Tuesday 13 December 2011

ಭಟ್ಟರು ಬಿಚ್ಚಿಟ್ಟ ಸತ್ಯ

ಕನ್ನಡಪ್ರಭ ದಿನಪತ್ರಿಕೆ ಮತ್ತು ಸುವರ್ಣ ನ್ಯೂಸ್ ಚಾನಲ್ ಸಂಪಾದಕ ವಿಶ್ವೇಶ್ವರ ಭಟ್ ಅವರ ಖಾಸಗಿ ಅಂತರ್ ಜಾಲ ತಾಣ http://vbhat.in/ ಮತ್ತೆ ಶುರುವಾಗಿದೆ. ಕೆಲ ತಿಂಗಳಕಾಲ ಕಾಲ ಕಣ್ಮರೆಯಾಗಿದ್ದ ತಾಣ ಇಂದು ಮಂಗಳವಾರ ಪ್ರತ್ಯಕ್ಷವಾಗಿದ್ದು ಅದರಲ್ಲಿ ಭಟ್ಟರ ಹೊಸ ಲೇಖನ ಬೆಳಕಾಗಿದೆ.ವಿಜಯ ಕರ್ನಾಟಕ ಸಂಪಾದಕ ಹುದ್ದೆಗೆ ಭಟ್ಟರು ರಾಜೀನಾಮೆ ನೀಡಿ ಒಂದು ವರ್ಷ ತುಂಬಿತು. ಇದನ್ನು ತನ್ನಿಮಿತ್ತ ಲೇಖನ ಎಂದು ಕರೆಯಲೂಬಹುದು. ವರ್ಷಾಬ್ಧಿಕ ಎನ್ನೋಣವೇ ಅಥವಾ ವಾರ್ಷಿಕೋತ್ಸವ ಎನ್ನೋಣವೇ? ಅಥವಾ ಇದಕ್ಕೆ ಬೇರೊಂದು ಹೆಸರುಂಟೊ?ಇದನ್ನು ಹೇಗೆ ಕರೆದರೆ ಸರಿಹೋದಿತೆಂದು ಸ್ವತಃ ಭಟ್ಟರೇ ತಮ್ಮ ದೀರ್ಘವಾದ ಲೇಖನದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಸವಿವರವಾಗಿ ಬರೆದುಕೊಂಡಿದ್ದಾರೆ. ಸ್ಯಾಂಪಲ್ಲಿಗಾಗಿ ವಿಶ್ವೇರಭಟ್ಟರ ಲೇಖನದಿಂದ ಆಯ್ದ ಒಂದೆರಡು ಎರಡು ಪ್ಯಾರ ಹೀಗಿದೆ :"ಚಿನ್ನನ್ ದಾಸ್ ನಂತರ ವಿಜಯ ಕರ್ನಾಟಕದ ಮ್ಯಾನೇಜ್ಮೆಂಟ್ ಮುಖ್ಯಸ್ಥನಾಗಿ ಬಂದ ತೀರ ಸಣ್ಣ ಮನಸ್ಸಿನ ವ್ಯಕ್ತಿಯೊಬ್ಬ ನನ್ನ ಜನಪ್ರಿಯತೆ ಸಹಿಸದಾದ. ಆತ ಮೊದಲ ದಿನದಿಂದಲೇ ಕ್ಯಾತೆ ತೆಗೆಯಲಾರಂಭಿಸಿದ. ಅಂಥವನ ಜತೆ ಎರಡು ವರ್ಷ ಕಾಲ ದೂಡಿದ್ದೊಂದು ಕತೆ. ಇರಲಿ. ಇದೊಂದೇ ಕಾರಣದಿಂದ ನಾನು ಹೊರಬಂದೆ ಹೊರತು, ಅದಕ್ಕೆ ಪತ್ರಿಕೆಯಾಗಲಿ, ಸಂಸ್ಥೆಯಾಗಲಿ, ಮತ್ತ್ಯಾವುದೇ ಸಂಗತಿಗಳೂ ಕಾರಣ ಅಲ್ಲ.ಆತ ಅಪೇಕ್ಷಿಸಿದಂತೆ ಅವನ ಓಲೈಕೆ, ಬಕೆಟ್ ಹಿಡಿಯುವಿಕೆ, ಚಮಚಾಗಿರಿ ಮಾಡಿದ್ದರೆ, ನಿರಾತಂಕವಾಗಿ ಅಲ್ಲಿಯೇ ಮುಂದುವರಿಯಬಹುದಿತ್ತು! ಇಷ್ಟಾಗಿಯೂ ವ್ಯಕ್ತಿಯನ್ನು ನಾನು ಸದಾ ಸ್ಮರಿಸುತ್ತೇನೆ. ಒಂದು ರೀತಿಯಲ್ಲಿ ನನಗೆ ಆತ ಪ್ರಾತಃ ಸ್ಮರಣೀಯ. ಕಾರಣ ಆತ ನನ್ನನ್ನು ಕೆಟ್ಟದ್ದಾಗಿ ನಡೆಸಿಕೊಳ್ಳದಿದ್ದರೆ ನಾನುವಿಕವನ್ನು ಬಿಡುತ್ತಿರಲಿಲ್ಲ. ವಿಕಕ್ಕಿಂತ ಮಿಗಿಲಾದ ಈಗಿನ ಜವಾಬ್ದಾರಿಯೂ ಸಿಗುತ್ತಿರಲಿಲ್ಲ. ಆತನ ಹೊಟ್ಟೆ ಸದಾ ತಣ್ಣಗಿರಲಿ! "ಹೀಗೆ "ಸಣ್ಣ ಮನಸ್ಸಿನ" ವ್ಯಕ್ತಿಗೆ ಬರೆಯುವ ನೆಪದಲ್ಲಿ ಭಟ್ಟರು ಇನ್ನೂ ಅನೇಕ ಸಂಗತಿಗಳನ್ನು ತಮ್ಮ ದೊಡ್ಡ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಬರಹದಲ್ಲಿ 14 ವ್ಯಕ್ತಿಗಳ ಹೆಸರುಗಳು ಪ್ರಸ್ತಾಪವಾಗಿದೆ. 3 ವ್ಯಕ್ತಿಗಳ ಭಾವಚಿತ್ರ ಅಚ್ಚಾಗಿದೆ. ಬರಹವು ತಾಣದ ಬ್ರೇಕಿಂಗ್ ನ್ಯೂಸ್ ವಿಭಾಗದಲ್ಲಿ ಅಡಕವಾಗಿದೆ

ವಿಜಯ ಕರ್ನಾಟಕಬಿಟ್ಟ ಒಂದು ವರ್ಷದಲ್ಲಿ…!

ಇಂದಿಗೆ ಬರೋಬ್ಬರಿ ಒಂದು ವರ್ಷವಾಯಿತು!
ಹಿಂದಿನ ವರ್ಷ ಇದೇ ದಿನ ನಾನುವಿಜಯ ಕರ್ನಾಟಕಪತ್ರಿಕೆಗೆ ರಾಜೀನಾಮೆ ಕೊಟ್ಟು ಹೊರಬಿದ್ದಿದ್ದು. ಒಂದು ವರ್ಷ ಅದೆಷ್ಟು ಬೇಗ ಸರಿದು ಹೋಯಿತು?! ಇಂದಿಗೆ ನಿಂತು ಕಳೆದ ಮುನ್ನೂರ ಅರವತ್ತೈದು ದಿನಗಳನ್ನು ರಿವರ್ಸ್ ಗಿಯರ್್ನಲ್ಲಿ ಹೋಗಿ ತಟ್ಟಿ ಬಂದರೆ ಎಲ್ಲವೂ ತೀರಾ ವಿಚಿತ್ರವೆನಿಸುತ್ತಿದೆ. ಏಕೋ ರಾನನ್ ಕೀಟಿಂಗ್್ನ ”I believe I can fly’ ಹಾಗೂ ‘Life is a roller-coasterಹಾಡು ನೆನಪಾಗುತ್ತಿದೆ. ತನ್ನ ಜೀವನದಲ್ಲಿ ಒಂದು ವರ್ಷದಲ್ಲಿ ನಡೆದ ವಿದ್ಯಮಾನ, ಪ್ರಸಂಗಗಳನ್ನು ಮೆಲುಕು ಹಾಕಿದರೆ ಜೀವನದ ಅಸಂಖ್ಯ ಸಾಧ್ಯತೆ, ಅಗಾಧ ವಿಸ್ತಾರ, ಹರವು, ಅದು ನೀಡುವ ಅವಕಾಶಗಳಿಂದಾಗಿ ಬದುಕಿನ ಮೇಲೆ ವಿಶ್ವಾಸ, ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ. ಅವಧಿಯಲ್ಲಿ ನನ್ನವರೆನ್ನುವವರು ನಡೆದುಕೊಂಡ ರೀತಿಯಿಂದ ಮಾನವ ಸಂಬಂಧಗಳು ಹೊರಳುವ, ಮಗ್ಗಲು ಬದಲಿಸುವ, ನಿಜ ಸ್ವರೂಪ ಪ್ರದರ್ಶಿಸುವ ಹಾಗೂ ಮೂಲಕ ಸಂಬಂಧಗಳ ಸಂಕೀರ್ಣತೆ, ಶಿಥಿಲತೆ ಹಾಗೂ ಗಟ್ಟಿತನ ಅರಿಯಲು ಸಹಾಯಕವಾಗಿದೆ. ಬದುಕು ಸಾಕಷ್ಟು ಚಾಣ ತಿಂದಿದೆ. ಹದವಾಗಿದೆ. ಮೊದಲಿಗಿಂತ ಜೀವನವನ್ನು, ಮನುಷ್ಯರನ್ನು ಹೆಚ್ಚು ಪ್ರೀತಿಸಲಾರಂಭಿಸಿದ್ದೇನೆ. ಅದಕ್ಕಾಗಿ ಇಂದು ಬೆಳಿಗ್ಗೆ ಬೆಳಗ್ಗೆಯೇ ಒಂದು ಟ್ವೀಟ್ ಮಾಡಿದೆ- ‘Be thankful to problems. If they were to be less difficult, someone with lesser ability might have done your job” ಆಗೋದೆಲ್ಲ ಒಳ್ಳೆಯದಕ್ಕೇ ಆಯಿತು ಅಂತಾರಲ್ಲ, ನನ್ನ ವಿಷಯದಲ್ಲಿ ಮಾತ್ರ ಆಗಿದ್ದೆಲ್ಲ ಭಾಳ ಭಾಳ ಒಳ್ಳೆಯದೇ ಆಯಿತು ಎನ್ನಬಹುದು. ಆಗುವುದಕ್ಕೂಮತ್ತುಆಗಿದ್ದಕ್ಕೂನಡುವೆ ನಾವು ಹೇಗೆ ವರ್ತಿಸುತ್ತೇವೆ, ಸಮಸ್ಯೆಯನ್ನು ಯಾವ ರೀತಿ ನೋಡುತ್ತೇವೆ ಹಾಗೂ ಸ್ವೀಕರಿಸುತ್ತೇವೆ ಎಂಬುದು ಬಹಳ ಮುಖ್ಯ.
ಹಾಗೆ ನೋಡಿದರೆ ನಾನುವಿಜಯ ಕರ್ನಾಟಕಕ್ಕೆ ರಾಜೀನಾಮೆ ನೀಡಬೇಕಾದ ಸಂದರ್ಭ, ಸನ್ನಿವೇಶ ನನಗೇನೂ ಅನಿರೀಕ್ಷಿತವಾಗಿರಲಿಲ್ಲ. ಹೀಗಾಗಿ ಅದು ನನ್ನ ಪಾಲಿಗೆ ಆಘಾತಕಾರಿ ಬೆಳವಣಿಗೆಯೂ ಆಗಿರಲಿಲ್ಲ. ವಿಪರ್ಯಾಸವೆಂದರೆ ಹಿಂದಿನ ದಿನ, ಅಂದರೆ ಡಿಸೆಂಬರ್ 7 ರಂದು ಪ್ರತಾಪ ಸಿಂಹ ವಿಷಯದ ಬಗ್ಗೆ ಅರ್ಧ ಗಂಟೆ ನನ್ನ ಜತೆಗೆ ಚರ್ಚಿಸಿದ್ದ. ‘ಸಾರ್, ಇಂಥ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, ರಾಜೀನಾಮೆ ಕೊಟ್ಟುಬಿಡಿ, ನಿಮ್ಮ ಜತೆ ನಾವಿದ್ದೇವೆಎಂದು ಪ್ರತಾಪ ಹೇಳಿದ್ದ. ‘ ಕಾಲ ಬರಲಿದೆ. ಆಗ ಯೋಚನೆ ಮಾಡೋಣ ಬಿಡುಎಂದು ಹೇಳಿದ್ದೆ. ಆದರೆ ಕಾಲಮರು ದಿನವೇ ಬಂದುಬಿಡುತ್ತದೆ ಎಂದು ನಾನಂತೂ ನಿರೀಕ್ಷಿಸಿರಲಿಲ್ಲ.
ಯಾಕೆಂದರೆ
ನಾನು ರಾಜೀನಾಮೆ ನೀಡಿದ ಹಿಂದಿನ ದಿನ ಕೆಲಸ ಮುಗಿಸಿ ರಾತ್ರಿ ಹನ್ನೊಂದು ಗಂಟೆಗೆ ಮನೆಗೆ ಹೋಗಬೇಕೆಂದು ಕಚೇರಿಯಿಂದ ಹೊರಬರುವಷ್ಟರಲ್ಲಿ ಒಂದು ಸುದ್ದಿ ಬಂತು. ಹಿರಿಯ ಪತ್ರಕರ್ತ ಸಂತೋಷಕುಮಾರ್ ಗುಲ್ವಾಡಿ ನಿಧನರಾದರಂತೆ ಎಂದು ನಮ್ಮ ವರದಿಗಾರರು ಹೇಳಿದರು. ಗುಲ್ವಾಡಿಯವರ ಬಗ್ಗೆ ಒಂದು ಸೂಕ್ತ ಶ್ರದ್ಧಾಂಜಲಿ ಲೇಖನ ಬರೆಯದಿದ್ದರೆ ಹೇಗೆ, ಅವರಿಗೊಂದು ಪುಟ ಮೀಸಲಿಡದಿದ್ದರೆ ಹೇಗೆ ಎಂದೆನಿಸಿ, ವಾಪಸ್ ನನ್ನ ಕ್ಯಾಬಿನ್್ಗೆ ಬಂದು ಗುಲ್ವಾಡಿ ಬಗ್ಗೆ ಬರೆಯಲಾರಂಭಿಸಿದೆ. ಅವರ ನಿಧನ ವಾರ್ತೆ, ವಿಶೇಷ ಲೇಖನ, ಸಮಗ್ರ ಬದುಕು ಮತ್ತು ಅಪರೂಪದ ಫೋಟೊಗಳನ್ನು ಒಳಗೊಂಡ ಇಡೀ ಪುಟ ಸಿದ್ಧಪಡಿಸಿದೆವು. ಎಲ್ಲ ಕೆಲಸ ಮುಗಿಸಿ ಮನೆಗೆ ಬರುವಾಗ ರಾತ್ರಿ ಒಂದು ಗಂಟೆಯಾಗಿತ್ತು. ಅಂದರೆ ರಾಜೀನಾಮೆ ನೀಡುವ ಹಿಂದಿನ ದಿನದವರೆಗೂ ಪತ್ರಿಕೆಯಲ್ಲಿ ನನ್ನ ಪಾಲ್ಗೊಳ್ಳುವಿಕೆ ಸಂಪೂರ್ಣವಾಗಿತ್ತು.
ಟೈಮ್ಸ್ ಆಫ್ ಇಂಡಿಯಾಮ್ಯಾನೇಜ್್ಮೆಂಟ್ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಗಳಿವೆ. ಕಲ್ಪನೆ ಪತ್ರಕರ್ತರಲ್ಲೂ ಮನೆಮಾಡಿದೆ. ಅದೇನೆಂದರೆ, ಟೈಮ್ಸ್ ಮ್ಯಾನೇಜ್್ಮೆಂಟ್ ಕಣ್ಣಲ್ಲಿ ಸಂಪಾದಕರು ಲೆಕ್ಕಕ್ಕಿಲ್ಲವಂತೆ, ಸಂಪಾದಕರನ್ನು ಕೆಟ್ಟದಾಗಿ ನಡೆಸಿಕೊಳ್ತಾರಂತೆ, ಸಂಪಾದಕರಿಗಿಂತ ಮಾರ್ಕೆಟಿಂಗ್್ನವರದೇ ದರ್ಬಾರಂತೆಇತ್ಯಾದಿ. ಇವೆಲ್ಲ ಶುದ್ಧ ಬೊಗಳೆ. ವಿಜಯ ಕರ್ನಾಟಕ ಟೈಮ್ಸ್ ಮ್ಯಾನೇಜ್್ಮೆಂಟ್ ಅಧೀನಕ್ಕೆ ಒಳಪಟ್ಟ ನಂತರ ನಾನು ಐದು ವರ್ಷ ಪ್ರಧಾನ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಅವಧಿಯಲ್ಲಿ ಒಂದೇ ಒಂದು ಸಲ ನನಗಾಗಲಿ, ಸಂಪಾದಕ ಹುದ್ದೆಯ ಗೌರವ, ಸೆಡವಿಗಾಗಲಿ ಕುಂದು ಉಂಟಾಗುವ ಘಟನೆ, ಪ್ರಸಂಗ ಜರುಗಲಿಲ್ಲ. ಟೈಮ್ಸ್ ಮ್ಯಾನೇಜ್್ಮೆಂಟ್ ತೆಕ್ಕೆಗೆ ವಿಕ ಸೇರಿದ ಸಂದರ್ಭದಲ್ಲಿ ದಿಲ್ಲಿಯ ತಮ್ಮ ಮನೆಗೆ ಮಾಲೀಕರಾದ ಸಮೀರ್ ಜೈನ್ ನನ್ನನ್ನು ಕರೆಯಿಸಿಕೊಂಡಿದ್ದರು. ಮಧ್ಯಾಹ್ನದ ಊಟ ಸವಿಯುತ್ತಾ ಮೂರು ಗಂಟೆ ಕಾಲ ಅವರೊಂದಿಗೆ ಕಳೆದ ಕ್ಷಣಗಳನ್ನು ಮರೆಯುವಂತೆಯೇ ಇಲ್ಲ. ಟೈಮ್ಸ್ ಸಂಸ್ಥೆಯಲ್ಲಿ ಎಲ್ಲವೂ ಕರಾರುವಾಕ್ಕು. ಮಧ್ಯೆ ಇರುವ ಜನರಿದ್ದಾರಲ್ಲ, ಅವರದೇ ಕಿರಿಕ್ಕು. ನನ್ನ ವಿಷಯದಲ್ಲಾಗಿದ್ದೂ ಇದೇ. ಚಿನ್ನನ್್ದಾಸ್ ನಂತರ ವಿಜಯ ಕರ್ನಾಟಕದ ಮ್ಯಾನೇಜ್್ಮೆಂಟ್ ಮುಖ್ಯಸ್ಥನಾಗಿ ಬಂದ ತೀರ ಸಣ್ಣ ಮನಸ್ಸಿನ ವ್ಯಕ್ತಿಯೊಬ್ಬ ನನ್ನ ಜನಪ್ರಿಯತೆ ಸಹಿಸದಾದ. ಆತ ಮೊದಲ ದಿನದಿಂದಲೇ ಕ್ಯಾತೆ ತೆಗೆಯಲಾರಂಭಿಸಿದ. ಅಂಥವನ ಜತೆ ಎರಡು ವರ್ಷ ಕಾಲ ದೂಡಿದ್ದೊಂದು ಕತೆ. ಇರಲಿ. ಇದೊಂದೇ ಕಾರಣದಿಂದ ನಾನು ಹೊರಬಂದೆ ಹೊರತು, ಅದಕ್ಕೆ ಪತ್ರಿಕೆಯಾಗಲಿ, ಸಂಸ್ಥೆಯಾಗಲಿ, ಮತ್ತ್ಯಾವುದೇ ಸಂಗತಿಗಳೂ ಕಾರಣ ಅಲ್ಲ. ಆತ ಅಪೇಕ್ಷಿಸಿದಂತೆ ಅವನ ಓಲೈಕೆ, ಬಕೆಟ್ ಹಿಡಿಯುವಿಕೆ, ಚಮಚಾಗಿರಿ ಮಾಡಿದ್ದರೆ, ನಿರಾತಂಕವಾಗಿ ಅಲ್ಲಿಯೇ ಮುಂದುವರಿಯಬಹುದಿತ್ತು! ಇಷ್ಟಾಗಿಯೂ ವ್ಯಕ್ತಿಯನ್ನು ನಾನು ಸದಾ ಸ್ಮರಿಸುತ್ತೇನೆ. ಒಂದು ರೀತಿಯಲ್ಲಿ ನನಗೆ ಆತ ಪ್ರಾತಃ ಸ್ಮರಣೀಯ. ಕಾರಣ ಆತ ನನ್ನನ್ನು ಕೆಟ್ಟದ್ದಾಗಿ ನಡೆಸಿಕೊಳ್ಳದಿದ್ದರೆ ನಾನುವಿಕವನ್ನು ಬಿಡುತ್ತಿರಲಿಲ್ಲ. ವಿಕಕ್ಕಿಂತ ಮಿಗಿಲಾದ ಈಗಿನ ಜವಾಬ್ದಾರಿಯೂ ಸಿಗುತ್ತಿರಲಿಲ್ಲ. ಆತನ ಹೊಟ್ಟೆ ಸದಾ ತಣ್ಣಗಿರಲಿ!
ವಿಕದೊಂದಿಗಿನ ಸಂಬಂಧ ಅನೂಹ್ಯವಾದುದು. ಪತ್ರಿಕೆಯನ್ನು ನಂಬರ್ ಒನ್ ಮಾಡಿದ್ದು ನಾನೇ ಎಂಬ ಭ್ರಮೆ ನನಗೆ ಇಲ್ಲ. ಅದು ನಂ.1 ಆದಾಗ ನಾನು ಪತ್ರಿಕೆಯ ಪ್ರಧಾನ ಸಂಪಾದಕನಾಗಿದ್ದೆ ಎಂದು ಭಾವಿಸುವುದು  ಹೆಚ್ಚು ಸೂಕ್ತ, ಸಮರ್ಪಕ. ‘ವಿಕಕ್ಕೆ ನಾನೇನು ಮಾಡಿದೆ ಎಂಬುದು ಮುಖ್ಯವಲ್ಲ. ಅದು ಓದುಗರಿಗೆ ಗೊತ್ತಿದೆ. ಆದರೆ ನನ್ನನ್ನು ರೂಪಿಸಿದ್ದು ಮಾತ್ರವಿಕವೇ. ಅದಿಲ್ಲದಿದ್ದರೆ ನಾನು ಹೀಗೆ ಇಂದು ಇರುತ್ತಿರಲಿಲ್ಲ. ನಾನು ಈಗವಿಕಬಿಟ್ಟಿರಬಹುದು. ಆದರೆ ಅಸಂಖ್ಯ ಓದುಗರುವಿಕದೊಂದಿಗಿನ ನನ್ನ ಸಂಬಂಧವನ್ನು ಕಳಚಿದ್ದನ್ನು ಒಪ್ಪಿಕೊಳ್ಳಲು ಇನ್ನೂ ತಯಾರಿಲ್ಲ. ನಾನು ಗುಂಗಿನಿಂದ ಬಂದು ಬಹಳ ದಿನಗಳಾದವು. ಆದರೆ ಕೆಲ ಓದುಗರಿಗೆ ಮಾತ್ರ ಇನ್ನೂ ಅರಗಿಸಿಕೊಳ್ಳಲು ಸಾಧ್ಯಾವಾಗುತ್ತಿಲ್ಲ. ನಿಧಾನಕ್ಕೆ ಎಲ್ಲವೂ ಬದಲಾಗುತ್ತದೆ. ಬೆಂಗಳೂರಿನಿಂದ ಕುಮಟಾಕ್ಕೋ, ಗುಲ್ಬರ್ಗಕ್ಕೋ ಮಂಗಳೂರಿಗೋ ಬಸ್ಸಿನಲ್ಲಿ ಹೋಗಲು ರಿಸರ್ವೇಶನ್ ಮಾಡಿಸಿರುತ್ತೇವೆ ಅಂತಿಟ್ಟುಕೊಳ್ಳಿ. ಇಲ್ಲಿಂದ ಅಲ್ಲಿಗೆ ಹೋಗುವ ತನಕ ಮಾತ್ರ ಸೀಟು ನಮ್ಮದು. ಆನಂತರ ಸೀಟಿನಲ್ಲಿ ಯಾರೋ ಬಂದು ಕುಳಿತುಕೊಳ್ಳುತ್ತಾರೆ. ಆದರೆ ಪಯಣ ಮಾತ್ರ ಮುಂದುವರಿಯುತ್ತದೆ, ಮುಂದುವರಿಯಬೇಕು. ಅದೇ ಜೀವನ ತಾನೆ? ಇಡೀ ಪ್ರಸಂಗವನ್ನು ಭಾವದಿಂದ ತೆಗೆದುಕೊಂಡಿರುವುದರಿಂದ ಬೇಸರದ ಪ್ರಶ್ನೆಯೇ ಮೂಡಿಲ್ಲ.
ಅಷ್ಟಕ್ಕೂ ಬೇಸರವಾಗಲು ಕಾರಣಗಳಾದರೂ ಏಕೆ? ರಾಜೀನಾಮೆ ನೀಡಿ ಬರುತ್ತಿರುವಂತೆ ನನ್ನ ಪತ್ನಿಗೆ ಫೋನ್್ನಲ್ಲಿ ತಿಳಿಸಿದರೆ, ‘ಒಳ್ಳೆಯದಾಯಿತು. ನಿಮಗೂ ವಿಶ್ರಾಂತಿ ಅಗತ್ಯವಿತ್ತು ಬಿಡಿಎಂದಳು. ನಾನು ಎರಡನೆ ಕರೆ ಮಾಡಿದ್ದುವಿಜಯ ಕರ್ನಾಟಕಕ್ಕೆ ನನ್ನನ್ನು ಪ್ರಧಾನ ಸಂಪಾದಕನನ್ನಾಗಿ ಕೂರಿಸಿದ ವಿಜಯ ಸಂಕೇಶ್ವರರಿಗೆ. ನನ್ನದು ಅವರದು ಅವಿನಾಭಾವ ಸಂಬಂಧ. ಏನಿಲ್ಲವೆಂದರೂ ನೂರಾರು ವೇದಿಕೆಗಳಲ್ಲಿ ಅವರನ್ನು ಸ್ಮರಿಸಿಕೊಂಡಿರಬಹುದು. ನಾನೇನಾದರೂ ಪತ್ರಿಕಾ ಮಾಲೀಕರು- ಸಂಪಾದಕರ ನಡುವಿನ ಸಂಬಂಧದ ಬಗ್ಗೆ ಬರೆದರೆ ಅವರು, ಅವರ ಮಗ ಆನಂದ ಸಂಕೇಶ್ವರ್ ಹಾಗೂ ನನ್ನ ಕುರಿತೇ ಬರೆದುಕೊಳ್ಳಬೇಕು. ‘ವಾಷಿಂಗಟನ್ ಪೋಸ್ಟ್್ಪತ್ರಿಕೆಯ ಜನಪ್ರಿಯ ಹಾಗೂ ಘನಂಧಾರಿ ಸಂಪಾದಕ ಬೆನ್ ಬ್ರಾಡ್ಲಿ ತನ್ನ ಆತ್ಮಕತೆ ”A Good Life’ ನಲ್ಲಿ ಬರೆದುಕೊಂಡಿದ್ದಾನೆ- ‘ಕ್ಯಾಥರಿನ್ ಗ್ರಾಹಮ್್ಳಂಥ ಪ್ರಕಾಶಕಿ ಇರುವುದರಿಂದ ಬೆನ್ ಬ್ರಾಡ್ಲಿಯಂಥ ಸಂಪಾದಕ ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಯಿತು. ಇಲ್ಲವಾದರೆ ನಾನ್ಯಾವ ಸೀಮೆ ಸಂಪಾದಕ?’ ವಿಜಯಸಂಕೇಶ್ವರ ಬಗ್ಗೆ ಸಹ ಮಾತು ಅನ್ವಯ, ಅನ್ವರ್ಥಕ.
ಸಂಕೇಶ್ವರ ಅವರಿಗೆ ಫೋನ್ ಮಾಡಿದಾಗ ಅವರು ಸೇಲಮ್್ನಲ್ಲಿದ್ದರು. ಮರುದಿನ ಭೇಟಿಯಾಗೋಣ ಎಂದರು. ಡಿಸೆಂಬರ್ 9 ರಂದು ನಾನು, ವಿಜಯ ಸಂಕೇಶ್ವರ ಏಟ್ರಿಯಾ ಹೋಟೆಲ್್ನಲ್ಲಿ ಉಪಾಹಾರಕ್ಕೆ ಸೇರಿದೆವು. ಅವರ ಪತ್ನಿಯೂ ಇದ್ದರು. ಉಪಾಹಾರ ಮುಗಿಸಿ ಮೇಲೇಳುವ ಹೊತ್ತಿಗೆ ಸಂಕೇಶ್ವರರು, ‘ನನ್ನ ಹೊಸ ಪತ್ರಿಕೆಗೆ ಇಂದಿನಿಂದಲೇ ಕೆಲಸ ಶುರು ಮಾಡಿ. ನಿಮಗೆ ಮುಕ್ತ ಆಹ್ವಾನ ಕೊಡುತ್ತಿದ್ದೇನೆಎಂದರು.ಸಂಕೇಶ್ವರರನ್ನು ಭೇಟಿ ಮಾಡಲು ಹೋಗುವಾಗ, ಪರಿಚಿತರಾದವರೊಬ್ಬರು ಫೋನ್ ಮಾಡಿ, ‘ನಾಡಿದ್ದು (ಡಿ.11) ರಾಜೀವ್ ಚಂದ್ರಶೇಖರ್ ನಿಮ್ಮನ್ನು ಕಾಣಬಯಸಿದ್ದಾರೆಎಂದು ಹೇಳಿದರು. ಸಂಕೇಶ್ವರರನ್ನು ಭೇಟಿ ಮಾಡಿ ವಾಪಸ್ ಬರುತ್ತಿರುವಾಗ ಆತ್ಮೀಯರೊಬ್ಬರು ಫೋನ್ ಮಾಡಿನಾಳೆ ಡಿಸೆಂಬರ್ 10 ರಂದು ಸಾಯಂಕಾಲ ಉದಯವಾಣಿ ಪತ್ರಿಕೆ ಮಾಲೀಕರಾದ ಗೌತಮ್ ಪೈ ಜತೆಗೆ ಮೀಟಿಂಗ್ ನಿಶ್ಚಯವಾಗಿದೆಎಂದರು.ಡಿಸೆಂಬರ್ 10 ರಂದು ವಿಂಡ್ಸರ್ ಮ್ಯಾನರ್ ಹೋಟೆಲ್್ನಲ್ಲಿ ನಾನು ಹಾಗೂ ಗೌತಮ್ ಪೈ ಭೇಟಿಯಾದೆವು. ಅವರು ಅದೇ ರಾತ್ರಿ ಅಮೆರಿಕಕ್ಕೆ ಹೋಗುವವರಿದ್ದರು. ಪತ್ರಿಕಾ ಮಾಲೀಕರ ಪೈಕಿ ಅತ್ಯಂತ ಅಪರೂಪದ ವ್ಯಕ್ತಿ ಗೌತಮ್. ಮಿತಭಾಷೀ ಆದರೆ ಸ್ಪಷ್ಟ ವಿಚಾರ. ಪತ್ರಿಕಾ ಮಾಲೀಕನೆಂಬ ಪೊಗರು, ಪೊಂಚು ಇಲ್ಲ. ‘highly unassuming’ ಅಂತಾರಲ್ಲ ಹಾಗೆ. ಹೊರ ಪ್ರಪಂಚವನ್ನು ಚೆನ್ನಾಗಿ ಬಲ್ಲ, ತುದಿ ಬೆರಳಲ್ಲಿ ವಿಷಯಗಳನ್ನಿಟ್ಟುಕೊಂಡಿರುವ ಗೌತಮ್, ಆದರೆ ಹೊರಗೆ ಅಷ್ಟಾಗಿ ತೆರೆದುಕೊಂಡವರಲ್ಲ. ಎಲ್ಲ ಪತ್ರಿಕೆಯ ಸುದ್ದಿ ಮನೆಯಲ್ಲಿ ಅವರ ಫೋಟೋ ಸಹ ಇದ್ದಂತಿಲ್ಲ. ಆದರೆ ಗೌತಮ್ ಪ್ರತಿಯೊಂದು ಸಂಗತಿಗಳಲ್ಲೂ ವಿಶೇಷ ಕುತೂಹಲವಿಟ್ಟುಕೊಂಡಿರುವ, ಪತ್ರಿಕೆಯನ್ನು ಕಟ್ಟುವಲ್ಲಿ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ, ಯಾರಾದರೂ ಇಷ್ಟಪಡುವ  ಸಜ್ಜನ. ಅಂದು ನಮ್ಮಿಬ್ಬರ ಮಧ್ಯೆ ಮಾತುಕತೆ ಹರಡಿಕೊಂಡು ಒಂದು ಗಂಟೆಯಾದ ಬಳಿಕ ಗೌತಮ್ ತಮ್ಮ ಐಪ್ಯಾಡ್ ಕವರ್್ನಿಂದ ಒಂದು ಲಕೋಟೆ ತೆಗೆದು, ‘ಇದು ನಿಮ್ಮ ಆಫರ್ ಲೆಟರ್. ಯಾವಾಗ ಸೇರ್ತೀರಿ? ಆದಷ್ಟು ಬೇಗ ಸೇರ್ತೀರಿ ಅಂತ ಅಂದುಕೊಂಡಿದ್ದೇನೆಎಂದರು. ಅವರು ಹೋದ ಬಳಿಕ ಕವರ್ ಒಡೆದು ನೋಡಿದೆ. ‘ಎಡಿಟೋರಿಯಲ್ ಡೈರೆಕ್ಟರ್್ಎಂಬ ಡೆಸಿಗ್ನೇಶನ್ ಕೊಟ್ಟು ಕೆಲಸಕ್ಕೆ ಆಮಂತ್ರಣ ನೀಡಿದ್ದರು.
ಗೌತಮ್ ಪೈ ಅವರನ್ನು ಭೇಟಿ ಮಾಡಿದ ಮರುದಿನವೇ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದೆ. ಕಳೆದ ಹದಿನಾಲ್ಕು ವರ್ಷಗಳಿಂದ ಅವರು ಪರಿಚಿತರು. ನಾವಿಬ್ಬರೂ ಹಲವಾರು ಸಂದರ್ಭಗಳಲ್ಲಿ ವಿಚಾರ ವಿನಿಮಯ ಮಾಡಿಕೊಂಡವರು. ರಾಜೀವ್ ಅವರ ವೇಗ, ಪಾದರಸದಂಥ ವ್ಯಕ್ತಿತ್ವ, ದೂರದೃಷ್ಟಿತ್ವ ಎಂಥವರನ್ನಾದರೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅವರಲ್ಲಿ ಯಾರಾದರೂ ತಕ್ಷಣ ಗುರುತಿಸುವ ಅಂಶವೇನೆಂದರೆ ಅವರು ನಿಮಗಿಂತ ಕನಿಷ್ಠ ಒಂದು ವಾರ ಮುಂದಿರುತ್ತಾರೆ. ನನಗಿಂತ ಒಂದು ವರ್ಷ ಹಿರಿಯರಾದ ರಾಜೀವ ಅವರ ಸಾಧನೆ ಅಸಾಮಾನ್ಯ. ಬರೀ ಇಪ್ಪತ್ತು ನಿಮಿಷಗಳಲ್ಲಿ ನಮ್ಮ ಮಾತುಕತೆ ಮುಗಿದುಹೋಯಿತು. ಅವರು ಕೊಟ್ಟ ಆಫರ್ ಹೇಗಿತ್ತೆಂದರೆ ಅದು ಯಾವುದೇ ಪತ್ರಕರ್ತನಿಗೆ ಜೀವನದಲ್ಲಿ ಪದೇ ಪದೆ ಸಿಗುವಂಥದ್ದಲ್ಲ! ಜೀವನದಲ್ಲಿ ಹೆಚ್ಚೆಂದರೆ ಒಂದು ಸಲ ಮಾತ್ರ ಸಿಗಬಹುದು! ಹಾಗಿತ್ತು.
ಹತ್ತು ವರ್ಷ ನನಗೆ ಹಾಗೂ ನನ್ನ ಮಗನಿಗೆ ಸಿಗದೇ ಬರೀ ವಿಜಯ ಕರ್ನಾಟಕದಲ್ಲೇ ಕಳೆದಿರಿ. ನಿಮ್ಮ ನಿರುದ್ಯೋಗ ಪರ್ವವನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆಎಂದು ನಾನು ರಾಜೀನಾಮೆ ಕೊಟ್ಟ ದಿನ ವಿಜೃಂಭಿಸಿ ನನ್ನ ಪತ್ನಿ ಸಂಭ್ರಮಪಟ್ಟಿದ್ದಳು.
ಆದರೆ ರಾಜೀನಾಮೆ ಕೊಟ್ಟು ಇನ್ನೂ ಮೂರು ದಿನಗಳಾಗಿರಲಿಲ್ಲ. ಆಗಲೇ ಮೂರು ಕೆಲಸಗಳು ಅರಸಿಕೊಂಡು ಬಂದಿದ್ದವು. ನಾನು ಅಕ್ಷರಶಃ problem of plenty ಅಂತಾರಲ್ಲ, ಅಂಥ ಸಂಕಟ ಅನುಭವಿಸಿದೆ. ಸಂಕೇಶ್ವರರು ಹಾಗೂ ಗೌತಮ್ ಪೈ ನನ್ನ ನಿರ್ಧಾರದಿಂದ ಏನಂದುಕೊಂಡರೋ ಏನೋ, ಆದರೆ ನಾನು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕತ್ವವನ್ನು ವಹಿಸಿಕೊಂಡೆ.
ನಾನು ರಾಜೀನಾಮೆ ನೀಡಿ ಒಂದು ಗಂಟೆಯೊಳಗೆ ನನ್ನ ಸಹೋದ್ಯೋಗಿ ಮಿತ್ರರಾದ ಪಿ. ತ್ಯಾಗರಾಜ್, ಪ್ರತಾಪ ಸಿಂಹ ಹಾಗೂ ರಾಧಾಕೃಷ್ಣ ಭಡ್ತಿ, ಬೇಡ ಬೇಡವೆಂದರೂ ರಾಜೀನಾಮೆ ನೀಡುತ್ತೇವೆಂದು ಹೇಳಿ ಮರು ದಿನವೇ ನೀಡಿಬಿಟ್ಟರು. ಪ್ರತಾಪ್ ಮದುವೆಯಾಗಿ ಬರೀ ಇಪ್ಪತ್ತೊಂದು ದಿನಗಳಾಗಿದ್ದವು! ನಾನೇನಾದರೂ ಪ್ರತಾಪ್ ಜಾಗದಲ್ಲಿದ್ದಿದ್ದರೆ ಅಂಥ ನಿರ್ಧಾರ ತೆಗೆದುಕೊಳ್ಳಲು ಧೈರ್ಯ ಮಾಡುತ್ತಿದ್ದೆನಾ? ಗೊತ್ತಿಲ್ಲಆದರೆ ನನ್ನ ಓದುಗರು ನೀಡಿದ ಪ್ರತಿಕ್ರಿಯೆಯಿದೆಯಲ್ಲ, ಅದು ಮಾತ್ರ ನನ್ನನ್ನು ಹಿತವಾಗಿ ಕದಲಿಸಿಹಾಕಿತು. ಒಬ್ಬರಾ, ಇಬ್ಬರಾ, ಅಸಂಖ್ಯ ಓದುಗರು ನೀಡಿದ ನೈತಿಕ ಬೆಂಬಲ ನನ್ನನ್ನು ಮೂಕವಿಸ್ಮಿತನನ್ನಾಗಿಸಿತು. ಫೇಸ್್ಬುಕ್, ನನ್ನ ವೆಬ್್ಸೈಟ್್ಗೆ ಹರಿದು ಬಂದ ಪ್ರೀತಿಯ ಬೆಂಬಲವನ್ನು ವರ್ಣಿಸಲಸಾಧ್ಯ. ಮೈಸೂರಿನ ಟೇಲರ್ ವೆಂಕಟೇಶ ಬಾಬು ನಮ್ಮ ಮನೆಗೆ ಬಂದುನೀವು ರಾಜೀನಾಮೆ ಕೊಟ್ಟಿದ್ದೀರಿ ಅಂತ ಗೊತ್ತಾಯಿತು. ನಿಮ್ಮ ಲೇಖನ, ಪತ್ರಿಕೆಯಿಂದ ನಾನು, ನನ್ನ ಮಗ ಉಪಕೃತರಾಗಿದ್ದೇವೆ, ತಪ್ಪು ತಿಳಿಯುವುದಿಲ್ಲ ಅಂದ್ರೆ ಹಣ ಇಟ್ಕೊಳ್ಳಿ, ಖರ್ಚಿಗೆ ಇರಲಿಎಂದಾಗ ನಾನು ಮಾತು ಕಳೆದುಕೊಂಡಿದ್ದೆ. ತೀರಾ ನೋವೆನಿಸಿದ ಅಂಶವೆಂದರೆ ಆತ್ಮೀಯರೆನಿಸಿಕೊಂಡ ಕೆಲವರು ಸುಖಾಸುಮ್ಮನೆ ನಡೆಸಿದ ಚಾರಿತ್ರ್ಯಹರಣ, ಅನಗತ್ಯ ಟೀಕೆ. ‘ಗೂಳಿ ಬಿದ್ದಾಗ ಆಳಿಗೊಂದು ಕಲ್ಲು’  ಎಂಬಂತೆ ಕೆಲವರು ಕಲ್ಲು ಹೊಡೆದು ಖುಷಿಪಟ್ಟರು.
ಬೇಸರವಾಗಲಿಲ್ಲ. ಮನುಷ್ಯ ಸ್ವಭಾವಕ್ಕೆ ವ್ಯತಿರಿಕ್ತವಾದದ್ದೇನನ್ನೂ ಅವರು ಮಾಡಿರಲಿಲ್ಲ. ಪ್ರಾಯಶಃ ನಾನೇ ಅವರನ್ನು ತಪ್ಪಾಗಿ ಭಾವಿಸಿದ್ದೆ. ಕತ್ತಲನ್ನು ಬೆಳಕೆಂದು ಭ್ರಮಿಸಿದ್ದು ನನ್ನದೇ ತಪ್ಪು.ಬದುಕು ಮುಂದಕ್ಕೆ ಸಾಗಲೇಬೇಕು. ಈಗ ಎರಡೆರಡು ಜವಾಬ್ದಾರಿಪತ್ರಿಕೆ ಹಾಗೂ ಟಿವಿ. ದಿನದಲ್ಲಿ ಬರೀ ಹದಿನೆಂಟು ಗಂಟೆ ಕೆಲಸ! ಉಳಿದ ಸಮಯವನ್ನು ಮಲಗಿ ವ್ಯರ್ಥಗೊಳಿಸುತ್ತಿದ್ದೇನೆ.
ಒಂದು ವರ್ಷ ಕಳೆದಿದ್ದೆ ಗೊತ್ತಾಗಲಿಲ್ಲ!
 

No comments:

Post a Comment