇದೇ ತರಹದ ಮತ್ತೊಂದು ಘಟನೆ ಇದೇ ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದಿತ್ತು. ಆತನು ಆಟೋ ಡ್ರೈವರೇ. ನಿರ್ಭಿಡ ರಸ್ತೆಯಲ್ಲಿ ರಾತ್ರಿ ೧೨ ಗಂಟೆಯಲ್ಲಿ ಒಬ್ಬನೆ ಆಟೋದಲ್ಲಿ ಬರುತ್ತಿದ್ದಾಗ ಯಾರೊ ಈ ನಡುರಸ್ತೆಯಲ್ಲಿ ನಿಂತು ಕೈ ಅಡ್ಡ ಹಾಕಿದ್ದಾರೆ. ಇವನು ಹೆದರಿ ವಿದ್ಯುತ್ ಕಂಬವೊಂದಕ್ಕೆ ಆಟೋವನ್ನು ಗುದ್ದಿ ಬುರುಡೆ ಒಡೆದುಕೊಂಡಿದ್ದಾನೆ. ಆದರೆ ಸುತ್ತಲು ನೋಡಿದರೆ ರಸ್ತೆಯಲ್ಲಿ ನಿಂತ ಮನುಷ್ಯ ರೂಪದ ವ್ಯಕ್ತಿ ಎಲ್ಲೂ ಕಾಣಿಸಿಕೊಂಡಿಲ್ಲ. ಈತ ಇಂದಿಗೂ ವಾದಿಸುತ್ತಾನೆ ೧೦೦ಪರ್ಸೆಂಟು ಅದು ದೆವ್ವ ಅಂತ. ಪ್ರೇತವನ್ನು ನೋಡದ ನಮಗೆ ನಂಬಿಕೆ ಇಲ್ಲವಾದರೂ ನೋಡಿದವರು ಮಾತ್ರ ನಂಬುತ್ತಾರೆ. ಇಂತಹ ಸಾಕಷ್ಟು ಘಟನೆಗಳು ನಮ್ಮ ಸುತ್ತಲು ಕಂಡುಬರುತ್ತವೆ.
ಹಾರೋಹಳ್ಳಿ ಬಳಿ ಕ್ಯಾಮರಾ ಕಣ್ಣಿಗೆ ಬಿದ್ದ ಪ್ರೇತ
ಈಗ್ಗೆ ತಿಂಗಳಿನ ಹಿಂದೆ ಹಾರೋಹಳ್ಳಿಯ ಮೇಗಳ ಬೀದಿಯ ಹುಡುಗ ನವೀನ್ ಎಂಬುವವರ ಮೊಬೈಲಿಗೆ ಸಿಕ್ಕು ಬಿದ್ದ ಆಕೃತಿ ಮನುಷ್ಯಾಕೃತಿ. ಅದೊಂದು ಬೆಳಕಿನ ರೂಪ. ಕೆಲಸದಿಂದ ಕಂಪ್ಯೂಟರ್ ಮತ್ತು ಮೊಬೈಲ್ ರಿಪೇರಿ ಮಾಡುವ ನವೀನ್ ಹಾಗೂ ಜಯಸಿಂಹ ಎಂಬ ಹುಡುಗರ ಮನೆಯಲ್ಲಿ ಅಂದು ಯಾರೂ ಇರಲಿಲ್ಲ. ಮನೆಯ ಕಾಂಪೊಂಡಿನ ಬಳಿ ದಬದಬ ಶಬ್ದವಾಗುತ್ತಿತ್ತು. ನಾಯಿಗಳು ಊಳಿಡುತ್ತಿದ್ದವಂತೆ. ಅದು ರಾತ್ರಿ ೧೨ ಗಂಟೆ ಸಮಯ ಹೊರ ಬಂದು ಬಾಗಿಲು ತೆಗೆದು ನೋಡಿದರೆ ಅಲ್ಲಿ ಯಾರು ಇರಲಿಲ್ಲ. ನವೀನ್ ಮತ್ತೆ ಬಂದು ಬಾಗಿಲು ಹಾಕೊಂಡು ಮಲಗುತ್ತಾನೆ. ಆದರೆ ದಬದಬ ಅಂತ ಓಡಾಡಲು ಶಬ್ದ ಮಾತ್ರ ನಿಂತಿರಲಿಲ್ಲ. ಅಷ್ಟರಲ್ಲಿ ತನ್ನ ಮನೆಯಿದ್ದ ರಸ್ತೆಯಲ್ಲಿ ದೆವ್ವಗಳು ರಾತ್ರಿ ವೇಳೆ ಓಡಾಡುತ್ತವೆ. ಅದನ್ನು ನಾವು ನೋಡಿದ್ದೇವೆ ಅಂತೆಲ್ಲಾ ಹಿರಿಯರು ಹೇಳಿದ್ದನ್ನು ನೆನೆಸಿಕೊಂಡ ಈ ಹುಡುಗನಿಗೆ ಮತ್ತಷ್ಟು ಭಯ ಹೆಚ್ಚಾಗಿದೆ. ಕ್ಯಾಮರ ಕಣ್ಣಿಗೆ ದೆವ್ವ ಬೀಳುತ್ತವಂತೆ ಎಂಬುದನ್ನು ಎಲ್ಲೊ ಓದಿದ್ದನ್ನು ಯಾರೋ ಹೇಳಿದ್ದನ್ನು ಜ್ಞಾಪಿಸಿಕೊಂಡವನಂತೆ ತನ್ನ ಮೊಬೈಲ್ ಎತ್ತಿಕೊಂಡು ಮನೆಯ ಮನೆಯ ಸುತ್ತ ಸುಮಾರು ೨೦ ಫೋಟೊಗಳನ್ನು ಕ್ಲಿಕ್ಕಿಸಿದ್ದಾನೆ. ನಂತರ ಮನೆಯ ಒಳಗೆ ಬಂದು ಬಾಗಿಲು ಹಾಕಿಕೊಂಡು ಒಂದೊಂದೆ ಫೋಟೊಗಳನ್ನು ನೋಡಿದ್ದಾನೆ ತಕ್ಷಣಕ್ಕೆ ಏನೂ ಕಂಡಿಲ್ಲ. ಸುಮ್ಮನೆ ಮಲಗಿದ್ದಾನೆ. ಬೆಳಿಗ್ಗೆ ಎದ್ದವನು ಮತ್ತೆ ಸೂಕ್ಷ್ಮವಾಗಿ ನೋಡಿದಾಗ ಏನೋ ಹೊಗೆಯಂತಹ ಆಕಾರ ೨೦ ಫೋಟೊಗಳ ಪೈಕಿ ಒಂದರಲ್ಲಿ ಕಾಣಿಸಿದೆ. ಆದರೆ ಮೊಬೈಲ್ ಸ್ಕ್ರೀನ್ ಚಿಕ್ಕದಾದ್ದರಿಂದ ಕಂಪ್ಯೂಟರಿನಲ್ಲಿ ಹಾಕಿ ದೊಡ್ಡ ಪರದೆಯ ಮೇಲೆ ಅದನ್ನು ನೋಡಿದಾಗ ನಿಜಕ್ಕೂ ಅಚ್ಚರಿ ಮೂಡಿಸಿದೆ. ಅದು ಹೊಗೆಯ ಆಕಾರವೆ. ಸೂಕ್ಷ್ಮವಾಗಿ ಗಮನಿಸಿದರೆ ಅದು ಮನುಷ್ಯನ ತರಹವೇ ಇದೆ. ನಂತರ ಅದು ಒಬ್ಬರಿಂದ ಒಬ್ಬರಿಗೆ ಗೊತ್ತಾಗಿ ದೊಡ್ಡ ಸುದ್ದಿಯಾಗಿದೆ. ಅದು ಯಾವುದೇ ರೀತಿಯ ಕಂಪ್ಯೂಟಾರೈಸಡ್ ಫೋಟೊ ಅಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೆಲವೆಡೆ ಮನುಷ್ಯನ ಕಣ್ಣಿಗೆ ದೆವ್ವಗಳು ಕಂಡರೆ ಮತ್ತೆ ಕೆಲವರ ಕ್ಯಾಮರ ಕಣ್ಣಿಗೆ ಈ ರೀತಿಯ ಆಕೃತಿಗಳೂ ಮನುಷ್ಯ ರೂಪಗಳು ಕಾಣಿಸಿಕೊಂಡಿವೆ. ಕೆಲವರಿಗೆ ಇದರಿಂದ ಅನಾನುಕೂಲವು ಆಗಿದೆ. ಇಂತಹ ಹತ್ತಾರು ಘಟನೆಗಳು ನಮ್ಮ ಆಸುಪಾಸಿನಲ್ಲೆ ನಡೆದು ಹೋಗಿವೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರೇತವಿದೆಯಾ?
ಇದೊಂದು ಅನುಮಾನ ಇಂದು ನೆನ್ನೆಯದಲ್ಲ. ಹಿಂದಿನಿಂದಲೂ ಹೀಗೊಂದು ಗುಸು-ಗುಸು, ಪಿಸು-ಪಿಸು ಇದ್ದೇ ಇದೆ. ರಾತ್ರಿ ವೇಳೆ ಕಿಟಕಿಯ ಗಾಜಿನ ಬಳಿ ಯಾರೋ ಓಡಾಡುತ್ತಾರೆ, ಕಲ್ಲು ಒಡೆದ ಸದ್ದಾಗುತ್ತದೆ, ಯಾರೋ ಅರಚಿದಂತಾಗುತ್ತೆ, ಮಾತನಾಡುವ, ಗಹಗಹಿಸಿ ನಗುವ ರೀತಿಯೆಲ್ಲಾ ಇಲ್ಲಿ ಆಗುತ್ತೆ ಎಂದು ಕೆಲ ಮಂದಿ ಹೇಳುತ್ತಾರೆ. ಅವರಲ್ಲಿ ಕೆಲವರು ಆಸ್ಪತ್ರೆಯ ನೌಕರರು ಕೆಲ ವರ್ಷಗಳ ಹಿಂದೆ ಇಲ್ಲಿ ರಾತ್ರಿಯ ಹೊತ್ತು ಶವಗಾರ ಕಾಯುವ ಮಹಾದೇವ ಎಂಬ ಕೆಲಸಗಾರನನ್ನು ಪ್ರೇತ ಹೆಸರಿಡಿದು ಕೂಗುತ್ತದೆ ಎಂಬೆಲ್ಲಾ ಸುದ್ದಿಗಳು ಹರಡಿಕೊಂಡಿದ್ದವು. ಆದರೆ ಆ ಮಹಾದೇವನನ್ನೆ ಕೇಳಿದರೆ, ಸ್ವಾಮಿ ದಿನಕ್ಕೆ ಹಲವಾರು ಹೆಣ ನೋಡ್ತೀನಿ. ಇಲ್ಲೆ ಶವಾಗಾರದ ಪಕ್ಕದ ಕೊಠಡಿಲೆ ಮಲಗ್ತೀನಿ. ಯಾವ ದೆವ್ವ ಭೂತನು ಇಲ್ಲಾ ಸ್ವಾಮಿ. ಅದರ ಮೇಲೆ ನನಗ್ಯಾಕೆ ಭಯ. ಇಷ್ಟೊಂದು ಹೆಣ ಕಾಯುವ ನನ್ನೆ ನೋಡಿ ಅದು ಹೆದರಿರಬೇಕು. ಅದಕ್ಕೆ ನನ್ನ ಕಣ್ಣಿಗೆ ಬೀಳಲ್ಲ ಅಂತ ತಮಾಷೆಯಾಗಿ ಮಾತನಾಡುತ್ತಾನೆ. ರಾತ್ರಿಯಲ್ಲಿ ಮಹಾದೇವ ಅಂತ ಕೂಗುವ ಶಬ್ದವಾಗುತ್ತಲ್ಲ ಹೌದ ಎಂದರೆ ಹೌದು ಪೊಲೀಸಿನವರು ಒಮ್ಮೊಮ್ಮೆ ಕೂಗುವುದುಂಟು. ಅದು ಆಕ್ಸಿಡೆಂಟ್ ಕೇಸ್‌ಗಳಿರ‍್ತವಲ್ಲ ಸ್ವಾಮಿ ಅದನ್ನ ಕೇಳಿ ಕೆಲಜನ ಈ ರೀತಿ ಹೇಳಿರಬೇಕು ಅಂತಾನೆ ಮಹದೇವಯ್ಯ. ಇದೇ ರೀತಿಯ ದೂರುಗಳು ಕೇಳಿ ಬರುವ ಆಸ್ಪತ್ರೆ ನಿಮ್ಹಾನ್ಸ್ ಆಸ್ಪತ್ರೆ ಹಿಂದಿರುವ ಸಂಜಯ್ ಗಾಂಧಿ ಆಸ್ಪತ್ರೆ. ಇಲ್ಲಿನ ನರ್ಸ್‌ಗಳು ಹೇಳುವ ಪ್ರಕಾರ ರಾತ್ರಿ ಹೊತ್ತಿನಲ್ಲಿ ಕಿಟಕಿ ಗಾಜುಗಳಿಗೆ ಕಲ್ಲು ಬೀಳುತ್ತವೆ. ಹೆಜ್ಜೆ ಸಪ್ಪಳ ಕೇಳಿಸುತ್ತದೆ ಎಂದು ಆದರೆ ಪುಂಡ ಪೊಕರಿಗಳು ಹಾಗೆಲ್ಲ ಮಾಡಿರುವ ಸಾಧ್ಯತೆಗಳು ಇವೆ. ಅಕಸ್ಮಾತ್ ಕೆಲವರಿಗೆ ಆಗಾಗ ಕಾಣಿಸಿಕೊಳ್ಳೊ ಆತ್ಮವೇ ಇಲ್ಲೂ ಕಾಣಿಸಿಕೊಂಡಿದ್ದರೂ ಅಚ್ಚರಿ ಏನಿಲ್ಲ!
ಹುಟ್ಟಿದ ಮಗು ಮಾತನಾಡಿತಲ್ಲ ಅದು ಪ್ರೇತವೇ
ಬಳ್ಳಾರಿ ಮೂಲದ ಒಂದು ಹಳ್ಳಿಯಲ್ಲಿ ಮಧ್ಯಮ ವರ್ಗದ ಮನೆಯೊಂದರಲ್ಲಿ ಕೆಲ ವರ್ಷಗಳ ಹಿಂದೆ ಒಂದು ಮಗು ಜನಿಸಿತ್ತು. ಅದು ಭರ್ಜರಿ ಸುದ್ದಿ ಹಾಗೂ ವಿಸ್ಮಯವೇ ಸರಿ. ಅದೊಂದು ವಿಲಕ್ಷಣ ರೀತಿಯಲ್ಲಿ ಜನ್ಮ ತಾಳಿದ ಮಗು ಅದು. ಹುಟ್ಟಿದಾಗ ಕರಳು ಹೊಟ್ಟೆಯ ಹೊರಗಿತ್ತು. ನೋಡಲು ವಯಸ್ಸಾದ ಮುದುಕನಂತಿತ್ತು. ನೋಡಿದ ಡಾಕ್ಟರ್ ಈ ಮಗು ಬದುಕುವುದು ಸಾಧ್ಯವಿಲ್ಲ ಎಂದಿದ್ದಾರೆ. ಆ ಮಗುವನ್ನು ನೋಡಲು ಜನರು ಸಾಕಷ್ಟು ಮಂದಿ ಅಕ್ಕಪಕ್ಕದ ಊರುಗಳಿಂದೆಲ್ಲಾ ಬಂದಿದ್ದಾರೆ. ಅಚ್ಚರಿಯ ವಿಷಯ ಅಂದರೆ ಹುಟ್ಟಿದ ೧೦ ಗಂಟೆಗಳಲ್ಲಿ ಅದು ಮಾತನಾಡುತ್ತಿತ್ತು. ಅಪ್ಪ ಅಂದರೆ ಅದು ಅಪ್ಪ ಎನ್ನುತ್ತಿತ್ತು. ಅಮ್ಮ ಎಂದರೆ ಅದು ಅಮ್ಮ ಎನ್ನುತ್ತಿತ್ತು. ನಾವು ಹೇಗೆಲ್ಲಾ ಮಾತನಾಡುತ್ತೀವೊ ಅದು ಹಾಗೆಲ್ಲಾ ಮಾತನಾಡುತ್ತಿತ್ತು. ಜನ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತೆ ಅಂತಾರಲ್ಲ ಹಾಗಾಯಿತು ಇದು ಅಂದುಕೊಂಡರು. ನಿಜಕ್ಕೂ ಅದು ಅಚ್ಚರಿ ಮೂಡಿಸುವಂತಹ ಸಂಗತಿ. ಕುರಾನ್‌ನ ಪ್ರಕಾರ ಮುಸ್ಲಿಂ ಗುರುಗಳೊಬ್ಬರು ಹೇಳುವಂತೆ ಇದು ಸೈತಾನನ ಸಂತತಿಯಂತೆ. ಯಾವುದೊ ಆತ್ಮ ದೈವ ಶಕ್ತಿಗೆ ಹೆದರಿ ಈ ಮಗು ಹೊಟ್ಟೆಯಲ್ಲಿರುವಾಗಲೆ ಆ ಮಗುವಿನ ದೇಹ ಹೊಕ್ಕು ತಪ್ಪಿಸಿಕೊಂಡು ಅಲ್ಲೆ ಬೆಳೆದು ಈ ರೀತಿ ವಿಕಾರ ರೂಪದಲ್ಲಿ ಜನ್ಮ ತಳೆದಿದೆ ಎನ್ನುತ್ತಾರೆ. ಕಾರಣ ದೈವಶಕ್ತಿ. ಪ್ರೇತವನ್ನು ಕೊಲ್ಲಲು ಹೋಗಿ ಮಗುವನ್ನು ವಿನಾಕಾರಣ ಕೊಲ್ಲುವುದಿಲ್ಲ ಎಂದ ರೀತಿ ಆತ್ಮ ಈ ಕೆಲಸ ಮಾಡಿದೆ ಅನ್ನುತ್ತಾರೆ. ಈ ಸೂಚನೆ ಪ್ರಪಂಚದ ವಿನಾಶವೊ, ಸೈತಾನನ ಸಂತಾನವೊ ಹೀಗೊಂದು ಮಗು ಇಷ್ಟು ಭಯಾನಕವಾಗಿ ಹುಟ್ಟಿ ಮಾತನಾಡಿದ ರೀತಿ ನಾಗರೀಕರ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.
                                                                                                                                  -ನವೀನ್ ಮರಳವಾಡಿ

No comments:

Post a Comment