Friday, 13 July 2012

ಗೀತಾ ಬ್ಯಾಂಗಲ್ ಸ್ಟೋರ್ ಪ್ರೇಮ ಕಾವ್ಯವಾಗಲಿ!


ಗೀತಾ ಬ್ಯಾಂಗಲ್ ಸ್ಟೋರ್ ಇದು ಸಿನಿಮಾದ ಹೆಸರು. ಆ ಟೈಟಲನ್ನು ಕೇಳಿದವರು ಓ...ಹೋ... ಇದೆಂತಹಾ ಸಿನಿಮಾ ಅಂದುಕೊಂಡದ್ದು ಸುಳ್ಳಲ್ಲ. ಆದರೆ ದುನಿಯಾ ಸಿನಿಮಾ ಶೂಟಿಂಗ್ ಶುರುವಾದಾಗಲೂ ಸಾಕಷ್ಟು ಮಂದಿ ದುನಿಯಾ ಅನ್ನೋದು ಹಿಂದಿಯ ಪದ, ಅದನ್ನಿಟ್ಟುಕೊಂಡು ಎಂತಹ ಸಿನಿಮಾ ಮಾಡಲು ಸಾಧ್ಯ ಅಂತ ಮಾತನಾಡಿಕೊಂಡದ್ದು ಸುಳ್ಳಲ್ಲ. ಆದರೆ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿದ ಮೇಲೆ ದುನಿಯಾ ಹೆಸರನ್ನು ಹೋಲುವ ಸಾಕಷ್ಟು ಸಿನಿಮಾ ಬಂದವು ಬರುತ್ತಿವೆ. ಎಂಬುದು ಸುಳ್ಳಲ್ಲ. ಬೋರ್ಡಿಗಿಲ್ಲದ ಸೂರಿ ಸ್ಟಾರ್ ಡೈರೆಕ್ಟರ್ ಆದದ್ದು ಸುಳ್ಳಲ್ಲ. ಅದರಂತೆ ಕಥೆಗೆ ಪೂರಕವಾಗಿರುವುದರಿಂದ ನಿರ್ದೇಶಕ ಮಂಜು ಮಿತ್ರ ಸಿನಿಮಾಗೆ ಗೀತಾ ಬ್ಯಾಂಗಲ್ ಸ್ಟೋರ್ ಅಂತ ಹೆಸರಿಟ್ಟಿದ್ದಾರೆ. ಅಂದಹಾಗೆ ಇದೊಂದು ಲವ್ ಸ್ಟೋರಿ. ಇದೇ ತಿಂಗಳಿನಲ್ಲಿ ಚಿತ್ರದ ಮುಹೂರ್ತ. ಮಂಜುಗೆ ಇದು ಸ್ವತಂತ್ರ ನಿರ್ದೇಶನದ ಮೊದಲ ಚಿತ್ರ. ಈ ಮೊದಲ ಓಂ ಪ್ರಕಾಶ್ ರಾವ್, ರಮೇಶ್ ಅರವಿಂದ್‌ರಂತಹ ಘಟಾನುಘಟಿಗಳ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. 
ನಿರ್ದೇಶಕ ಮಂಜು ಮಿತ್ರ
ನಿರ್ಮಾಪಕ ಕೆಂಪರಾಜುರಿಗೂ ಇದು ಮೊದಲನೇ ಸಿನಿಮಾ. ವಿ. ಮನೋಹರ್ ಕಥೆಗೆ ಅನುಗುಣವಾಗಿ ಚೆಂದದ ಸಂಗೀತ ನೀಡಲಿದ್ದಾರೆ. ಅಂದಹಾಗೆ ಹೊಸಬರೇ ಇದ್ದ ದುನಿಯಾ ಸಿನಿಮಾಗೂ ವಿ. ಮನೋಹರ್‌ರವರೇ ಸಂಗೀತ ನೀಡಿದ್ದರು. ಹೊಸಬರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಉದಾರ ಗುಣ ಮನೋಹರದ್ದು. ಇನ್ನು ಸಾಹಸ ಡಿಫರೆಂಟ್ ಡ್ಯಾನಿ. ನೃತ್ಯ ಮದನ್ ಹರಿಣಿ. ಹೀಗೆ ಹೊಸಬರು ಮತ್ತು ಹೆಸರಾಂತ ತಂತ್ರಜ್ಞರ ಸಮ್ಮಿಲನದಲ್ಲಿ ಸಿನಿಮಾ ಮೂಡಿ ಬರಲಿದೆ. ಮರಳವಾಡಿಯಿಂದ ಶುರುವಾಗುವ ಸಿನಿಮಾ ಚಿತ್ರೀಕರಣ ರಾಮನಗರದ ಸುತ್ತ ಮುತ್ತ ನಡೆಯಲಿದೆ. ನಿರ್ದೇಶಕ ಮಂಜು ಮಿತ್ರರಿಗೆ ಒಳ್ಳೆಯ ಭವಿಷ್ಯವಿದೆ. ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾ ಒಂದು ಪ್ರೇಮ ಕಾವ್ಯವಾಗಲಿ ಚಿತ್ರ ತಂಡಕ್ಕೆ ಬೆಸ್ಟ್ ಆಫ್ ಲಕ್.
                                                                                                                                                                                                                    -ನವೀನ್ ಮರಳವಾಡಿ

No comments:

Post a Comment