Sunday 6 March 2011

Naa Baredaa Kategalu

Naa Baredaa Kategalu






ಅವಳ ಕಣ್ಣಲ್ಲೂ ಅದೇ ಚೆಲುವೆ ಕಂಡೆ.

ನೋವಿನ ಮೋಹ...                                   
 ನನಗೆ "ಹಾಡು" ಕಾಡುತ್ತವೆ...
ಆಗ
"ನೋವು" ಮೋಹವಾಗುತ್ತದೆ...
ನನಗೆ
ಹಾಡು ಕಾಡುತ್ತವೆ...
ನೋವು
ನನ್ನ ಸ್ನೇಹಿತವಾಗ್ತದೆ...
ನನಗೆ
ಹಾಡು ಕಾಡುತ್ತವೆ...
ಮರುಕ್ಷಣವೇ ಅವಳ ನೆನಪಾಗುತ್ತದೆ....
ನನಗೆ
ಹಾಡು ಕಾಡುತ್ತವೆ...
ಅವಳು
ಬಿಟ್ಟು ಹೋದ ನೋವು ಮತ್ತೆ
ಕಾಡುತ್ತದೆ
...
ನನಗೆ
ಹಾಡು ಕಾಡುತ್ತವೆ...
ಆಗ
"ನೋವು" ಮತ್ತೆ ಮೋಹವಾಗುತ್ತದೆ...
ಮತ್ತೆ
ನೋವಾಗುತ್ತದೆ.. ಮತ್ತೆ ಮೋಹವಾಗುತ್ತದೆ....
ಕಳಚಿಕೊಳ್ಳದ "ಪ್ರೀತಿ
" ಹಾಗೆ...

ನೀಲಾಕಾಶ...
                                                                                                                          
ನೀಲಾಕಾಶಕ್ಕೆ ಮನಸೋತೆ.
ಅವಳ
ಕಣ್ಣಲ್ಲೂ ಅದೇ ಚೆಲುವೆ ಕಂಡೆ.
ನೀಲಾಕಾಶಕ್ಕೆ ಮನನೊಂದೆ.
ಅಲ್ಲಿ
ಕಂಡ ಮೋಡ. ಅದರಿಂದ
ಉದುರಿದ
ಹನಿ..ಹನಿ ನೀರು
ಅವಳ ಕಣ್ಣಲ್ಲೂ
ಕಂಡೆ.
ನೀಲಾಕಾಶಕ್ಕೆ ಮನಸೋತೆ.
ಅವಳಿಗೂ
ಮನಸೋತೆ.
ಆದ್ರೆ
, ಅವಳು ಈಗ
ನಿಜಕ್ಕೂ
ಆಕಾಶದಷ್ಟೇ ದೂರ.. ದೂರ. 


.ಚಳಿ...                                                                                                                 
                                                                                                                                                                                                
ಚಳಿ
ನಿನ್ನ ನೆನಪಿಸುತ್ತದೆ
ಆದ್ರೆ
, ಇಲ್ಲಿ ನೀ ಕೇವಲ
ಒಂದು
ಕೊರೆವ ಅನುಭವ...
ಚಳಿ ನಿನ್ನ ನೆನಪಿಸುತ್ತದೆ...
ಹಾಗೇನೆ
ಕಳೆದುಹೋದ
ಮುಂಚಾವು
ಇಲ್ಲಿ ಮತ್ತೆ
ತಾಜಾಗೊಳ್ಳುತ್ತಿದೆ
....
ಚಳಿ ನಿನ್ನ ನೆನಪಿಸುತ್ತಿದೆ...
ಹಾಗೇನೆ
ಗಾಯಗೊಂಡ
ಹೃದಯ
ಇಲ್ಲಿ ಮತ್ತೆ
ಮಿಡಿಯುತ್ತಿದೆ
...
ಚಳಿ ನಿನ್ನ ನೆನಪಿಸುತ್ತಿದೆ...
ಆದ್ರೂ
ನಿನ್ನ ಬೆಚ್ಚನೆಯ
ಪ್ರೀತಿ
ಈಗಲೂ ಕೇವಲ
ಒಂದು
ಕವಿತೆ...


ನಿಲ್ಲದು ವಾಯಲಿನ್... ನುಡಿಸುತ್ತಿದೆ ನಿನ್ನ ನೋವ ನನ್ನ ಹೃದಯದಲ್ಲಿ...
ಆದರೂ
ಕಣ್ಣ ಹನಿ ನಿಲ್ಲದು...

                                                                                                        
ವಾಯಲಿನ್
ವಾಯಲಿನ್ ಅಳುತ್ತಿದೆ ನಿನ್ನ ನೆನೆ, ನೆನೆದು...ದು:ಖದಲ್ಲಿ.
ಆದರೂ
ಬತ್ತದು ನಿನ್ನ ನೋವು.
ವಾಯಲಿನ್ ರೋದಿಸುತ್ತಿದೆ ನಿನ್ನ ಪ್ರೀತಿಯಲ್ಲಿ.
ಆದರೂ
ಮರೆಯಲಾಗದು ನಿನ್ನ ಮೋಸ...
ವಾಯಲಿನ್ ಕೊರೆಯುತ್ತಿದೆ ನನ್ನ ಹೃದಯ.
ಆದರೂ
ಬಿಡದು ನಿನ್ನ ಒಲವು..
ವಾಯಲಿನ್ ಸೋಲುತ್ತಿದೆ ನಿನ್ನ ಮಿಡಿಯಲು.
ಆದರೂ
ಮಾಯವಾಗದು ನಿನ್ನ ಚೆಲುವು.
ನೀ ಮರೆಯಾದರೂ, ನೀ ಮಾಯವಾದರೂ ನಿಲ್ಲದು
ವಾಯಲಿನ್.... 


ಕವಿತೆ...       
                                                                                                                                                                      
ಭಾವನೆಗಳು
ಕವಿತೆಯಾಗಲು ಪ್ರಯತ್ನಿಸಿದವು.
ಆದ್ರೆ
, ಸಾಲುಗಳು ಶಾಯರಿಯಾದವು
ಒಲವು ಚಲುವಾಗಲು ಯತ್ನಿಸಿದವು.
ಆದ್ರೆ
, ಭಗ್ನವಾದವು.
ಕಣ್ಣು ಕಂಬನಿಯಾದವು.
ಆದ್ರೆ
, ಹನಿಗಳು ಕವಿತೆಯಾದವು.