Wednesday, 11 July 2012

ರಣ ಸಿನಿಮಾ ಹೇಗಿದೆ

*ವಿನಾಯಕರಾಮ್ ಕಲಗಾರು
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಎಸ್.ನಾರಾಯಣ್ ಪುತ್ರ ಪಂಕಜ್ ಅಭಿನಯದ ರಣ ಬಿಡುಗಡೆಯಾಗಿದೆ. ಅವರ ಹಿಂದಿನ ಚಿತ್ರ ದುಷ್ಟದಲ್ಲಿದ್ದಂತ ಹಲವಾರು ಭೀಕರ ಸನ್ನಿವೇಶಗಳು ಚಿತ್ರದಲ್ಲಿವೆ. ಆಕ್ಷನ್ ಸಿನಿಮಾಕ್ಕೂ ಸೈ ಎಂದು ಪಂಕಜ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.ಆದರೆ ಚಿತ್ರದಲ್ಲಿ ಪಂಕಜ್ನನ್ನು ಹೊರತುಪಡಿಸಿ ಇನ್ನೂ ಮೂವರು ನಾಯಕರಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಲವ್ ಎಪಿಸೋಡು. ಜೊತೆ ಜೊತೆಗೆ ರೌಡಿಸಂನ ಕರಾಳ ಮುಖ ಅನಾವರಣಗೊಳ್ಳುತ್ತಾ ಹೋಗುತ್ತದೆ.ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರೂಪಣೆ ಹಾಗೂ ಸಂಭಾಷಣೆ ಒದಗಿಸಿರುವ ಲಕ್ಷ್ಮಣ್, ನಾಲ್ವರು ನಾಯಕರಲ್ಲಿಯೂ ಒಬ್ಬರು. ಶ್ರೀನಿವಾಸ್ ನೂರ್ತಿ ತಮ್ಮ ಪ್ರಥಮ ಪ್ರಯತ್ನದಲ್ಲಿ ಜಸ್ಟ್ ಪಾಸ್ ಆಗಿದ್ದಾರೆ. ರಾಜರತ್ನಂ ಕ್ಯಾಮೆರಾ ಕೆಲಸ ನೋಡಿಯೇ ಸವಿಯಬೇಕು. ಆದರೆ ಒಂದಷ್ಟು ಕಡೆ ಕಥೆ ಕೈಕೊಟ್ಟಿದೆ. ನಿರ್ಮಾಣದಲ್ಲಿ ಇನ್ನಷ್ಟು ಅದ್ದೂರಿತನ ಇದ್ದಿದ್ದರೆ ಒಂದೊಳ್ಳೆ ಚಿತ್ರವಾಗಿರುತ್ತಿತ್ತು. ಶ್ರೀಧರ್ ವಿ.ಸಂಭ್ರಮ್ ಹಾಡುಗಳಲ್ಲಿ ಎರಡು ಗುನುಗುವಂತೆ ಮಾಡುತ್ತದೆ.ಅಂಬರೀಶ್ ಪೋಸ್ಟರ್ ಗಳಲ್ಲಿ ರಾರಾಜಿಸಿದಂತೆ ಸಿನಿಮಾದಲ್ಲಿ ಕಾಣಸಿಗುವುದಿಲ್ಲ. ಒಟ್ಟಾರೆ ೪ ರಿಂದ ೫ ದೃಶ್ಯಗಳಿಗೆ ಮಾತ್ರ ಅಂಬಿ ಸೀಮಿತಾಗಿದ್ದಾರೆ. ಡೈಲಾಗ್ ಗಳನ್ನೂ ಹಿಂದಿಯಲ್ಲಿ ಹೇಳಿಸಲಾಗಿದೆ. ಹೀಗಾಗಿ ಅಂಬರೀಶ್ ಅಭಿಮಾನಿಗಳಿಗೆ ತುಸು ಬೇಸರದ ಸಂಗತಿ.ಪಂಕಜ್ ಅಭಿನಯದಲ್ಲಿ ಇನ್ನಷ್ಟು ಮಾಗಬೇಕಿದೆ. ನಾಯಕಿಯರ ಪೈಕಿ ಅರ್ಚನಾ, ಸುಪ್ರೀತಾ, ಸೋನಿಯಾಗೌಡ ಹಾಗೂ ಸ್ಪೂರ್ತಿ ತಂತಮ್ಮ ಪಾತ್ರಗಳಿಗೆ ಜೀವ ತುಂಬಲು ಯತ್ನಿಸಿದ್ದಾರೆ. ಇವರಲ್ಲಿ ಸುಪ್ರೀತಾ ನಟನೆ ಪರ್ವಾಗಿಲ್ಲ. ಚಿತ್ರದಲ್ಲಿ ಹೊಸದನ್ನೇನೂ ಹೇಳಹೊರಟಿಲ್ಲ. ಅದೇ ಹಳೇ ಸವಕಲು ಕಥೆಯನ್ನೇ ಬೇರೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಅಷ್ಟೆ !

No comments:

Post a Comment