Monday 26 December 2011

ಅಣ್ಣಿಗೇರಿ ಬುರುಡೆಗಳಿಗೆ ೧೮೧ ವರ್ಷ ಆಯುಷ್ಯ

ರಾಷ್ಟ್ರಾದ್ಯಂತ ಕುತೂಹಲ ಕೆರಳಿಸಿದ್ದ ನವಲಗುಂದ ತಾಲೂಕು ಅಣ್ಣಿಗೇರಿಯಲ್ಲಿ ಪತ್ತೆಯಾದ ಸಾಲು ಸಾಲು ಮಾನವ ತಲೆ ಬುರುಡೆಗಳ ವೃತ್ತಾಂತ ಕೊನೆಗೂ ಬಯಲಾಗಿದೆ.೧೮೭೨-೭೩ರಲ್ಲಿ ಈ ನಾಡನ್ನು ಭೀಕರವಾಗಿ ಹುರಿದು ಮುಕ್ಕಿದ‘ಡೋಗಿ ಬರ’ದಲ್ಲಿ ಹೆಣವಾದವರ ಕುರುಹುಗಳಿವು. ಅಮೆರಿಕದ ಪ್ಲೋರಿಡಾ ರಾಜ್ಯದ ಮಿಯಾಮಿ ನಗರದ ಬೀಟಾ ಅನಾಲೆಟಿಕ್ ಕಂಪನಿಯ ‘ರೇಡಿಯೋ ಕಾರ್ಬನ್ ಲ್ಯಾಬ್’ಈ ಬುರುಡೆಗಳ ಕಾಲಮಾನ (ಸಿ-೧೪ಕಾರ್ಬನ್ ಡೇಟಿಂಗ್)ವನ್ನು ೧೮೧ವರ್ಷಗಳ ಪ್ರಾಚೀನ (೧೮೩೦ರಿಂದ ಈಚೆಗೆ)ಎಂದು ಖಚಿತಪಡಿಸಿರುವ ಹಿನ್ನಲೆ ಯಲ್ಲಿ ತಜ್ಞರು ಈ ನಿರ್ಧಾರಕ್ಕೆ ಬಂದಿದ್ದಾರೆ. ಮೈಸೂರು ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಡಾ.ಆರ್.ಗೋಪಾಲ್ ಕೈ ಸೇರಿದ್ದು,ಈ ಕಾಲಮಾನ ಮತ್ತು ಅಣ್ಣಿಗೇರಿಯಲ್ಲಿ ಉತ್ಖನನ ನಡೆಸಿದಾಗ ಲಭ್ಯವಾದ ಕುರುವುಗಳು ಮತ್ತು ಪ್ರಾದೇಶಿಕ ಇತಿಹಾಸವನ್ನು ತಾಳೆಹಾಕಿ ಇಂಥದೊಂದು ತಾತ್ಕಾಲಿಕ ನಿಲುವಿಗೆ ಬರಲಾಗಿದೆ. ’ಈ ಕಾಲಮಾನದಲ್ಲಿ ಬ್ರಿಟಿಷ್ ಆಳ್ವಿಕೆ ಇತ್ತು. ಆಗ ಯಾವುದೇ ಭೀಕರ ಯುದ್ಧಗಳು ಘಟಿಸಿಲ್ಲ.ಡೋಗಿ ಬರ ಮತ್ತು ಕೆಲವು ಸಾಂಕ್ರಾಮಿಕ ರೋಗಗಳು ಆವರಿಸಿ ಜನತೆಯನ್ನು ಸಾಮೂಹಿಕವಾಗಿ ಸಾವು-ನೋವಿಗೆ ಈಡು ಮಾಡಿದ ದಾಖಲೆಗಳಿವೆ.ಹಾಗಾಗಿ ಈ ಬುರುಡೆಗಳು ಯುದ್ಧ,ಹತ್ಯಾ ಕಾಂಡದ ಕುರುಹುಗಳಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.ಆದರೂ ಹಿರಿಯ ದಂತ ವೈದ್ಯ ಡಾ.ಅಶಿತಾಚಾರ್ಯ ವರದಿಯಲ್ಲಿ ಬುರುಡೆ-ಮತ್ತು ಎಲುವುಗಳಲ್ಲಿ ಆಳ ಗಾಯಗಳಾಗಿ ರುವುದು ಕಂಡು ಬಂದಿದ್ದರಿಂದ ಇನ್ನಷ್ಟು ತನಿಖೆ ಅಗತ್ಯ’ ಎಂದು ಡಾ.ಗೋಪಾಲ್ ತಿಳಿಸಿದರು. ಬರುಡೆ ವೃತ್ತಾಂತ ಬಯಲು:೨೮,ಆಗಸ್ಟ್ ೨೦೧೦ರಂದು ಅಣ್ಣಿಗೇರಿಯ ಹೊರ ವಲಯದ ತೆರೆದ ಗಟಾರು ದುರಸ್ಥಿ ವೇಳೆ ೬೦೧ತಲೆ ಬುರುಡೆಗಳು ಪತ್ತೆಯಾಗಿ ಜನತೆಯನ್ನು ಬೆಚ್ಚಿ ಬೀಳಿಸಿದ್ದವು.ಈ ಮೂಲಕ ಆದಿಕವಿ ಪಂಪನ ಜನ್ಮಭೂಮಿ ಅಣ್ಣಿಗೇರಿ ದೊಡ್ಡ ಸುದ್ದಿಯಾಗಿತ್ತು. ಮೊದಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಕಿಮ್ಸ್ ವೈದ್ಯರ ತಂಡ ಮೂರು ಬುರುಡೆಗಳನ್ನು ಹೈದರಾಬಾದಿನ ಪ್ರಯೋಗಾಲಯಕ್ಕೆ ಕಳುಹಿಸಿ ಕಾಲಮಾನದ ವರದಿ ಕೇಳಿತ್ತು.ಆದರೆ, ಅಲ್ಲಿ ಸಾಧ್ಯವಾಗಿರಲಿಲ್ಲ.ಬಳಿಕ ಧಾರವಾಡ ಜಿಲ್ಲಾಧಿಕಾರಿ ದರ್ಪಣ್ ಜೈನ್ ಒಂದು ಬುರುಡೆಯನ್ನು ಭುವನೇಶ್ವರ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅದು ‘೬೨೮ವರ್ಷಗಳ ಹಿಂದಿನ ಬುರುಡೆ’(೧೩೮೩)ಎಂದು ವರದಿ ನೀಡಿತ್ತು.
ಆದರೆ,ಅಣ್ಣಿಗೇರಿಯಲ್ಲಿ ನಾಲ್ಕು ತಿಂಗಳು ಉತ್ಖನನ ನಡೆಸಿದ ಮೈಸೂರು ವಿವಿಯ ಹಿರಿಯ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ನೇತೃತ್ವದ ಪ್ರಾಚ್ಯವಸ್ತು ತಜ್ಞರ ತಂಡ ಬುರುಡೆಗಳ ಕಾಲಮಾನ (ಸಿ-೧೪ ಕಾರ್ಬನ್ ಡೇಟಿಂಗ್)ಅರಿಯಲು ಕೊನೆ ಪ್ರಯತ್ನವಾಗಿ ಒಂದು ಬುರುಡೆಯನ್ನು ಅಮೆರಿಕಕ್ಕೆ ಕಳುಹಿಸಿತ್ತು. ಇನ್ನೂ ಉಳಿದಿದೆ ಸಂಶಯ:ಇಲ್ಲಿನ ಎಸ್ಡಿಎಂ ಡೆಂಟಲ್ ಕಾಲೇಜಿನ ದಂತ ವೈದ್ಯ ಡಾ.ಅಶಿತಾಚಾರ್ಯ ಅವರು ೬ರಿಂದ ೬೦ವರ್ಷ ವಯೋವಾನದ ಮಕ್ಕಳು, ಮಹಿಳೆಯರು,ಪುರುಷರ ೩೬ಬುರುಡೆಗಳನ್ನು ಪ್ರಯೋಗಕ್ಕೆ ಒಳಪಡಿಸಿದ್ದರು. ಅವುಗಳಲ್ಲಿ ೧೦ಬುರುಡೆಗಳಿಗೆ ಮಾರಕಾಸ್ತ್ರದಿಂದ ಆಳವಾದ ಗಾಯ ಆಗಿರುವುದು ಖಚಿತವಾಗಿದೆ. ಅದರಂತೆ ಉತ್ಖನನ ಸ್ಥಳದಲ್ಲಿ ಕಪ್ಪು ಕಲ್ಲಿನ ರಾಶಿ ಮತ್ತು ವಧಾಸ್ತಂಬದ ಕುರುಹು ಲಭಿಸಿದ್ದವು.ಮೇಲಾಗಿ ಈ ಬುರುಡೆಗಳನ್ನು ಸಾಲಾಗಿ ಜೋಡಿಸಿದ್ದರಿಂದ ಇದೊಂದು ಹತ್ಯಾಕಾಂಡ ಇಲ್ಲವೇ ಯುದ್ಧ ಇರಬೇಕೆಂದು ಅವರು ಅಭಿಪ್ರಾಯಪಟ್ಟಿದ್ದರು.ಈ ವಾದಕ್ಕೆ ಇನ್ನಷ್ಟು ಪುಷ್ಟಿಕೊಡುವಂತೆ ಕವಿವಿ ಪ್ರಾಧ್ಯಾಪಕ ಡಾ.ಷಡಕ್ಷರಿ,ಡಾ.ಎಂ.ಎಂ.ಕಲಬುರ್ಗಿ ಕೆಲವು ಸ್ಥಳೀಯ ಆಚರಣೆಗಳನ್ನು ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ತಜ್ಞರು ಸ್ಥಳೀಯ ಜಾನಪದ ಲಾವಣಿಗಳನ್ನು,ಆಚರಣೆಗಳ ಬಗ್ಗೆ ಗಮನ ಹರಿಸಿದ್ದೂ ಉಂಟು.ಆಗ ಡೋಗಿ ಬರ,ವಿಜಯನಗರ ಆಳ್ವಿಕೆ,ಮೊಗಲ್ ಆಳ್ವಿಕೆ,ಆದಿಲ್ಷಾಹಿ ಆಳ್ವಿಕೆ,ಟಿಪ್ಪು ಆಳ್ವಿಕೆಗಳಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡ,ಸಾಮೂಹಿಕ ಆತ್ಮಹತ್ಯೆ,ಶಿರಚ್ಛೇದನ, ದಾಳಿ ಇತ್ಯಾದಿ ಘಟನೆಗಳನ್ನು ಅವಲೋಕಿಸಿದ್ದರು.ಹಾಗಾಗಿ ಇನ್ನಷ್ಟು ಖಚಿತ ಪಡಿಸಿಕೊಳ್ಳಬೇಕಿದೆ ಎನ್ನುವುದು ಡಾ.ಗೋಪಾಲ್ ನಿಲುವು. ಹೀಗೆ ನಡೆಯಿತು ಉತ್ಖನನ:ಕಳೆದ ಜ.೧೩ ರಿಂದ ಉತ್ಖನನ ಆರಂಭಿಸಲಾಗಿತ್ತು.ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಆರ್.ಗಂಗಾಧರ,ಗದಗಿನ ರಾಜಾರಾಮ,ಎಂಜಿನಿಯರು ಗಳು ಸೇರಿದಂತೆ ತಜ್ಞರ ತಂಡ ಅಣ್ಣಿಗೇರಿಯಲ್ಲಿ ವಾಸ್ತವ್ಯ ಹೂಡಿತ್ತು. ಸುಮಾರು೩೦ಕಾರ್ಮಿಕರು,೧ಜೆಸಿಬಿ ಹಗಲಿರುಳು ಕೆಲಸ ಮಾಡಿ ಬುರುಡೆ ಇರುವ ಸ್ಥಳದಿಂದ ಐದಡಿ ಅಂತರದಲ್ಲಿ ಎರಡು ಬೃಹತ್ ಗುಂಡಿಗಳನ್ನು ಮತ್ತು ಪಕ್ಕದ ತೆರೆದ ಗಟಾರನ್ನು ಇನ್ನಷ್ಟು ಆಳ ತೋಡಲಾಗಿದೆ. ಅಲ್ಲಿ ಸಂಗ್ರಹವಾಗುವ ನೀರನ್ನು ಪಂಪ್ಸೆಟ್ ಮೂಲಕ ಎತ್ತಿ ನೆಲವನ್ನು ಒಣಗಿಸಲಾಗಿತ್ತು.ಗಟಾರ ದಂಡೆಗೂಂಟ ಸುಮಾರು ೧೦ಅಡಿ ಅಗಲ,೫ ಅಡಿ ಆಳ,೩೦ಅಡಿ ಉದ್ದದ ಪ್ರದೇಶದಲ್ಲಿ ಮಾತ್ರ ಈ ಬುರುಡೆಗಳು,ಅವುಗಳಿಗೆ ಸಂಬಂಧಿಸಿದ ಇನ್ನುಳಿದ ಕುರುಹುಗಳು ಇರುವುದನ್ನು ತಜ್ಞರ ತಂಡ ಖಚಿತಪಡಿಸಿದೆ. ಉತ್ಖನನದ ಪ್ರತಿ ಹಂತವನ್ನೂ ಚಿತ್ರೀಕರಿಸಲಾಗಿದೆ.ಅವುಗಳ ರೇಖಾಚಿತ್ರಗಳೂ ರಚನೆಯಾ ಗಿವೆ.ಖಚಿತ ಪಡಿಸಿಕೊಂಡ ಬಳಿಕವೇ ಅಲ್ಲಿಂದ ಬುರುಡೆಗಳನ್ನು ಹೊರ ತೆಗೆಯಲಾಗಿದೆ. ’ಈ ಪ್ರಕರಣ ರಾಷ್ಟ್ರಮಟ್ಟದ ಗಮನ ಸೆಳೆದಿದ್ದರಿಂದ ಮುಂದೊಂದು ದಿನ ಇದೇ ಅಣ್ಣಿಗೇರಿ ಈ ಪ್ರಕರಣ ರಾಷ್ಟ್ರಮಟ್ಟದ ಗಮನ ಸೆಳೆದಿದ್ದರಿಂದ ಮುಂದೊಂದು ದಿನ ಇದೇ ಅಣ್ಣಿಗೇರಿಯಲ್ಲಿ ವಸ್ತುಸಂಗ್ರಹಾಲಯ ನಿರ್ಮಿಸಿ ಬುರುಡೆಗಳನ್ನು ಯತಾಸ್ಥಿತಿಯಲ್ಲಿ ಇಡುವ ಮೂಲಕ ಮುಂದಿನ ಪೀಳಿಗೆಗೆ ನೀಡುವ ಆಲೋಚನೆ ಇದೆ’ಎಂದು ಧಾರವಾಡ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅಂದೇ ಹೇಳಿದ್ದರು.

Saturday 24 December 2011

ಬುಡು ಬುಡುಕೆ-೧೧


ನಿನ್ ಹುಟ್ಟಿಗಷ್ಟು ಕಾಡು ಆಳಿದ್ದು ಸಾಕು ನಾಡಿಗೆ ನಡಿ!

ನಮ್ಮಿಬ್ಬರಿಗೂ ಏನಾದರೂ ವ್ಯತ್ಯಾಸ ಉಂಟಾ?

ಕೊಲ್ಲುವುದೆ ನನ್ನ ಬಿಸಿನೆಸ್ಸು ಅದೇ ನನ್ನ ವಿಕ್ನೆಸ್ಸು

ಅಣ್ಣಾವ್ರೆ ನಾನು ಒಳ್ಳೇ ಕಥೆಗಾರ ನನ್ನ ಕಥೆಯನ್ನ ಸಿನಿಮಾ ಮಾಡ್ತಿರಾ!

ಸಂಗೀತ ಪ್ರಿಯ ನರಹಂತಕ

ಗನ್ ಹಿಡಿದರೆ ಕಿಲ್ಲರ್ ಕ್ಯಾಮರ ಹಿಡಿದರೆ ವಿಡಿಯೂ ಗ್ರಾಫರ್

ಮೀಸೆಯ ಮೇಲೆ ಅದೇನೊ ಮೊಹ

ಪೋಟೂ ಅಂದರೆ ಸಿನಿಮಾ ನಟರಂತೆ ಪೋಜು ಕೊಡುತ್ತಿದ್ದ



ಮಾಡಿದ್ದು ಅನಾಚಾರ ಗೆಟಪ್ಪು ಹೋರಾಟಗಾರನದ್ದು
ಪಾಪದ ಕೂಡ ತುಂಬುತ್ತಿದ್ದ ಸಮಯವದು
ಕಟ್ಟ ಕಡೆಯದಾಗಿ ಮೀಸೆ ಮಣ್ಣಾಯ್ತು ನರಹಂತಕ ಬೀದಿ ಬದಿ ಹೆಣವಾದ
                                            

ಸ್ಯಾನೋಸೆಯ ಭೂತ ಬಂಗಲೆ

ಅಮೆರಿಕದಂತಹ ಅತ್ಯಂತ ಮುಂದುವರಿದ ದೇಶದಲ್ಲೂ ಭೂತ ಪ್ರೇತಗಳನ್ನು ನಂಬುವವರು, ಮಾಟಗಾರರು- ಮಂತ್ರವಾದಿಗಳ ಮೊರೆ ಹೋಗುವವರು ಯಥೇಚ್ಛ. ನಮ್ಮಲ್ಲಿರುವಂತೆ ಅಲ್ಲೂ ಭೂತದ ಕಥೆಗಳನ್ನು ಕೇಳಬಹುದು. ಶ್ವೇತಭವನದಲ್ಲಿ ಲಿಂಕನ್ ಸೇರಿದಂತೆ ಅನೇಕ ಮಾಜಿ ಅಧ್ಯಕ್ಷರ ಭೂತಗಳ ಓಡಾಟದ ಕಥೆಗಳು ಸದಾ ಕುತೂಹಲ ಕೆರಳಿಸುತ್ತಲೇ ಬಂದಿವೆ.ನಾನಿಲ್ಲಿ ಹೇಳಲು ಹೊರಟಿರುವುದು ಇಂಥದೇ ಭೂತ ಬಂಗಲೆಯೊಂದರ ಬಗ್ಗೆ. ಕ್ಯಾಲಿಫೋರ್ನಿಯ ರಾಜ್ಯದ ಸ್ಯಾನೋಸೆ ಪಟ್ಟಣದಲ್ಲಿನ ‘ವಿಂಚೆಸ್ಟರ್ ರಹಸ್ಯ ಬಂಗಲೆ‘ ಈಗಲೂ ರಹಸ್ಯವನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಅದರ ಬಗ್ಗೆ ನೂರಾರು ದಂತಕಥೆಗಳಿವೆ.ಸುಮಾರು ೬ ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ತಲೆ ಎತ್ತಿರುವ ಈ ಬಂಗಲೆ ನಿತ್ಯ ನೂರಾರು ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ೧೬೦ ಕೋಣೆ, ೨ ಸಾವಿರ ಬಾಗಿಲು, ೧೦ ಸಾವಿರ ಕಿಟಕಿಗಳು, ಉಪ್ಪರಿಗೆ ಏರಲು ೪೭ ಕಡೆ ಪಾವಟಿಗೆಗಳು (ಸ್ಟೇರ್ಕೇಸ್), ೪೭ ಅಗ್ಗಿಷ್ಟಿಕೆಗಳು, ೧೩ ಸ್ನಾನದ ಮನೆಗಳು, ೬ ಅಡುಗೆ ಮನೆಗಳ ಭವ್ಯ ಕಟ್ಟಡವಿದು.ಇದರೊಳಗೊಂದು ಸುತ್ತು ಬಂದ ಬಹುತೇಕರಿಗೆ ಅತೀಂದ್ರಿಯ ಶಕ್ತಿಗಳ, ಭೂತದ ಇರುವಿಕೆಯ ಅನುಭವವಾಗಿದೆ. ಮಧ್ಯರಾತ್ರಿ ದಿಢೀರನೆ ದೀಪ ಹತ್ತಿಕೊಳ್ಳುವುದು, ಗಂಟೆ ಶಬ್ದ, ಯಾರೋ ಮೆಟ್ಟಿಲು ಹತ್ತುವ ಸಪ್ಪಳ ಇತ್ಯಾದಿ. ಎಷ್ಟೆಷ್ಟೋ ಮನಃಶಾಸ್ತ್ರಜ್ಞರು, ಮಂತ್ರವಾದಿಗಳು, ಜಾದೂಗಾರರು, ವಿಜ್ಞಾನಿಗಳೆಲ್ಲ ತಮಗಾದ ವಿಸ್ಮಯವನ್ನು ದಾಖಲಿಸಿದ್ದಾರೆ.
ಟೇಪ್ರೆಕಾರ್ಡರ್ನಲ್ಲಿ ವಿಚಿತ್ರ ಧ್ವನಿ, ತಾವು ತೆಗೆದ ಬಂಗಲೆ ಫೋಟೊದಲ್ಲಿ ಭೂತದ ಅಸ್ಪಷ್ಟ ಚಿತ್ರ ಮೂಡಿದ ಬಗ್ಗೆ ಉಲ್ಲೇಖಿಸಿದ್ದಾರೆ.
ಇದೇ ಕಾರಣಕ್ಕಾಗಿ ಈಗಲೂ ಈ ಬಂಗಲೆ ವೀಕ್ಷಣೆಗೆ ಬರುವ ಪ್ರವಾಸಿಗಳು ಗುಂಪಿನಲ್ಲಿಯೇ ಓಡಾಡುವಂತೆ ಸೂಚಿಸಲಾಗುತ್ತದೆ. ಮಾರ್ಗದರ್ಶಿಗಳು ನಿಂತು ಎಲ್ಲರ ರಕ್ಷಣೆಯನ್ನು ನೋಡಿಕೊಳ್ಳುತ್ತಾರೆ. ವಿಚಿತ್ರವಾದ ಸದ್ದು, ತಲೆ ಭಾರ, ಹಿಂದಿನಿಂದ ಯಾರೋ ಬೆನ್ನತ್ತಿ ಬಂದ, ಉಸಿರಾಡಿಸುವ, ಅಸ್ಪಷ್ಟ ಭೂತಾಕೃತಿಗಳು ಕೋಣೆಯ ಮೂಲೆಯಲ್ಲಿ ನಿಂತು ಗಮನಿಸುವಂತಹ ಅನುಭವಗಳಂತೂ ಸಾಮಾನ್ಯ.ಪಾಶ್ಚಾತ್ಯರಿಗೆ ಅಶುಭಕರವಾದ ೧೩ ಅಂಕಿಗಂತೂ ಈ ಬಂಗಲೆಯಲ್ಲಿ ಆದ್ಯತೆ. ಅನೇಕ ಕಿಟಕಿಗೆ ೧೩ ಬಾಗಿಲುಗಳಿವೆ. ೧೩ ಸ್ನಾನಗೃಹ, ೧೩ನೇ ಸ್ನಾನಗೃಹಕ್ಕೆ ಹೋಗಲು ೧೩ ಮೆಟ್ಟಿಲು, ಅದರಲ್ಲಿ ೧೩ ಕಿಟಕಿ, ಸಿಂಕ್ಗೆ ೧೩ ರಂದ್ರ, ಅನೇಕ ತೂಗುದೀಪಕ್ಕೆ ೧೩ ಅನಿಲ ಕೊಳವೆ ಹೀಗೆ ಸಾಗುತ್ತದೆ ೧೩ರ ಮಹಿಮೆ.     ೧೮೮೪ರಲ್ಲಿ ಆರಂಭವಾದ ಬಂಗಲೆಯ ನಿರ್ಮಾಣ ಸತತ ೩೮ ವರ್ಷ ನಡೆದಿತ್ತು. ಆ ಕಾಲದಲ್ಲೇ ಇದಕ್ಕೆ ತಗುಲಿದ ವೆಚ್ಚ ಸುಮಾರು ೫೫ ಲಕ್ಷ ಡಾಲರ್ (ಈಗಿನ ಲೆಕ್ಕದ್ಲ್ಲಲಾದರೆ ೩೫೦ ಕೋಟಿ ರೂಪಾಯಿ).ಮೂಲತಃ ಇದರಲ್ಲಿ ೫೦೦-೬೦೦ ಕೋಣೆಗಳಿದ್ದವಂತೆ. ೧೯೦೬ರ ಮಹಾ ಭೂಕಂಪದಲ್ಲಿ ಈ ಬಂಗಲೆಗೂ ಭಾರೀ ಹಾನಿಯಾಗಿ ಈಗ ಇಷ್ಟೇ ಉಳಿದಿವೆ ಎನ್ನಲಾಗುತ್ತದೆ.ಭವ್ಯ ವಿಕ್ಟೋರಿಯನ್ ವಾಸ್ತುಶೈಲಿ, ಸುಂದರ ಗೋಪುರಗಳು, ಹೊಗೆ ಗೂಡುಗಳು, ಬಾಲ್ಕನಿಗಳು, ಅರೆ ವೃತ್ತಾಕಾರದ ಗೋಡೆಗಳು, ಒಳಗೆ ಭವ್ಯವಾದ ಚಿನ್ನ ಬೆಳ್ಳಿಯ ಲೇಪನದ ತೂಗುದೀಪಗಳು, ಆ ಕಾಲಕ್ಕೇ ತಲಾ ೧೫೦೦ ಡಾಲರ್ ಬೆಲೆ ಬಾಳುತ್ತಿದ್ದ ಕಿಟಕಿ ಬಾಗಿಲು, ಜರ್ಮನ್ ಬಾಗಿಲುಗಳು, ಸ್ವಿಸ್ ಬಾತ್ಟಬ್ಗಳು, ಕೊಠಡಿಗಳಲ್ಲಿ ವಿಲಾಸಿ ಪೀಠೋಪಕರಣಗಳು, ಚಿತ್ರ ವಿಚಿತ್ರ ಬಣ್ಣಗಳು, ಹೊರಗೆ ಅತ್ಯಾಕರ್ಷಕ ತೋಟ, ಹಸಿರು ಸಸ್ಯ ರಾಶಿ ಇಡಿ ಕಟ್ಟಡಕ್ಕೆ ಮೆರುಗು ತುಂಬಿವೆ.ಇದನ್ನು ಕಟ್ಟಿಸಿದವಳು ಸಾರಾ ವಿಂಚೆಸ್ಟರ್ (೧೮೪೦- ೧೯೨೨). ಈಕೆ ವಿಶ್ವವಿಖ್ಯಾತ ವಿಂಚೆಸ್ಟರ್ ಗನ್ ತಯಾರಿಕಾ ಕಂಪೆನಿಯ ಮಾಲೀಕ, ಆಗರ್ಭ ಶ್ರೀಮಂತ ವಿಲಿಯಂ ವಿಂಚೆಸ್ಟರ್ನ ಪತ್ನಿ. ಸಣ್ಣ ವಯಸ್ಸಿನಲ್ಲೇ ಏಕೈಕ ಮಗಳನ್ನು ಕಳೆದೊಂಡವಳು. ದುರದೃಷ್ಟಕ್ಕೆ ಗಂಡ ಕೂಡ ಕೇವಲ ೧೯ ವರ್ಷದ
ದಾಂಪತ್ಯ ಬಳಿಕ ಕ್ಷಯಕ್ಕೆ ಬಲಿಯಾದ.ಆಗ ಸಾರಾಗೆ ೪೧ ವರ್ಷ. ೨ ಕೋಟಿ ಡಾಲರ್ ಸಂಪತ್ತಿನ ಒಡೆತನ ಬರುತ್ತದೆ. ಬಂದೂಕು ರಾಯಲ್ಟಿಯಿಂದಲೇ ನಿತ್ಯ ೧ ಸಾವಿರ ಡಾಲರ್ ಸಿಗುತ್ತಿರುತ್ತದೆ. ಆದರೆ ಕೌಟುಂಬಿಕ ದುರಂತಗಳು ಆಕೆಯನ್ನು ಖಿನ್ನಳಾಗಿ ಮಾಡುತ್ತವೆ. ಇದಕ್ಕೇನು ಕಾರಣ ಎಂದು ತಿಳಿಯಲು ಮಂತ್ರವಾದಿಗಳ ಮೊರೆ ಹೋಗುತ್ತಾಳೆ.‘ನಿನ್ನ ಗಂಡನ ಕಂಪೆನಿ ತಯಾರಿಸಿದ ಬಂದೂಕುಗಳಿಂದ ಸತ್ತವರ ಪ್ರೇತಾತ್ಮಗಳು ನಿನ್ನನ್ನು ಕಾಡುತ್ತಿವೆ. ಈಗಾಗಲೆ ಇಬ್ಬರನ್ನು ಬಲಿ ತೆಗೆದುಕೊಂಡಿದ್ದು ನಿನ್ನನ್ನೂ ಮುಗಿಸಲು ಹೊಂಚು ಹಾಕುತ್ತಿವೆ. ಅವನ್ನು ಸಂತೃಪ್ತಗೊಳಿಸಲು ಕಟ್ಟಡ ನಿರ್ಮಾಣ ಮಾಡು. ಈ ಕಟ್ಟಡದ ಕೆಲಸ ನಡೆಯುವಷ್ಟೂ ದಿನ ಅವು ನಿನ್ನ ತಂಟೆಗೆ ಬರೊಲ್ಲ‘ ಎಂದು ಸಲಹೆ ಕೊಡುತ್ತಾರೆ. ಅದರಂತೆ ಸಾಂತಾಕ್ರಾಸ್ ಕಣಿವೆಯ ಈಗಿನ ಸ್ಥಳದಲ್ಲಿ ೧೬೧ ಎಕರೆ ಜಮೀನು ಖರೀದಿಸಿ ಬಂಗಲೆ ನಿರ್ಮಿಸಲು ಶುರು ಮಾಡುತ್ತಾಳೆ. ನೂರಾರು ಜನ ಅವಿರತ ೩೮ ವರ್ಷ ಇಲ್ಲಿ ಕಟ್ಟುವ, ಕೆಡವುವ ಕೆಲಸ ಮಾಡುತ್ತಲೇ ಇದ್ದರಂತೆ.ಈಕೆಗೆ ಭೂತಗಳ ಭಯ. ಆದರೆ ಅವುಗಳಲ್ಲಿ ಕೆಲವನ್ನು ಒಲಿಸಿಕೊಂಡಿದ್ದಳಂತೆ. ನಿತ್ಯಮಧ್ಯರಾತ್ರಿಯಿಂದ ಬೆಳಗಿನ ಜಾವ ೨ ಗಂಟೆಯವರೆಗೂ ನಿರ್ದಿಷ್ಟ ಗೌನ್ ಧರಿಸಿ ಗಂಟೆ ಕೋಣೆಯಲ್ಲಿ ಗಂಟೆ ಬಾರಿಸಿ ಸ್ನೇಹಪರ ಪ್ರೇತಾತ್ಮಗಳನ್ನು ಆಹ್ವಾನಿಸುತ್ತಿದ್ದಳು. ಮನೆ ವಿನ್ಯಾಸಕ್ಕೆ ಅವುಗಳ ಸಲಹೆ ಪಡೆಯುತ್ತಿದ್ದಳಂತೆ. ಕೆಟ್ಟ ಪ್ರೇತಗಳಿಗೆ ದಿಕ್ಕು ತಪ್ಪಿಸಲು ಆಕೆ ಒಂದೇ ಕೋಣೆಯಲ್ಲಿ ಸತತ ಎರಡು ರಾತ್ರಿ ಮಲಗುತ್ತಿರಲಿಲ್ಲವಂತೆ.ಆಗಿನ ಕಾಲದ ಶ್ರೀಮಂತ ಮಹಿಳೆಯರಂತೆ ಮುಖಕ್ಕೆ ಸದಾ ಕಪ್ಪು ಮುಖಗವುಸು ಹಾಕಿಕೊಂಡೇ ಇರುತ್ತಿದ್ದಳಂತೆ. ಹೀಗಾಗಿ ಈಕೆಯ ಮುಖ ನೋಡಿದವರೇ ಇಲ್ಲ. ಅಷ್ಟು ದೊಡ್ಡ ಬಂಗಲೆಯಲ್ಲಿ ಬಂಧು- ಬಾಂಧವರಿಲ್ಲದೆ ಏಕಾಂಗಿಯಾಗಿ ವಾಸವಾಗಿದ್ದಳು. ಇಡೀ ಬಂಗಲೆ ಆಕೆಯ ಶ್ರೀಮಂತಿಕೆ, ಸೌಂದರ್ಯ ಅಭಿರುಚಿಯ ಕುರುಹಾಗಿದೆ. ೮೨ನೇ ವರ್ಷದಲ್ಲಿ ಇದೇ ಮನೆಯ ಕೊಠಡಿಯೊಂದರಲ್ಲಿ ಮೃತಳಾದ ನಂತರ ಇದು ಅನೇಕರ ಕೈ ಸೇರಿ ಈಗ ಪ್ರತಿಷ್ಠಾನವೊಂದರ ಉಸ್ತುವಾರಿಯಲ್ಲಿದೆ.ಕ್ರಿಸ್ಮಸ್ ಬಿಟ್ಟು ವರ್ಷದ ಉಳಿದೆಲ್ಲ ದಿನ ಬೆಳಿಗ್ಗೆ ೯ಕ್ಕೆ ಬಂಗಲೆ ಪ್ರವಾಸ ಕಾರ್ಯಕ್ರಮ ಶುರು. ಮಧ್ಯರಾತ್ರಿ ಪ್ರವಾಸ, ಭಯದ ರಾತ್ರಿ ಪ್ರವಾಸ ಹೀಗೆ ಅನೇಕ ಪ್ರವಾಸಗಳಿವೆ. ೩೫ ಡಾಲರ್ ಕೊಟ್ಟ ಟಿಕೆಟ್ ಖರೀದಿಸಿ ಮಾರ್ಗದರ್ಶಿ ಜತೆ ಒಂದು ಸುತ್ತು ಬರಬಹುದು.

ಬುಡು ಬುಡುಕೆ-೧೦

ಡಬಲ್ ಗೇಮ್

ಧಮ್ ಮಾರೋ ಧಮ್

ಇದಪ್ಪ ಫ್ಯಾಷನ್ನು ಅಂದರೆ

ಇವನು ಬಾಳೆ ಹಣ್ಣಿನ ಬುದ್ದ


ಪರದೇಶದಲ್ಲಿ ಮಂಗನಾಟ

ನಿರ್ದೇಶಕರು ಚೆನ್ನಾಗಿ ಮರ ಹತ್ತಿಸಿದ್ದಾರೆ


Friday 23 December 2011

Thursday 22 December 2011

ಬುಡು ಬುಡುಕೆ-೮

ದೇವಂ ಶರಣಂ ಗಚ್ಛಾಮಿ

ಹೆಂಡ ಹೆಂಡ್ತಿ ಕನ್ನಡ ಸಿನಿಮಾಗಳಂದ್ರೆ ದೇವುಗ್ ಪ್ರಾಣ!

ಕೊಬ್ರಿ ಮಂಜು ಟಿವಿ ವರದಿಗಾರನಾದರೆ ಹೇಗೆ!

ಪಾಪ ಪಾಂಡುಗೆ ಸಿರಿಯಲ್‌ನಲ್ಲಿ ಎಣ್ಣೆ ಮಜ್ಜನ!

೨ಡಿ ಚಿತ್ರ

Wednesday 21 December 2011

ಬುಡು ಬುಡಕೆ-೭

ಅದೆನ್ ಕಂಡೆ ಶಿವ! ಕಣ್ಣು ಬಾಯಿ ಹಿಂಗ್ ಬಿಟ್‌ಕೊಂಡಿದ್ದಿಯ!

ತಲೆ ಭಲೇ ನುಣ್ಣಗಿದೆ ಹೆಂಡತಿ ತುಂಬಾ ಘಾಟಿ ಅನ್ಸುತ್ತೆ

ಬುದ್ದಿಗೇಡಿ ನಾಯಿ ನೀರು ಕುಡಿಯಲು ಹೋಗಿ ಎಂತಹ ಅನಾಹುತ ಮಾಡಿಕೊಂಡಿದೆ

ಅಘೋರಿಗಳು ಆಡ್ತಾರಂತೆ ಪುಟ್‌ಬಾಲ್

ಇದು ನಮ್ಮ ಭಾರತದ ಸರ್ಕಾರಿ ಶಾಲೆಯ ದುಸ್ಥಿತಿ


ಇಪ್ಪತ್ತು ವರುಷದ ಹಿಂದೆ ಹೀಗಿತ್ತು ರವಿಶಂಕರನ ಪಟಾಲಂ

ಬುಡು ಬುಡುಕೆ-೬

ನನ್ನ ರಾಜಕೀಯದ ಬ್ಯಾಟಿಂಗ್‌ಗೆ ಮತದಾರರೆಲ್ಲ ಔಟ್!

ಇದೊಂದು ಹೂಸ ತರಹ ಸಿನಿಮಾದ ಕನಸ್ಸು

ಶಾತಂ!ಪಾಪಂ!ನಾನು ಭ್ರಷ್ಟನಲ್ಲ!ಎಸ್.ಎಮ್.ಕೃಷ್ಣ

ಸದಾನಂದ ಗೌಡ ನನ್ನ ಕೈಗೊಂಬೆ.

ಚಲ್ತೆ...ಚಲ್ತೇ...!

ಲಾಲೂ ಪ್ರಸಾದ್ ಯಾದವ್ಗೆ ಚಕ್ಕೋತ ಹೆಲ್ಮ್‌ಟ್

ಇದ್ಯಾವ ತರಹ ಚಪಲ!

ಭಲೇ ಮುದಿ ಪ್ರಧಾನಿ!ಬ್ಯಾಕ್ ನೋಡಿ ಬೆರಗಾದ!

ನಾಯಿ ಕ್ಲಿಂಟನ್ ಹತ್ತಿರ ಏನೋ ಹುಡುಕುತ್ತಿದೆ ಅದೆನು ಅಂತ ನಿಮಗೆ ಗೂತ್ತ?



ಕಿಂಗ್ ಇಸ್ ಮನಮೋಹನ್ ಸಿಂಗ್