Tuesday 24 July 2012

ಮುತ್ತತ್ತಿ ಕಾಡಿನಲ್ಲಿ...! ಕಾಮ ಪಿಶಾಚಿ...!


ಆತ್ಮಗಳು, ಅಂತರ್ ಆತ್ಮಗಳು, ಪ್ರೇತಾತ್ಮಗಳ ಬಗ್ಗೆ ನಂಬಿಕೆ ಇದ್ದವರಿಗೆ ಕುತೂಹಲವಿದ್ದವರಿಗೆ ನಿಜಕ್ಕೂ ಇದು ರೋಚಕ, ಭಯಾನಕ. ಈ ಕಾಲದಲ್ಲೂ ವಿಜ್ಞಾನಿಗಳು ಆತ್ಮಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದಾರೆ. ಅವುಗಳ ಶಕ್ತಿ ಮತ್ತು ಚಲನೆಯ ಬಗ್ಗೆ ಸಂಶೋಧಿಸಿದ್ದಾರೆ. ವಿಶ್ವದಲ್ಲಿ ಶೇಕಡ ೪೦% ರಷ್ಟು ಜನ ದೆವ್ವ ಭೂತವೆಂಬುದೆಲ್ಲ ಇಲ್ಲ ಎಂದರು. ಇನ್ನುಳಿದ ೬೦% ನಷ್ಟು ಜನ ಈ ಬಗ್ಗೆ ನಂಬಿಕೆ ಹೊಂದಿದ್ದಾರೆ. ಆತ್ಮಗಳ ಬಗ್ಗೆ ಕುತೂಹಲವಿಟ್ಟುಕೊಂಡಿದ್ದಾರೆ. ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.  ಅಂದ ಹಾಗೆ ಈ ವರದಿಯ ಉದ್ದೇಶ ದೆವ್ವ ಇದೆ ಅಥವಾ ಇಲ್ಲಾ ಎಂಬ ಚರ್ಚೆಗಲ್ಲ. ಮುತ್ತತ್ತಿ ಕಾಡಿನಲ್ಲಿ ಇತ್ತೀಚೆಗೆ ಆಗುತ್ತಿರುವ ಘಟನೆಗಳು. ಅದರಿಂದ ಬೆಚ್ಚಿ ಬಿದ್ದ ಜನಗಳು. ಮತ್ತು ಅಲ್ಲಿ ಆದ ಆತ್ಮಹತ್ಯೆಗಳು, ಕೊಲೆಗಳು, ಅತ್ಯಾಚಾರಗಳು. ಇವನ್ನೆಲ್ಲ ಮುಂದಿಟ್ಟುಕೊಂಡು ಸಿದ್ಧಪಡಿಸಿದ ರೋಚಕ ವರದಿ. ಮುತ್ತತ್ತಿ ಅಂದ ತಕ್ಷಣ ನೆನಪಾಗುವುದು ಭಯಾನಕ ಕಾಡು, ಘೋಳಿಡುವ ಪ್ರಾಣಿಗಳು, ಕಾಡು ಮೊಲಗಳು, ಗರಿಬಿಚ್ಚಿ ನರ್ತಿಸುವ ನವಿಲುಗಳು, ನಾಯಿಯಂತೆ ಜೋರಾಗಿ ಕೂಗಿಕೊಳ್ಳುವ ನರಿಗಳು, ಜುಳು-ಜುಳು ಹರಿವ ನದಿ ರಾಕ್ಷಸಗಾತ್ರದ ಮೊಸಳೆಗಳು, ಹಿಂಡುಗಟ್ಟಲೆ ಆನೆಗಳು. ದಂಡು ಕಟ್ಟಿಕೊಂಡು ತಿರುಗವ ಕೋತಿಗಳು. ಆದರೆ, ಅದೆಲ್ಲ ೮೦ರ ದಶಕದ ಮಾತು. ಈಗ ಎಲ್ಲ ಪ್ರಾಣಿ ಪಕ್ಷಗಳ ಸಂತತಿ ಕ್ಷೀಣಿಸಿದೆ. ಅಲ್ಲಲ್ಲಿ ಆನೆಗಳು ರಸ್ತೆಗೆ ಅಡ್ಡಲಾಗಿ ಬಂದು ನಿಲ್ಲುತ್ತದೆ. ಅಷ್ಟು ಬಿಟ್ಟರೆ ಕಾಡು ಇಂದಿಗೂ ಸೊಂಪಾಗಿದೆ.
ಹುಲಸಾಗಿ ಬೆಳೆದಿದೆ. ನದಿ ತುಂಬಿ ಹರಿಯುತ್ತದೆ. ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತಿದೆ. ಕಣ್ಣಿಗೆ ಹಿತವಾಗಿ ಕಾಣಿಸುತ್ತಿದೆ. ಅದನ್ನು ಹಾಗೆ ಉಳಿಸಿಕೊಳ್ಳಲೂ ಅರಣ್ಯ ಸಿಬಂದಿಗಳಿಂದ ಆಗುತ್ತಿಲ್ಲವಾದರಿಂದ. ಇನ್ನು ಹತ್ತು ವರುಷಗಳಲ್ಲಿ ಮುತ್ತತ್ತಿ ಬರಿದಾಗುವುದರಲ್ಲಿ ಎರಡು ಮಾತಿಲ್ಲ. ಭಾನುವಾರ ಮತ್ತು ರಜಾದಿನಗಳು ಬಂದರೆ ಒಂದೊಂದು ಲಾರಿ ಲೋಡಿನಷ್ಟು ತ್ಯಾಜ್ಯಗಳು ಬಿದ್ದು ಇಲ್ಲಿನ ಪರಿಸರವನ್ನು ಮತ್ತು ನದಿ ನೀರಿನ ಶುಚಿತ್ವವನ್ನು ಮಲೀನಗೊಳಿಸುತ್ತಿದೆ. ಅಷ್ಟೇ ಅಲ್ಲ ಹತ್ಯೆಗಳೂ ಆತ್ಮಹತ್ಯೆಗಳೂ ನದಿಯ ನೀರಿನಲ್ಲಿ ಶವವಾಗಿ ಗಂಗೆ ಕಲುಷಿತೆಯಾಗುತ್ತಿದ್ದಾಳೆ. ಅಂದ ಹಾಗೆ ಇಲ್ಲಿ ತೇಲುವ ಹೆಣಗಳು ಯಾರದೆಂದು ಗುರುತು ಪತ್ತೆಯಾಗುವುದಿಲ್ಲ. ಆ ಬಗ್ಗೆ ಪ್ರಕರಣವು ದಾಖಲಾಗುವುದಿಲ್ಲ. ಇನ್ನೆಲ್ಲಿ ತನಿಖೆಯ ಮಾತು. ಅದು ಎಲ್ಲರಿಗೂ ಗೊತ್ತಿರುವ ಸತ್ಯ ಆದರೆ ಈಗ ಕೇಳಿ ಬರುತ್ತಿರುವುದು ಭೂತದ ಕಥೆ. ನಡುರಾತ್ರಿಯಾದರೆ ನಾಯಿಗಳು ಊಳಿಡಲು ಶುರುಮಾಡುತ್ತವಂತೆ. ಅದರ ಹಿಂದೆಯೇ, ಹೆಂಗಸೊಬ್ಬಳು ವಿಕಾರವಾಗಿ ಕಿರುಚುವ ಶಬ್ಧ ಕೇಳಿ ಬರುತ್ತದೆಯಂತೆ. ಅದರ ಒಟ್ಟೊಟ್ಟಿಗೆ ಗಂಡಸಲು ಗುಸು-ಗುಸು ವಿಕಾರವಾಗಿ ಮಾತನಾಡುವ ಶಬ್ಧ. ಮಗುವೊಂದು ಅಳುವ ಶಬ್ಧ, ಅಷ್ಟಲ್ಲದೆ ವಸತಿಗೃಹಗಳ ಮೇಲೆ ಕಲ್ಲುಗಳು ಬೀಳುವುದು, ಬಾಗಿಲು ಕಿಟಕಿಗಳು ಗಾಳಿ ಬೀಸದಿದ್ದರು ಬಡಿದುಕೊಳ್ಳುವುದು, ಹೀಗೆ ವಿಚಿತ್ರಾತಿ ವಿಚಿತ್ರಗಳು ಘಟಿಸುತ್ತಿವೆಯಂತೆ. ಈ ಬಗ್ಗೆ ಕೆಲ ಸ್ಥಳೀಯರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ತಮ್ತೆ ಕೆಲವರ ಅನುಭವಕ್ಕೆ ಬಂದಿಲ್ಲ. ಈ ಬಗ್ಗೆ ಸ್ಥಳೀಐರು ಹೌದು ಸಾರ್ ನಾವು ಆ ವಿಕಾರ ಶಬ್ಧವನ್ನು ಕೇಳಿದ್ದೇವೆ. ಎಲೆಲ್ಲೂ ಸತ್ತವರು ದೆವ್ವಗಳಾಗುತ್ತಾರೆ ಇನ್ನು ವಯಸ್ಸಾಗದೆ ಆಕಸ್ಮಿಕವಾಗಿ ಇಲ್ಲಿ ಸಾವು ಕಂಡವರು ಯಾಕೆ ಭೂತವಾಗಿರಬಾರದು ಅಂತ ವಾದಿಸುತ್ತಾರೆ ಮತ್ತು ಭೀತಿಯನ್ನು ವ್ಯಕ್ತಪಡಿಸುತ್ತಾರೆ. ಮತ್ತು ಪ್ರವಾಸಕ್ಕೆ ಬಂದವರಿಗೆ ಮಟ-ಮಟ ಮಧ್ಯಾಹ್ನದ ಹೊತ್ತು ನೀರಿಗಿಳಿದು ಬೇಡಿ ಪಿಶಾಚಿ ಕಾಟ ನೀರಿನೊಳಗೆ ಅದುಮಿ ಬಿಡುತ್ತದೆ. ಹುಷಾರು ಅಂತ ಹೇಳಲು ಮರೆಯುವುದಿಲ್ಲ. ಹೀಗಾಗಿ ಪ್ರವಾಸಿಗರು ಈಗ ಮುತ್ತತ್ತಿ ಹೆಸರು ಕೇಳೀದ್ರೆ ಭಯಪಡುತ್ತಿದ್ದಾರೆ. ವಾಸ್ತವಾಂಶ ಹೀಗಿರಬೇಕಾದ್ರೆ, ಅದೊಂದು ಘಟನೆ ಜನರನ್ನು ಮತ್ತಷ್ಟು ಭಯ ಬೀಳುವಂತೆ ಮಾಡಿದೆ.
ಆಗಸ್ಟ್ ಮೊದಲವಾರ
ಅಂದು ಶನಿವಾರ ಬೆಂಗಳೂರಿನಿಂದ ಪ್ರವಾಸಕ್ಕೆ ಅಂತ ಮುತ್ತತ್ತಿಗೆ ಹೊರಟ ಯುವಕರ ತಂಡವೊಂದು. ಸಂಜೆಯ ಹೊತ್ತಿಗೆ ಕಾಡು ಸೇರಿಕೊಂಡಿದೆ. ಅಂದು ರಾತ್ರಿ ಭರ್ಜರಿ ಪಾರ್ಟಿ ಮಾಡಿ ಒಂದೆಡೆ ನದಿಯ ಹತ್ತಿರ ಓಮಿನಿಕಾರನ್ನು ನಿಲ್ಲಿಸಿ. ಕಟ್ಟಿಗೆಗೆ ಬೆಂಕಿ ಹಚ್ಚಿ ಕಾಯುತ್ತ ಕುಡಿಯುತ್ತ ಎಂಜಾಯ್ ಮಾಡಿದೆ. ಅಚ್ಚರಿ ಅಂದರೆ ಅವರೆಲ್ಲ ಬೆಂಗಳೂರಿನಿಂದ ಬಂದಾಗಲೇ ಭಾನುವಾರ ಬಾಡೂಟ ಮಾಡುವ ಸಲುವಾಗಿ ಮೂರು ನಾಟಿ ಕೋಳಿಗಳನ್ನು ತಂದಿದ್ದರು. ಅವುಗಳನ್ನು ಕಾರಿನ ಸೀಟುಗಳನೆಲ್ಲ ಮಡಚಿ ಆ ರಾತ್ರಿ ಕಾಲುಕಟ್ಟಿ ಒಳಗೆ ಬಿಚ್ಚಿದ್ದರು. ಆ ಗುಂಪು ಅಂದು ರಾತ್ರಿ ಹೆಂಗಸೊಬ್ಬಳು ವಿಕಾರವಾಗಿ ಕಿರುಚಿಕೊಳ್ಳುವ ಶಬ್ಧವನ್ನು ಕೇಳಿದ್ದಾರೆ. ಜತೆಗ ಮಗು ಅಳುವ ಸದ್ದನ್ನು ಆಲಿಸಿದ್ದಾರೆ. ಆದರೆ ಹತ್ತಿರದಲ್ಲೆ ಸ್ಥಳೀಯರ ಹೋಟೆಲ್ ಕಂ ಮನೆಗಳಿದ್ದದ್ದರಿಂದ ಅಲ್ಲಿಂದ ಬಂದ ಶಬ್ಧವಿರಬೇಕು ಅಂದುಕೊಂಡು ಸುಮ್ಮನಾಗಿದ್ದಾರೆ. ನಂತರ ಎಲ್ಲರೂ ಕಂಠಮಟ್ಟ ಕುಡಿದದ್ದರಿಂದ ನಿದಿರೆ ಬಂದು ಅಲ್ಲೆ ಹುಲ್ಲುಹಾಸಿನ ಮೇಲೆ ಜಮಖಾನ ಹಾಸಿಕೊಂಡು ಮಲಗಿ ನಿದ್ದೆ ಹೋಗಿದ್ದಾರೆ.
ಕಣ್ಣಿಗೆ ಬಿತ್ತು ಪಿಶಾಚಿ
ಅದು ಹುಣ್ಣಿಮೆಯ ಅಜುಬಾಜಿನ ದಿನ. ರಾತ್ರಿ ಪಾರ್ಟಿ ಮಾಡಿ ಮಲಗಿದ್ದರು. ರಾತ್ರಿ ಕಳೆದು ಬೆಳಕು ಹರಿಯತೊಡಗಿದೆ. ಆಗ ಬೆಳಗಿನ ಜಾವಾ ಸುಮಾರು ನಾಲ್ಕೂವರೆ ಸಮಯ, ಪಿಕ್ನಿಕ್‌ಗೆ ಅಂತ ಬಂದಿದ್ದ ಹುಡುಗರ ಪೈಕಿ ಒಬ್ಬಾತನಿಗೆ ಬಹಿರ್ದೆಸೆಗೆ ಹೋಗಬೇಕೆನ್ನಿಸಿದೆ. ಆತ ಅಲ್ಲೆ ಪಕ್ಕದಿಲ್ಲಿದ್ದ ಬೇಲಿ ಮರೆಗೆ ಹೋಗಿ ಕೆಲಸ ಮುಗಿಸಿ ತೊಳೆದುಕೊಳ್ಳಲು ನದಿದಡಕ್ಕೆ ಬಂದಿದ್ದಾನೆ. ತೊಳೆದುಕೊಳ್ಳುತ್ತಿರುವಾಗಲೆ, ಮುಸುಕು - ಮುಸುಕು ಕತ್ತಲಲ್ಲಿ ಯಾರೋ ನಡೆದು ಬರುವಂತೆ ಕಂಡುಬಂದಿದೆ. ತಲೆ ಎತ್ತಿ ನೋಡಿದರೆ ಎದುರಿಗೆ ನಡೆದು ಬರುತ್ತಿದ್ದವಳೊಬ್ಬ ಹೆಂಗಸು. ಆಕೆ ಬೀದಿ ಬದಿಯ ವೇಶ್ಯೆಯಂತೆ ಸಖತ್ ಮೇಕಪ್ ಮಾಡಿಕೊಂಡಿದ್ದಳಂತೆ. ಯಾರೋ ಹೆಂಗಸಿರಬೇಕು ಅಂತ ನಾಚಿಕೆಯಿಂದ ಚಡ್ಡಿಯೇರಿಸಿಕೊಂಡಿದ್ದಾನೆ. ಹತ್ತಿರ ಬಂದ ಹೆಂಗಸಿನ ಆಕೃತಿ, ತನ್ನ ಕ್ಷುದ್ರರೂಪ ತೋರಿಬಿಟ್ಟಿದೆ. ಬಾಯಿ ತೆರೆದು ಎದೆ ಯುದ್ದಕ್ಕೆ ನಾಲಿಗೆ ಚಾಚಿ, ವಿಕಾರವಾಗಿ ಕಿರುಚಿಕೊಂಡಿದೆ. ಅಷ್ಟೇ ಆಕೆಯ ಮೈಮೇಲೆಲ್ಲ ರಕ್ತ ಒಸರಿದೆ. ಅಷ್ಟೇ ಅದನ್ನು ನೋಡಿದ ಹುಡುಗ ಎದ್ದನೋ ಬಿದ್ದನೋ ಅಂತ ಗೆಳೆಯರಿದ್ದ ಜಾಗ ತಲುಪಿಕೊಂಡಿದ್ದಾನೆ. ಆಗ ಸಮಯ ಐದುಗಂಟೆ ಎಲ್ಲರನ್ನು ಎದ್ದೇಳಿ ದೆವ್ವ.. ದೆವ್ವ.. ಅಂದಿದ್ದಾನೆ. ಗಡತಾಗಿ ನಿದ್ದೆ ಹೊಡೆಯುತ್ತಿದ್ದ ಹುಡುಗರು ಎಲ್ಲೊ ಕನಸು ಕಂಡಿರಬೇಕು. ಅದಕ್ಕೆ ಹೆದರಿಕೊಂಡಿದ್ದಾನೆ. ಅಂತ ಎಳೆದು ತಮ್ಮ ಮಧ್ಯೆಕ್ಕೆ ಮಲಗಿಸಿಕೊಂಡಿದ್ದಾರೆ. ಅದರೂ ಆ ವಿಕಾರ ರೂಫದ ಹೆಂಗಸನ್ನು ನೋಡಿದ ಹುಡುಗ ಮಾತ್ರ ನಡುಗುತ್ತಲೆ ಬೆಳಕು ಹರಿಸಿದ್ದಾನೆ. ಬೆಳಗಾಗುತ್ತಲೆ ಎಲ್ಲರಿಗೂ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾನೆ. ಆದರೆ ಅದನ್ನು ನಿಜ ಅಂತ ನಂಬಲು ಯಾರಿಂದಲೂ ಸಾಧ್ಯವಾಗಲಿಲ್ಲ. ಎಲ್ಲರೂ ಉಡಾಫೆಯಿಂದ ಈವಿಲ್ ಡೆಡ್ ಸಿನಿಮಾ ನೋಡಿ ಕನಸ್ಸು ಕಂಡು ಹೆದರಿಕೊಂಡಿದ್ದಾನೆ ಅಂತ ತಮಾಷೆ ಮಾಡಿದ್ದಾರೆ.
ವೇಶ್ಯೆಯ ಕೊಲೆ
ಆ ನಂತರ ಕಾರನ್ನು ಅಲ್ಲಿಯೇ ನಿಲ್ಲಿಸಿ ಎಲ್ಲರು ಮುಖ ತೊಳೆದುಕೊಂಡು ಕಾಫಿ ಕುಡಿಯಲು ಊರಿನ ಒಳ ಹೋಗಿದ್ದಾರೆ. ಅಲ್ಲಿದ್ದ ತೆಂಗಿನಗರಿಯಿಂದ ನಿರ್ಮಿಸಿದ್ದ ಹೋಟೆಲಿನಲ್ಲಿ ಕಾಫಿ ಕುಡಿಯುತ್ತ ಹೋಟೆಲ್ ಮಾಲೀಕನಿಗೆ ಬೆಳಗಿನ ಜಾವ ನಡೆದ ಘಟನೆಯನ್ನು ಆ ಹುಡುಗ ವಿವರಿಸಿದ್ದಾನೆ. ಅದಕ್ಕೆ ಬೆರಗು ಗಣ್ಣಿನಿಂದ ಹುಡುಗರನ್ನೆ ದಿಟ್ಟಿಸಿ ನೋಡಿದ ಹೋಟೆಲಿನ ಮುದುಕ ಬದುಕೊಂಡೆ ಬಿಡು. ನೀನು ದಡದಲ್ಲಿ ಇಲ್ಲದ ನೀರಿನಲ್ಲಿ ಇದ್ದಿದ್ದರೆ ಅದುಮಿ ಸಾಯಿಸಿ ಬಿಡೋದೆನೋ. ಇನ್ನು ಹೆಂಗಸಿನ ಚಟವಿದ್ದು ಅದರ ಹಿಂದೆ ಹೋಗಿದ್ದೂ, ಮತ್ತೆ ನಿನ್ನ ಜೀವಂತವಾಗಿ ಯಾರು ನೋಡಲಾಗುತ್ತಿರಲಿಲ್ಲ. ಗೆದ್ದುಕೊಂಡೆ ಬಿಡು ಸ್ನಾನ ಮಾಡಿ ದೇವಸ್ಥಾನದಿ ಪೂಜೆ ಮಾಡಿಸಿಕೊಂಡು ಹೋಗಿಬಿಡಿ ಅಂದಿದ್ದಾನೆ. ಆಗ ನಿಜಕ್ಕೂ ಗುಂಪಿನಲ್ಲಿದ್ದ ಎಲ್ಲ ಹುಡುಗರಿಗೂ ತೊಡೆ ನಡುಗ ತೊಡಗಿದೆ. ಕಣ್ಣರಳಿಸಿ ಕುಳಿತು ಯಾರಾಕೆ? ಏನು ಕಥೆ? ಯಾಕೆ? ಹೀಗೆಲ್ಲಾ ಮಾಡುತ್ತಿದ್ದಾಳೆ ಅಂತ ಕೇಳಿದ್ದಾರೆ. ಆಗ ಮುದುಕ ಹೇಳಿದ್ದು ಸುಮಾರು ೨೫ ರಿಂದ ೩೦ ವರುಷ ಹಿಂದಿನ ಕಥೆ. ಅಂದ ಹಾಗೆ ಆತ ಹೇಳಿದ ಪ್ರಕಾರ ಕೊಲೆಯಾಗಿದ್ದವಳು ವೇಶ್ಯೆ. ಆಕೆಯನ್ನ ಎಲ್ಲಿಂದಲೊ ಕರೆತಂದು ಇಲ್ಲಿ ಕೊಲೆ ಮಾಡಲಾಗಿತ್ತು.
ಭೋಗಿಸಿ ಹತ್ಯೆಗೈದರು!
ಸುಮಾರು ಮೂವತ್ತು ವರುಷಗಳ ಹಿಂದೆ ನಾಲ್ಕೈದು ಮಂದಿ ಪುಂಡರು ಒಬ್ಬ ವೇಶ್ಯೆಯನ್ನು ಕರೆತಂದು, ನಾಲ್ಕೈದು ದಿವಸ ಅಲ್ಲೆ ಬಿಡುಬಿಟ್ಟಿದ್ದರಂತೆ. ಅಗಿನ್ನು ಈಗಿನಂತೆ ರಸ್ತೆ ಇರಲಿಲ್ಲ. ದಟ್ಟ ಕಾಡು, ಮೃಗಗಳು ದಾರಿಗೆ ಅಡ್ಡಲಾಗಿ ಬಂದು ನಿಲ್ಲುತ್ತಿದ್ದವು. ಜನರ ಓಡಾಟವು ಕಡಿಮೆ ಇತ್ತು. ಅರಣ್ಯ ಸಿಬ್ಬಂದಿಯೂ ಕಡಿಮೆ, ಇನ್ನು ಹೇಳಿಕೊಳ್ಳಲಿಕ್ಕೆ ಅಂತ ಇದದ್ದು ಒಂದೇ ವಸತಿ ಗೃತಹ. ಅಂದ ಹಾಗೆ ಆ ಸಮಯದಿ ಆ ಪುಂಡರು ಕರೆತಂದ ಹುಡುಗಿ ಸುಮಾರು ೨೫ ವರ್ಷ ವಯಸ್ಸಿನ ಅಸುಪಾಸಿನವಳು. ನೋಡಲಿಕ್ಕೆ ಮೈ ಕೈ ತುಂಬಿಕೊಂಡಿದ್ದ ಅಪ್ರತಿಮ ಸುಂದರಿ. ಯಾವ ಸಿನಿಮಾ ನಟಿಗೂ ಕಡಿಮೆ ಇಲ್ಲದಂತಹ ರೂಪ. ಅಂದ ಹಾಗೆ ಅವರು ಬಂದದ್ದು ಒಂದು ಅಂಬಾಸಿಡರ್ ಕಾರಿನಲ್ಲಿ. ಇದ್ದ ನಾಲ್ಕು ದಿನದಲ್ಲಿ ಎಲ್ಲರೂ ಪಾನಮತ್ತರಾಗಿರುತ್ತಿದ್ದರು. ಆ ಹೆಂಗಸಿಗೂ ಕುಡಿಯುವ ಚಟವಿತ್ತು. ಹೀಗೆ ಮಜಾ ಮಾಡಿದ ಪುಂಡರ ತಂಡ ನಾಲ್ಕನೆಯ ದಿನ ಅದೇನಾಯಿತೋ ಮೂವರು ಚೆನ್ನಾಗಿ ಕುಡಿದು ಅವಳಿಗೂ ಕುಡಿಸಿ ನದಿಯ ದಡದಲ್ಲಿದ್ದ ಮರದ ಕೆಳಗೆ ಆಕೆಯನ್ನು ಬೆತ್ತಲು ಮಾಡಿ ಮೂವರು ಒಬ್ಬರಾದ ಮೇಲೆ ಒಬ್ಬರು ಸಂಭೋಗಿಸಿದ್ದಾರೆ. ನಂತರ ಅಲ್ಲೆ ಪಕ್ಕದಿ ಜಮಾಖಾನ ಹಾಸಿಕೊಂಡು ಕುಡಿಯಲು ಕುಳಿತಿದ್ದಾರೆ. ನಾಲ್ಕನೆಯವನು ಬೆತ್ತಲಾಗಿದ್ದವಳ ಬಳಿ ಹೋಗಿ ತಾನು ಸಂಭೋಗ ಶುರುಮಾಡಿದ್ದಾನೆ. ಆಕೆ ಕಾಮೋನ್ಮಾದದ ತುತ್ತ ತುದಿಯಲ್ಲಿ ಸುಖದ ನರಳಿಕೆಯಲ್ಲಿದ್ದಾಗ ಭೋಗಿಸುತ್ತಿದ್ದವನು ಹರಿತವಾದ ಚಾಕು ತಎಗೆದು ಆಕೆಯ ಕೊರಳನ್ನು ಕತ್ತರಿಸಿ ಹಾಕಿದ್ದಾನೆ. ನೆತ್ತರು ಹರಿದು ಆಕೆ ಪ್ರಾಣ ಬಿಟ್ಟಿದ್ದಾಳೆ. ಅರೆ ಕಾಮದ ಸುಖದಲ್ಲಿದ್ದ ಆಕೆಯ ಕಣ್ಣುಗಳಲ್ಲಿ ಅದೇ ಖುಷಿಯಿತ್ತು. ನಂತರ ಆಕೆಯನ್ನು ನದಿಗೆ ಎಸೆದು ಅಲ್ಲಿಂದ ಎಲ್ಲರೂ ಪರಾರಿಯಾಗಿದ್ದಾರೆ. ಆದರೆ ಜನರೆಲ್ಲ ನೋಡಿಕೊಳ್ಳುವ ಹೊತ್ತಿಗೆ ಆಕೆಯ ನಗ್ನದೇಹವನ್ನು ಮೊಸಳೆ ಅರ್ಧ ತಿಂದು ಹಾಕಿತು. ಪೊಲೀಸರಿಗೆ ವಿಷಯ ತಿಳಿಯುವ ಹೊತ್ತಿಗೆ ಆಕೆಯ ಶವದ ಪಳಯುಳಿಕೆಯೂ ಇರಲಿಲ್ಲ. ಇನ್ನು ಆಗ ಪೊಲೀಸ್ ಇಲಾಖೆ ಈಗಿನಷ್ಟು ಚುರುಕಾಗಿಯೂ ಇರಲಿಲ್ಲ. ಹಂಗಾಗಿ ಕೊಂದವರ‍್ಯಾರು? ಕೊಲೆಯಾದವಳ್ಯರು ಎಂಬ ಯಾವ ವಿಷಯವು ಹೊರಗೆ ಬರಲೇ ಇಲ್ಲ. ಇಂಥವು ಎಷ್ಟೊ ಬಿಡಿಸ್ವಾಮಿ ಅಂತ ಕಥೆ ಹೇಳಿ ಮುಗಿಸಿದ್ದ ಮುದುಕ. ಅಷ್ಟಲ್ಲದೆ ಹಾಗೆ ಕೊಲೆಯಾದವರು ಅಥವಾ ಆತ್ಮಹತ್ಯೆ ಮಾಡಿಕೊಂಡವರು ದೆವ್ವವಾಗಿ ಆಗಾಗ ಹೀಗೆ ಅವರಿವರ ಕಣ್ಣಿಗೆ ಬೀಳುತ್ತಿರುತ್ತಾರೆ ಅಂತ ಹೇಳೀದ್ದ ಮುದುಕ.
ಸಿನಿಮಾ ನಟರಿಗೂ ಕಾಟ
ಈ ಕಥೆಯನ್ನು ಕೇಳಿದ ಬೆಂಗಳೂರಿನಿಂದ ಬಂದಿದ್ದ ಹುಡುಗರು ದಂಗಾಗಿ ಹೋಗಿದ್ರು. ಎಂತಹ ಜಾಗಕ್ಕೆ ಬಂದೆವಪ್ಪ ಅಂತ ಭೀತಿಯಿಂದ ಅಂದುಕೊಂಡು ಮತ್ತೆ ಮತ್ತೊಂದು ಸುತ್ತಿನ ಕಾಫಿ ಕುಡಿದು ಸಿಗರೇಟು ಸೇದಿದವರು ಎದ್ದು ಇನ್ನೆನೂ ಹೋಟೆಲಿನಿಂದ ಹೊರಬರಬೇಕು ಅಷ್ಟರಲ್ಲಿ ಅವರ ಬೆನ್ನ ಹಿಂದೆಯೆ ಹೊರಬಂದ ಹೋಟೆಲಿನ ಮುದುಕ, ಹುಡುಗರ ಕುರಿತು ಸ್ವಾಮಿ ಅದಕ್ಕೆಲ್ಲ ಏನು ಹೆಚ್ಚಾಗಿ ತಲೆಕೆಡಿಸಿಕೊಂಡು ಹೆದರಿಕೊಳ್ಳಬೇಡಿ. ಈ ಪಿಶಾಚಿ ನಿಮ್ಮ ಒಬ್ಬರಿಗೆ ಕಂಡಿದ್ದಲ್ಲ. ಆ ಹೆಂಗಸಿನ ಕೊಲೆಯಾದ ವರುಷವೇ ಪ್ರಭಾಕರ್ ನಟಿಸಿದ್ದ ಕಾಡಿನ ರಾಜ ಚಿತ್ರದ ಶೂಟಿಂಗು ಇಲ್ಲೆ ನಡೆಯಿತು. ಆಗ ಸಹ ಕಲಾವಿದರು, ನಟರಿಗೆಲ್ಲ ಈ ಅನುಭವವಾಗಿತ್ತು. ಆಗ ಎಂ.ಪಿ.ಶಂಕರ್ ಮುತ್ತತ್ತಿರಾಯ (ಹನುಮಂತ)ನಿಗೆ ಬಾರಿ ಪೂಜೆಯನ್ನೆ ಮಾಡಿಸಿದ್ರು. ಇದೆಲ್ಲ ಇಲ್ಲಿ ಸಾಮಾನ್ಯ. ಅಂದ ಹಾಗೆ ಊಟಕ್ಕೆ ಕೋಳಿಸಾರು ಏನಾದ್ರು ಬೇಕಾದ್ರೆ ಮಾಡಿಕೊಡ್ತೀವಿ ಅಂದಿದ್ದ ಮುದುಕ. ಅದಕ್ಕೆ ಹುಡುಗರು ನಾವೇ ಮಾಡಿಕೊಳ್ಳುವ ಅಂತ ನಾಟಿ ಕೋಳಿ ತಂದಿದ್ದೇವೆ. ಇಲ್ಲಿ ನೋಡಿದ್ರೆ ಇವನು ಪಿಶಾಚಿ ನೋಡಿ ಹೆದರಿಕೊಂಡು ನಡುಗುತ್ತಿದ್ದಾನೆ. ನಾವು ಅಡುಗೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಕೋಳಿ ಕಾರಿನಲ್ಲಿದೆ ತಂದು ಕೊಡ್ತೀವಿ. ನೀವೆ ಅಡುಗೆ ಮಾಡಿಕೊಟ್ಟು ಬಿಡಿ ಅದೆಷ್ಟು ದುಡ್ಡಾಗುತ್ತೊ ನಾವು ಕೊಟ್ಟು ಬಿಡ್ತೇವೆ ಎಂದಿದ್ದಾರೆ. ಮುದುಕ ಒಪ್ಪಿ ತಲೆಯಾಡಿಸಿದ್ದಾನೆ. ನಂತರ ಎಲ್ಲರು ನದಿಯ ದಡ ತಲುಪಿದ್ದಾರೆ. ಅಲ್ಲಿ ಕಾರು ತೆರೆದು ನೋಡಿದೆ ಮತ್ತಷ್ಟು ಭಯಾನಕ ದೃಶ್ಯ ಅವರ ಕಣ್ಣಿಗೆ ಕಂಡಿತ್ತು.
                                                             ಕೋಳಿ ರಕ್ತಕಾರಿ ಸತ್ತಿದ್ದವು!
ಕಾರಿನಲ್ಲಿದ್ದ ಮೂರು ನಾಟಿಕೋಳಿಗಳ ಕತ್ತಿನಲ್ಲಿ ರಕ್ತ ಒಸರುತ್ತಿತ್ತು. ಎಲ್ಲ ಸತ್ತು ಬಿದ್ದಿದ್ದವು. ಆಶ್ಚರ್ಯ ಅಂದರೆ ಯಾವುದೇ ನಾಯಿ, ನರಿ ಬಂದು ಕೋಳಿಯನ್ನು ಸಾಯಿಸಿರಲಿಲ್ಲ. ಯಾಕೆಂದರೆ ಕಾರಿನ ಎಲ್ಲಾ ಕಿಟಕಿ ಬಾಗಿಲುಗಳನ್ನು ಮುಚ್ಚಿ ಲಾಕ್ ಮಾಡಲಾಗಿತ್ತು. ಆದರೂ ಆ ಕೋಳಿಗಳ ಸಾವು ಹೇಗಾಯ್ತು ಎಂಬ ಅಚ್ಚರಿ ಎಲ್ಲರನ್ನು ಕಾಡತೊಡಗಿತು. ಮತ್ತೆ ಕಾರು ಹತ್ತಿ ಹೋಟೆಲ್ ಬಳಿ ಬಂದು ಹೀಗೆ ಕೋಳಿಗಳು ಸತ್ತು ಹೋಗಿವೆ. ಅಂತ ಹೇಳಿದ್ದಾರೆ ಹುಡುಗರು. ಅದಕ್ಕೆ ಹೋಟೆಲಿನ ಮುದಕ ಬಿಡಿ ಇದು ಪಿಶಾಚಿಯದ್ದೆ ಕೆಲಸ ಅದೇ ಕೋಳಿಯ ರಕ್ತ ಹಿಂದೆ ಅಂತ ಮತ್ತಷ್ಟು ಹೆದರಿಸಿ ಬಿಟ್ಟಿದ್ದಾನೆ. ಹುಡುಗರು ಇನ್ನು ಇಲ್ಲಿ ಇರುವುದು ಬೇಡ ಹೊರಟು ಹೋಗುವ ಅಂತ್ಹೇಳಿ ಎರಡೆರಡು ಇಡ್ಲಿ ತಿಂದು ಅಲ್ಲಿಂದ ಕಾರನ್ನೇರಿ ಹೊರಟು ಬಿಟ್ಟಿದ್ದಾರೆ. ಆಗ ಬೆಳಗಿನ ಜಾವ ೮ ಗಂಟೆಯ ಸಮಯ. ಇಂತಹವೆಲ್ಲ ಅಲ್ಲಿ ಮಾಮೂಲಾಗಿ ನಡೆಯುತ್ತಿರುತ್ತವೆ. ಅಂತ ಅಲ್ಲಿಗೆ ಹೋಗಿ ಬಂದವರು ಸ್ಥಳೀಯರು ಹೇಳುತ್ತಿರುತ್ತಾರೆ. ಇದು ನಿತ್ಯದ ಕಥೆ ಅಂತ ಯಾರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಈ ಘಟನೆಯಾಗಿ ಸುಮಾರು ೧೦ ದಿವಸಗಳ ನಂತರ ನಮಗೆ ಈ ಸುದ್ದಿ ಮುಟ್ಟಿತ್ತು.
ಭೂತದ ಬೇಟೆ
ಹೀಗಾಗಿ ನಮಗೆ ಈ ಬಗ್ಗೆ ಮೊದಲಿಗೆ ಅನುಮಾನ ಬಂದದ್ದು. ದರೋಡೆಕೋರರ‍್ಯಾರು ಹೆಂಗಸೊಬ್ಬಳನ್ನು ಮುಂದೆ ಇಟ್ಟುಕೊಂಡು ಜನರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದಾರಾ ಅಂತ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆದವು. ಈ ಬಗ್ಗೆ ಕೇಳಿದ ನಮ್ಮ ಪತ್ರಿಕಾ ತಂಡದ ಹಲವರಲ್ಲಿ ಕೆಲಮಂದಿ ನಿಜಕ್ಕು ಅಲ್ಲಿ ದೆವ್ವವಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಯಾರೋ ಕಿಡಿಗೇಡಿಗಳು ಜನರನ್ನು ಸುಲಿಯಲು ಹೀಗೆಲ್ಲ ಮಾಡುತ್ತಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು. ಇನ್ನು ಸಾಕಷ್ಟು ಚರ್ಚೆಗಳಾದ ಮೇಲೆ, ಮಾತು ಸಾವು ಅನಂತರದ ಆತ್ಮ ಅದಕ್ಕೆ ಪಿಶಾಚಿಯ ರೂಫದ ಕಡೆ ಹೊರಳಿತು. ಈ ಬಗ್ಗೆ ಸಾಕಷ್ಟು ಓದಿ ತಿಳಿದುಕೊಂಡವರು ಕೂಡ ಆತ್ಮದ ಕಡೆ ಅಚ್ಚರಿ ವ್ಯಕ್ತಪಡಿಸಿದರು. ಇದು ನಿಜಕ್ಕೂ ಕಳ್ಳರ ಕೆಲಸವಾ? ಇಲ್ಲಿ ನಿಜವಾಗಲೂ ಮುತ್ತತ್ತಿಯಲ್ಲಿ ಅಂತರಾತ್ಮಗಳ ಅಟ್ಟಹಾಸವಿದೆಯಾ ನೋಡಿಯೇ ಬಿಡಬೇಕು ಅಂತ ತೀರ್ಮಾನಿಸಿ ಮುತ್ತತ್ತಿಗೆ ಹೋಗಲು ನಿರ್ಧರಿಸಿದೆವು.  ಕನಕಪುರದ ಸ್ಥಳೀಯ ಸ್ನೇಹಿತರು ನನ್ನೊಟ್ಟಿಗೆ ಬರಲು ಸಿದ್ಧಗೊಂಡರು. ಮೊದಲೇ ಹೇಳಿದ್ದೆ ಭಯಪಡುವವರು, ಬರುವುದು ಬೇಡ ದೆವ್ವ ಅಲ್ಲದಿದ್ದರೆ, ಕಳ್ಳರಿಂದಾದ್ರು ತೊಂದರೆಯಾಗಬಹುದು ಅಂತ್ಹೇಳಿದೆ. ಆದರೂ ದೆವ್ವ-ದೇವರು ಎರಡನ್ನು ನಂಬದ ನಮ್ಮ ತಂಡ ಭೂತದ ಬೇಟೆಗೆ ಸಜ್ಜಾಯಿತು! ಅದಕ್ಕೊಂದು ದಿನವು ನಿಗಧಿಯಾಯಿತು. ಶನಿವಾರ ರಾತ್ರಿ ಅದೇ ನದಿಯ ದಡದಲ್ಲಿ ಬಿಡುಬಿಡುವುದಾಗಿ ತೀರ್ಮಾನಿಸಿದೆವು. ಎಲ್ಲರ ದೆವ್ವದ ದರ್ಶನ ಮಾಡಲು ಉತ್ಸುಕರಾಗಿ ತಯಾರಾದರು. ಬ್ಯಾಗಿಗೊಂದಿಷ್ಟು ತಿಂಡಿ-ತಿನಿಸು ಕ್ಯಾಮರ ಕಳ್ಳರಿಂದೆನಾದ್ರು ತೊಂದರೆ ಆದಿತು ಅಂತ ಒಂದಷ್ಟು ಬಿದರಿನ ಕೋಲುಗಳು ಎಲ್ಲವನ್ನು ಓಮಿನಿ ಕಾರಿಗೆ ತುಂಬಿಕೊಂಡು ಶನಿವಾರ ಮಧ್ಯಾಹ್ನವೇ ಹೊರಟೆವು. ಜತೆಗೆ ಮತ್ತೆ ನಾಲ್ಕು ಜನ ನಮ್ಮ ಹುಡುಗರು. ಎರಡು ಯಮಹಾ ಬೈಕಿನಲ್ಲಿ ಬಂದರು. ಸುಮಾರು ೬ ಗಂಟೆಯ ಹೊತ್ತಿಗೆ ನಾವಿದ್ದ ೧೦ ಜನರ ತಂಡ ಮುತ್ತತ್ತಿಯನ್ನು ತಲುಪಿತು. (ಅದರಲ್ಲಿ ಇಬ್ಬರು ಟಿವಿ ಚಾನಲ್ ಪ್ರತಿನಿಧಿಗಳು) ಕೊಂಡು ಹೋಗಿದ್ದ ಆಹಾರ ಪದಾರ್ಥಗಳಿಂದ ಉಪ್ಪಿಟ್ಟು ಮಾಡಿಕೊಂಡು ತಿಂದು ಕಾಡನ್ನೆಲ್ಲ ಒಮ್ಮೆ ಸುತ್ತಾಡಿದೆವು. ನಂತರ ಕಾರನ್ನು ನದಿಯ ದಡಕ್ಕೆ ತಂದು ನಿಲ್ಲಿಸಿ ಮರಳಿನ ಮೇಲೆ ಜಮಖಾನ ಹಾಸಿಕೊಂಡು ಹರಟುತ್ತಾ ಪಿಶಾಚಿಯ ಆಗಮನಕ್ಕೆ ಬಿಟ್ಟ ಕಣ್ಣು ಬಿಟ್ಟ ಹಾಗೆ ಕಾದುಕುಳಿತೆವು.
ಆಕಾರವಿಲ್ಲದೆ ವಿಕಾರ ಶಬ್ಧ
ಉಹುಂ, ಅಲ್ಲಲ್ಲಿ ಜನರು ಬಿಡಾರ ಹೂಡಿದರೆ ಹೊರತು ಯಾವ ಕಳ್ಳನು ಬಾರಲಿಲ್ಲ. ಭೂತವು ಬರಲಿಲ್ಲ. ರಾತ್ರಿ ಸುಮಾರು ೧೨.೩೦ರ ಸಮಯ ಬೀಸುವ ತಂಪಾದ ಗಾಳಿ, ಮಂಪರು ತರಿಸಿತ್ತು ಎಲ್ಲರು ಆಕಾಶದಲ್ಲಿನ ನಕ್ಷತ್ರಗಳ ನೋಡುತ್ತ ನೆಲಕ್ಕೆ ಮೈಚಾಚಿ ಮಲಗಿದೆವು. ಎಲ್ಲರಿಗೂ ಇನ್ನೇನು ನಿದ್ದೆ ಬಂತು ಅನ್ನುವಷ್ಟರಲ್ಲಿ ಕೇಳಿತ್ತು ಹೆಂಗಸೊಬ್ಬಳು ಬಿಕ್ಕಳಿಸಿ ಅಳುತ್ತಿರುವಂತಹ ಶಬ್ಧ. ಅದರ ಹಿಂದೆಯ ಮಗು ಅಳುವ ಶಬ್ಧ ಗಂಡಸರ‍್ಯಾರು ಮಾತನಾಡುವ ಸದ್ದು, ಕಾಡಸುತ್ತ ಪ್ರತಿಧ್ವನಿಸುತ್ತಿತ್ತು. ಮಲಗಿದ್ದವರೆಲ್ಲ ಎದ್ದು ಕುಳಿತರು. ಕೈಗೆ ಟಾರ್ಚ್ ತೆಗೆದುಕೊಂಡು ಕಾರಿನಲಿದ್ದ ಬಿದಿರಿನ ಕೋಲುಗಳನ್ನು ಎತ್ತಿಕೊಂಡು ಶಬ್ಧ ಬಂದ ಕಡೆಯಲ್ಲಿ ಅಡ್ಡಾಡಿದೆವು. ಉಹುಂ ಯಾವುದೇ ಆಕಾರ ಕಾಣಲಿಲ್ಲ. ಹೀಗೆ ಜೀವನದಲ್ಲಿ ಭೂತ ನಂಬದ ನಾವು ಅಶರೀರವಾಣಿಯನ್ನು ಕೇಳಿದ್ದೆವು. ಅದ್ರೂ ಅದನ್ನು ದೆವ್ವ - ಪಿಶಾಚಿ ಅಂತ ನಂಬಲಿಕ್ಕೆ ನಾವು ಸಿದ್ಧರಿಲ್ಲ. ಹೀಗೆ ಕಾಡನ್ನೆಲ್ಲ ಸುಮಾರು ಎರಡು ಗಂಟೆಗಳ ಕಾಲ ತಿರುಗಾಡಿದೆವು. ಯಾರು ಕಾಣಲಿಲ್ಲ. ಆದರೆ ದೂರದಲ್ಲಿ ಒಬ್ಬ ವ್ಯಕ್ತಿ ಮೂತ್ರ ವಿಸರ್ಜನೆ ಮಾಡುತ್ತಿದ್ದಂಥೆ ಕಂಡಿತು. ಹಂಗಾಗಿ ಆ ಕಡೆ ಓಡಿದೆವು, ಆತ ನಮ್ಮ ಕೈಯಲ್ಲಿದ್ದ ಕೋಲುಗಳನ್ನು ನೋಡಿ ಭಯಬಿದ್ದು ಓಡತೊಡಗಿದ. ತುಂಬಾ ದೂರ ಓಡಲು ಸಾಧ್ಯವಾಗದೆ ಅಲ್ಲೆ ನಿಂತುಬಿಟ್ಟ ಆತ ನಮ್ಮನ್ನು ಕಳ್ಳ ಎಂದುಕೊಂಡು ಓಡಿದ್ದ. ಆತನ ಹೆಸರು ಬಸವರಾಜು. ಮುತ್ತತ್ತಿ ಊರಿನ ಸ್ಥಳೀಯರ ಮನೆಗೆ ಬಂದಿದ್ದ. ಅದನ್ನು ಕೇಳಿ ನಾವು ಬಿದ್ದು ಬಿದ್ದು ನಕ್ಕೆವು. ಮತ್ತೆ ವಾಪಸ್ಸು ನದಿಯ ದಡಕ್ಕೆ ಬಂದು ಮಲಗಿ ಆ ಶಬ್ಧ ಎಲ್ಲಿಂದ ಬಂತು. ಹಾಗೆ ಕೂಗಿಕೊಂಡವರ‍್ಯರು ಅಂತ ಸಾಕಷ್ಟು ಚಿಂತಿಸಿದೆವು. ಆ ಬಗ್ಗೆ ನಮಗೆ ಇಂದಿಗೂ ಅನುಮಾನ ಉಂಟು ಬೆಳಗಾಯಿತು. ಅಲ್ಲೆ ಭರ್ಜರಿ ಬಾಡೂಟ ಮುಗಿಸಿ ಮುತ್ತತ್ತಿ ಕಾಡು ಬಿಟ್ಟು ರಸ್ತೆಯ ಕಡೆ ಗಾಡಿ ತಿರುಗಿಸಿದೆವು. ಆಗ ಮರೆಯಲಾಗದ ಒಂದು ಘಟನೆ ನಡೆದು ಹೋಯ್ತು. ನಾವು ಕಾರಿನಲ್ಲಿ ಹಿಂದೆ ಬರುತ್ತಿದ್ದೆವು. ಬೈಕಿನಲ್ಲಿ ಮುಂದೆ ಹೋಗುತ್ತಿದ್ದ ನಮ್ಮ ತಂಡದ ಹುಡುಗರ ಬೈಕು ಸುಮಾರು ಮೂರು ಅಡಿ ಎತ್ತರಕ್ಕೆ ಹಾರಿ ದೊಪ್ಪನೆ ನೆಲಕ್ಕೆ ಬಿತ್ತು. ಸದ್ಯಕ್ಕೆ ಯಾರಿಗೂ ಪ್ರಾಣಾಪಾಯವಾಗಲಿಲ್ಲ. ಹಿಂದೆ ಕುಳಿತಿದ್ದಾತನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಕೊಂಚ ಬಿರುಸು ಹೆಚ್ಚಾಗಿದ್ದರು ಹಿಂದೆ ಕುಳಿತ್ತಿದ್ದವ ಬದುಕುಳಿಯುತ್ತಿರಲಿಲ್ಲ. ಅಚ್ಚರಿ ಅಂದರೆ ಆ ರಸ್ತೆಯಲ್ಲಿ ಗುಂಡಿ ಅಥವಾ ಹಬ್ಸ್ ತರಹದ್ದೇನು ಇರಲಿಲ್ಲ. ಆದರೂ ಬೈಕು ಹಾಗೆ ಮೇಲಕ್ಕಾರಿ ಕಳೆಬಿದದ್ದು ಯಾಕೊ ಎಂಬುದು ಇಂದಿಗೂ ಅರ್ಥವಾಗದೆ ಉಳಿದಿರುವ ಪ್ರಶ್ನೆ? ಆದರೆ ಕನಕಪುರ ಬಂದು ತಲುಪಿ ನಡೆದ ಬಗ್ಗೆ ಹಿರಿಯರೊಬ್ಬರ ಹತ್ತಿರ ಈ ವಿಷಯ ಪ್ರಸ್ತಾಪಿಸಿದೆವು. ಅದಕ್ಕೆ ಅವರು ಗಂಭೀರವಾಗಿ ಕೊಟ್ಟ ಉತ್ತರ ಇದು ಆತ್ಮದ ರಿಯಾಕ್ಷನ್ನು ಅಂತ ಅದು ಎಷ್ಟರ ಮಟ್ಟಿಗೆ ಸತ್ಯವೋ ಆತ್ಮ, ಪ್ರೇತಾತ್ಮ ಪರಮಾತ್ಮನಿಗೆ ಗೊತ್ತು! ಇನ್ನು ಕ್ಯಾಮರ ಕಣ್ಣಿಗೆ ದೆವ್ವ ಕಾಣಿಸುತ್ತೆ ಅಂತ ಕೆಲವು ಸೈಂಟಿಸ್ಟುಗಳು ಸಂಶೋಧನೆಯಲ್ಲಿ ಸಾಭೀತುಪಡಿಸಿದ್ದರಲ್ಲ. ಅದರಂತೆ ನಮ್ಮ ಕ್ಯಾಮರದಲ್ಲಿ ತಎಗೆದ ಪೋಟೋಗಳಲ್ಲೂ ಪಿಶಾಚಿಯ ದೃಶ್ಯ ಮೂಡಿರಲಿಲ್ಲ. ಆದರೆ ಅಲ್ಲಿ ಕೇಳಿದ ಶಬ್ಧ ಯಾರದ್ದು? ಸ್ಥಳೀಯರು ಹೇಳುವಂತೆ ಅದು ವೇಶ್ಯೆಯ ಪಿಶಾಚಿಯದ್ದ? ಎಂಬುದು ವಿಸ್ಮಯದ ಸಂಗತಿ. ನಿಜಕ್ಕೂ ಅಲ್ಲಿ ಕೊಲೆಯಾದ ವೇಶ್ಯೆ ಕಾಮಪಿಶಾಚಿಯಾಗಿ ಗಂಡಸರಿಗೆ ಮಾತ್ರ ತೊಂದರೆಕೊಡುತ್ತಿದ್ದಾಳ? ಎಂಬ ಯಕ್ಷ ಪ್ರಶ್ನೆಗೆ ಉತ್ತರ ಮಾತ್ರ ಅವರವರ ನಂಬಿಕೆಯಲ್ಲಿಯೇ ಇದೆ. ಆತ್ಮದ ಮೇಲೆ ನಂಬಿಕೆ ಇರುವವರು ಹೌದು ಅಂದರೆ, ಇಲ್ಲದವರು ಅದು ಭ್ರಮೆ ಅಂತಾರೆ. ಅಚ್ಚರಿ ಅಂದರೆ ೧೦ ಜನರ ನಮ್ಮ ತಂಡಕ್ಕೆ ಒಟ್ಟೊಟ್ಟಿಗೆ ಭ್ರಮೆ ಮೂಡಲು ಸಾಧ್ಯವಾ? ಎಂಬ ಪ್ರಶ್ನೆ ಇಂದಿಗೂ ನಮ್ಮನ್ನು ಕಾಡುತ್ತಿದೆ.
ರಾಜ್ ವಸತಿಗೃಹ ಅವನತಿಯ ಅಂಚಿನಲ್ಲಿ!
ಮುತ್ತತ್ತಿ ಕಾಡಿನ ಇತಿಹಾಸದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಮತ್ತು ಮುತ್ತತ್ತಿಯ ಅಚ್ಚರಿ ಸಂಗತಿಗಳ ಬಗ್ಗೆಯೂ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಇಲ್ಲಿಗೆ ಪ್ರವಾಸಕ್ಕೆ ಅಂತ ಬರುವವರು ಆ ಬಗ್ಗೆ ತಿಳಿದುಕೊಳ್ಳೂವ ಪ್ರಯತ್ನವನ್ನು ಮಾಡುವುದಿಲ್ಲ. ಕಾಡಿನ ಸೊಬಗನ್ನು ನೋಡಿ ಕಣ್ಣು ತುಂಬಿಸಿಕೊರ್ಳಳಲು ಬರುವವರು ತೀರಾ ಕಡಿಮೆ. ಕಠಮಟ್ಟೆ ಹೆಂಡ ಕುಡಿದು ಬಾಡು ಕಡಿಯಲು ಬರುವವರೆ ಹೆಚ್ಚು ಮುತ್ತತ್ತಿ ಎಂಬ ರಮಣೀಯ ಸಉಂದರ ಸೊಬಗಿನ ಪ್ರವಾಸಿ ತಾಣದ ಬಗ್ಗೆ ಮೊದಲಿಗೆ ಹೇಳುವುದಾದರೆ ಥಟ್ ಅಂತ ನೆನಪಿಗೆ ಬರುವುದು ನಟ ರಾಜ್‌ಕುಮಾರ್. ಇವರಿಗೂ ಮುತ್ತತ್ತಿಗೂ ಅವಿನಾಭಾವ ಸಂಬಂಧ. ಯಾಕೆಂದರೆ ರಾಜ್‌ಕುಮಾರ್ ಮನೆಯ ದೇವರು ಇಲ್ಲೆ ಇರುವ ಮುತ್ತತ್ತಿ ರಾಯ ದೇವರು. ಅದೇ ಮನೆದೇವರ ಹೆಸರನ್ನು ರಾಜ್‌ಗೆ ಇಟ್ಟಿದ್ರು ಸಿನಿಮಾಗೆ ಬರುವ ಮುಂಚೆ ಮುತ್ತಪ್ಪನಾಗಿದ್ದವರು ನಂತರ ರಾಜ್‌ಕುಮಾರ್ ಆದರು ರಾಜ್. ಸಿನಿಮಾರಂಗದಲ್ಲಿ ಮಿಂಚಿದ ಮೇಲೆ ಮುತ್ತತ್ತಿಗೆ ದೇವರ ದರ್ಶನಕ್ಕೆ ಅಂತ ಬಂದರೆ ತುಂಬಾ ಕಷ್ಟಪಟ್ಟು ಬರಬೇಕಿತ್ತು. ರಸ್ತೆ ಸರಿ ಇರಲಿಲ್ಲ. ಮತ್ತು ಕಾಡುಮೃಗಗಳು ಅಡ್ಡಗಟ್ಟಿ ನಿಲ್ಲುತ್ತಿದ್ದವು. ಬಂದರು ಉಳಿದುಕೊರ್ಳಳಲು ವಸತಿಯ ವ್ಯವಸ್ಥೆ ಇರಲಿಲ್ಲ. ಹೀಗಾಗಿ ರಾಜ್‌ಕುಟುಂಬದವರು ತಮಗಷ್ಟೇ ಅಲ್ಲ ಇಲ್ಲಿ ತಂಗಲು ಬರುವವರಿಗೆ ಸಹಾಯವಾಗಲಿ ಅಂತಲೇ ನಾಲ್ಕೈದು ರೂಮುಗಳು ಉಳ್ಳ ದೊಡ್ಡ ಹಾಲ್ ಇರುವಂತಹ ಒಂದು ರೀತಿಯಲ್ಲಿ ಮದುವೆ ಛತ್ರದಂತಹ ವಸತಿ ಗೃಹ ಕಟ್ಟಿಸಿದ್ದರು. ಅಲ್ಲಿ ಪ್ರವಾಸಿಗರಷ್ಟೆ ಅಲ್ಲ ಶೂಟಿಂಗ್ ಅಂತ ಬಂದ ಸಿನಿಮಾ ರಂಗದವರು ಉಳಿದುಕೊಳ್ಳುತ್ತಿದ್ದರು. ಸಾಕಷ್ಟು ಜನರಿಗೆ ಈ ವಸತಿ ಗೃಹ ಉಪಯೋಗವಾಗುತ್ತಿತ್ತು. ರಾಜ್‌ಕುಟುಂಬದವರು ಅಲ್ಲಿ ಸಂಸಾರಸ್ಥರಿಗೆ ಮಾತ್ರ ರೂಂ. ಸಿಗುವ ವ್ಯವಸ್ಥೆ ಮಾಡಿದ್ರು. ಅಬ್ಬೆಪಾರಿಗಳಿಗೆ ಮಜಾ ಮಾಡಲು ಹುಡುಗಿಯರನ್ನು ಕರೆತರುವವರಿಗೆ, ಕುಡಿದು ಗಲಾಟೆ ಮಾಡುವವರಿಗೆ ಯಾವುದೇ ಕಾರಣಕ್ಕೂ ವಸತಿ ಗೃಹ ಬಾಡಿಗೆಗೆ ಬೀಡುತ್ತಿರಲಿಲ್ಲ. ರಾಜ್ ತೀರಿಕೊಂಡ ಬಳಿಕ ಇಲ್ಲಿನ ದೇವಸ್ಥಾನಕಕ್ಕೆ ಅವರ ಕುಟುಂಬದವರ‍್ಯಾರೂ ಬಂದಂತಿಲ್ಲ. ಬಹುತೇಕ ರಾಜ್ ತೀರಿಕೊಂಡ ನಂತರ ಅವರು ಕಟ್ಟಿಸಿದ ವಸತಿ ಗೃಹವು ಪಾಳು ಬಿದ್ದಂತಾಗಿದೆ. ಅದನ್ನ ಉಳಿಸಿಕೊಳ್ಳವುವುದು ರಾಜ್ ಮನೆತನದ ಜವಾಬ್ದಾರಿ ಈ ಬಗ್ಗೆ ಪತ್ರಿಕೆ  ಅವರ ಕುಟುಂಬಕ್ಕೆ ಸಾಕಷ್ಟು ಬಾರಿ ತಿಳಿಸಿದೆ. ಅವರ‍್ಯಾರೂ ಈ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನು ಮುಂದಾದರೂ ರಾಜ್ ವಸತಿ ನಿಲಯವನ್ನು ಉಳಿಸಿಕೊಳ್ಳುವ ಪ್ರಯತ್ನವಾಗಲಿಮುತ್ತತ್ತಿಯ ಬಗ್ಗೆ ಬರೆಯುತ್ತ ಹೋದರೆ ರೋಚಕ ಸುದ್ದಿಗಳ ನೂರುಪುಟದ ಪುಸ್ತಕ ವೇ ಆಗಿ ಹೋಗುತ್ತದೆ. ಇರುವುಸರಲ್ಲೇ ಕೆಲವು ಪ್ರಮುಖವಾದ ವಿಷಯವನ್ನು ಹೇಳುವುದಾದರೆ ಇಡೀ ವಿಶ್ವವನ್ನೆ ಬೆಚ್ಚಿ ಬೀಳಿಸಿದಂತಹ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅರೋಪದಲ್ಲಿ ಭಾಗಿಯಾಗಿದ್ದ. ಕೈಕಾಲುಗಳು ಊನವಾಗಿದ್ದ ಕೆಲಮಂದಿ ಶ್ರೀಲಂಕಾದ ಎಲ್‌ಟಿಟಿ ಉಗ್ರಪಡೆ ಇದೇ ಮುತ್ತತ್ತಿಯಲ್ಲಿ ಬಂದು ಬಿಟ್ಟಿತ್ತು. ಗ್ರಾಮಸ್ಥರಿಗೆ ಇವರ ಮೇಲೆ ಅನುಮಾನ ಬಂದು ಪೊಲೀಸರಿಗೆ ವಿಷಯ ತಿಳಿಸಿ ಇವರನ್ನು ಖಾಕಿಗಳು ಸುತ್ತುವರಿಯುವಷ್ಟರಲ್ಲಿ ಎಲ್ಲರೂ ಕೊರಳಿನಲ್ಲಿದ್ದ ಸೈನೈಡ್ ತಾಯತ ಕಚ್ಚಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟರು. ಮಾಡಿಕೊಂಡ ಶ್ರೀಲಂಕಾ ಎಲ್‌ಟಿಟಿ ಉಗ್ರ ಉಗ್ರರೆಲ್ಲಾ ಪಿಶಾಚಿಗಳಾಗಿದ್ದಾರೆ.ಹೊತ್ತಿಲ್ಲದ ಹೊತ್ತಿಲ್ಲದ ಹೊತ್ತಿನಲ್ಲಿ ಕೈಇಲ್ಲದವರು ಕಾಲಿಲ್ಲದವರು ಪ್ರೇತವಾಗಿ ಓಡಾಡುತ್ತಿರುತ್ತಾರೆ. ಶ್ರೀಲಂಕಾ ತಮಿಳು ಭಾಷೆಯಲ್ಲಿ ಮಾತನಾಡುವ ಸದ್ದು ಕೇಳುತ್ತದೆ. ಎಂದೆಲ್ಲಾ ಸುದ್ದಿ ಹಬ್ಬಿತ್ತು. ಅದು ನಡೆದು ಸುಮಾರು ೧೮ರಿಂದ ೨೦ ವರುಷಗಳೇ ಕಳೆದು ಹೋಗಿವೆ. ಆಗೆಲ್ಲಾ ಅಲ್ಲಿಗೆ ಪ್ರವಾಸಿಗರು ಕಾಲಿಡಲುಹೆದರುತ್ತಿದ್ದರು. ಅದನ್ನೆ ಬಂಡವಾಳ ಮಾಡಿಕೊಂಡು ಕಾಡುಗಳು ಬೇಟೆಯಾಡುವುದು ಬೆಲೆ ಬಾಳುವ ಮರ ಕಡಿದು ಸಾಗಿಸುವುದು ಅಂತೆಲ್ಲ ಇಡೇ ಕಾಡನ್ನು ಕೊಳ್ಳೆ ಹೊಡೆದದ್ದು ಉಂಟು ಭೂತಗಳಂತೆ ವಿಕಾರವಾಗಿ ಕೂಗಿದರೆ ಯಾವೊಬ್ಬ ಅರಣ್ಯ ಸಿಬ್ಬಂಧಿಯಾಗಲಿ ಗ್ರಾಮಸ್ಥರಾಗಲಿ ಮನೆ ಬಿಟ್ಟು ಹೊರ ಬರುತ್ತಿರಲಿಲ್ಲ. ಹೀಗಾಗಿ ಕಾಡು ಗಳ್ಳರಿಗೆ ಇದು ಸುಲಲಿತ ಮಾರ್ಗವಿತ್ತು. ಮುಂದೊಂದು ದಿನ ಪೊಲೀಸರಿಗೆ ಸಿಕ್ಕು ಬಿದ್ದ ಪಾಖಂಡಿಗಳು ಈ ಸತ್ಯವನ್ನು ಒಪ್ಪಿಕೊಂಡಿದ್ರು. ಆಗ ಜನ ನಿರಾಳವಾಗಿ ನೆಮ್ಮಂದಿಯಿಂದ ಇರುತೊಡಗಿದರು. ಪ್ರವಾಸಿಗರು ಬರತೊಡಗಿದರು. ಈಗಲೂ ಅಂತಹದ್ದೆ ಕಿಡಿಗೇಡಿಗಳ ಗುಂಪು ಯಾವುದೋ ಬಲವಾದ ಕಾರಣಕ್ಕೆ ಭೂತದಂತೆ ಕೂಗಿ ಸರಿರಾತ್ರಿಯಲ್ಲಿ ಓಡಾಡಿ ಜನರನ್ನು ಬೆದರಿಸುತ್ತಿದ್ದಾರಾ? ಆ ಬಗ್ಗೆ ಅರಣ್ಯ ಸಿಬಂಧಿಯೆ ಒದು ಕಣ್ಣು ಇಡಬೇಕಾಗಿದೆ. ಇಲ್ಲವಾದಲ್ಲಿ ಏನಾದರೊಂದು ಅನಾಹುತ ನಡೆಯಬಹುದು ಇಲ್ಲ ಕಾಡಿನ ಸಂಪತ್ತು ಲೂಟಿಯಾಗಬಹದು. ಇದೊಂದು ಎಚ್ಚರವಿದ್ದರೆ ಒಳ್ಳೆಯದು.




























 

3 comments:

  1. ದು ಬೆಳಕು ಹರಿಯತೊಡಗಿದೆ. ಆಗ ಬೆಳಗಿನ ಜಾವಾ ಸುಮಾರು ನಾಲ್ಕೂವರೆ ಸಮಯ, ಪಿಕ್ನಿಕ್‌ಗೆ ಅಂತ ಬಂದಿದ್ದ ಹುಡುಗರ ಪೈಕಿ ಒಬ್ಬಾತನಿಗೆ ಬಹಿರ್ದೆಸೆಗೆ ಹೋಗಬೇಕೆನ್ನಿಸಿದೆ. ಆತ ಅಲ್ಲೆ ಪಕ್ಕದಿಲ್ಲಿದ್ದ ಬೇಲಿ ಮರೆಗೆ ಹೋಗಿ ಕೆಲಸ ಮುಗಿಸಿ ತೊಳೆದುಕೊಳ್ಳಲು ನದಿದಡಕ್ಕೆ ಬಂದಿದ್ದಾನೆ. ತೊಳೆದುಕೊಳ್ಳುತ್ತಿರುವಾಗಲೆ, ಮುಸುಕು - ಮುಸುಕು ಕತ್ತಲಲ್ಲಿ ಯಾರೋ ನಡೆದು ಬರುವಂತೆ ಕಂಡುಬಂದಿದೆ. ತಲೆ ಎತ್ತಿ ನೋಡಿದರೆ ಎದುರಿಗೆ ನಡೆದು ಬರುತ್ತಿದ್ದವಳೊಬ್ಬ ಹೆಂಗಸು. ಆಕೆ ಬೀದಿ ಬದಿಯ ವೇಶ್ಯೆಯಂತೆ ಸಖತ್ ಮೇಕಪ್ ಮಾಡಿಕೊಂಡಿದ್ದಳಂತೆ. ಯಾರೋ ಹೆಂಗಸಿರಬೇಕು ಅಂತ ನಾಚಿಕೆಯಿಂದ ಚಡ್ಡಿಯೇರಿಸಿಕೊಂಡಿದ್ದಾನೆ. ಹತ್ತಿರ ಬಂದ ಹೆಂಗಸಿನ ಆಕೃತಿ, ತನ್ನ ಕ್ಷುದ್ರರೂಪ ತೋರಿಬಿಟ್ಟಿದೆ. ಬಾಯಿ ತೆರೆದು ಎದೆ ಯುದ್ದಕ್ಕೆ ನಾಲಿಗೆ ಚಾಚಿ, ವಿಕಾರವಾಗಿ ಕಿರುಚಿಕೊಂಡಿದೆ. ಅಷ್ಟೇ ಆಕೆಯ ಮೈಮೇಲೆಲ್ಲ ರಕ್ತ ಒಸರಿದೆ. ಅಷ್ಟೇ ಅದನ್ನು ನೋಡಿದ ಹುಡುಗ ಎದ್ದನೋ ಬಿದ್ದನೋ ಅಂತ ಗೆಳೆಯರಿದ್ದ ಜಾಗ ತಲುಪಿಕೊಂಡಿದ್ದಾನೆ. ಆಗ ಸಮಯ ಐದುಗಂಟೆ ಎಲ್ಲರನ್ನು ಎದ್ದೇಳಿ ದೆವ್ವ.. ದೆವ್ವ.. ಅಂದಿದ್ದಾನೆ. ಗಡತಾಗಿ ನಿದ್ದೆ ಹೊಡೆಯುತ್ತಿದ್ದ ಹುಡುಗರು ಎಲ್ಲೊ....
    sir. ಇದು ನಡೆದದ್ದು ಯಾವಾಗ..? ಈ ಹುಡುಗುನ್ಂದ್.... ನಂಬರ್ ಕೊಡ್ತೀರಾ...?pls...

    ReplyDelete